ಗಾಂಜಾ ಮಾರಾಟ ಮಾಡುತಿದ್ದ ವ್ಯಕ್ತಿಯ ಬಂಧನ

Spread the love

ಗಾಂಜಾ ಮಾರಾಟ ಮಾಡುತಿದ್ದ ವ್ಯಕ್ತಿಯ ಬಂಧನ

ಮಂಗಳೂರು : ಮಂಗಳೂರು ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ದಸ್ತಗಿರಿ ಮಾಡುವಲ್ಲಿ ಮಂ. ದಕ್ಷಿಣ ರೌಡಿ ನಿಗ್ರಹದ ದಳದ  ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತನನ್ನು ಬಂದರು ನಿವಾಸಿ ಅಬ್ದುಲ್ ರಹೀಮಾನ್ @ ಕಂಡಿ ರಹೀಂ, 45 ವರ್ಷ ಎಂದು ಗುರುತಿಸಲಾಗಿದೆ.

ದಿನಾಂಕ 04-01-2018 ರಂದು ಮದ್ಯಾಹ್ನ 1-00 ಗಂಟೆಗೆ ಮಂಗಳೂರು ದಕ್ಷಿಣ ಉಪ ವಿಭಾಗ ಮತ್ತು ದಕ್ಷಿಣ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರು, ತನಗೆ ಬಂದ ಮಾಹಿತಿಯಂತೆ , ಎಸಿಪಿ. ರವರು ತನ್ನ ರೌಡಿ ನಿಗ್ರಹ ದಳದ  ಸಿಬ್ಬಂದಿಗಳೊಂದಿಗೆ ಮಂಗಳೂರು ನಗರದ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಗೇಟಿನ  ಬಳಿಯಲ್ಲಿ ಒಬ್ಬನು ಕೆಎ-19-ಇಪಿ-6878 ನಂಬ್ರದ ಕಪ್ಪು ಆಕ್ಟಿವಾ ಸ್ಕೂಟರ್ ಇಟ್ಟು ಕೊಂಡು ಗಿರಾಕಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದಿದ್ದು, ಆತನನ್ನು   ಆತನು ತನ್ನ ಬಳಿ ಒಟ್ಟು 1.170 ಕೆ.ಜಿ. ಗಾಂಜಾವನ್ನು ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲು ಇಟ್ಟುಕೊಂಡಿರುವುದಾಗಿದೆ. ಆತನಲ್ಲಿ ಗಾಂಜಾ, ಮಾರಾಟಕ್ಕಾಗಿ ಉಪಯೋಗಿಸಿದ್ದ ಆಕ್ಟೀವಾ ಸ್ಕೂಟರ್, 2 ಮೊಬೈಲ್ ಪೋನ್ ಗಳು ಮತ್ತು ನಗದು ಹಣ ರೂ, 500/- ನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ರೂ, 50,000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿಯ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ ಈತನು ಚಾಳಿಬಿದ್ದ ಗಾಂಜಾ ಮಾರಾಟ ದಂಧೆ ನಡೆಸುವವನೆಂದು ತಿಳಿದು ಬಂದಿದ್ದು, ಈತನು ಮಂಗಳೂರು ನಗರದ ಬೇರೆ ಬೇರೆ ಠಾಣೆಗಳಲ್ಲಿ   ಗಾಂಜಾ ಮಾರಾಟ ವ್ಯವಹಾರದ ಪ್ರಕರಣದಲ್ಲಿ ಒಳಗೊಂಡಿರುವುದು ಮತ್ತು ವಿಚಾರಣೆ ಎದುರಿಸುತ್ತಿರುವುದು ತಿಳಿದು ಬಂದಿರುತ್ತದೆ.

 ಆರೋಪಿ ಅಬ್ದುಲ್ ರಹೀಮಾನ್@ ಕಂಡಿ ರಹೀಮನ ವಿರುದ್ದ ಕಲಂ 8(ಸಿ), 20(ಬಿ)  ಆಕ್ಟ್ ಪ್ರಕಾರ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 ಮಂ. ದಕ್ಷಿಣ ಉಪ ವಿಭಾಗದ ಎ.ಸಿ.ಪಿ. ರವರ ನೇತ್ರತ್ವದಲ್ಲಿ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.


Spread the love