ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಮಂಗಳೂರು: ನಗರದ ತೊಕ್ಕೊಟ್ಟು ಬಳಿಯಲ್ಲಿ ನಿಷೇಧಿತ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ರೌಡಿ ನಿಗ್ರಹದಳದ ಸಿಬಂದಿಗಳು ಬೇಧಿಸಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ವಾಮಂಜೂರು ನಿವಾಸಿ ಮಹಮ್ಮದ್ ಮುಸ್ತಾಪಾ(21), ಉಳಾಯಿಬೆಟ್ಟು ನಿವಾಸಿ ಹಸನ್ ಅಫ್ರಾನ್ @ ಅಫ್ರಾನ್ @ಅಪ್ಪು (20) ಮತ್ತು ಮೂಡುಶೆಡ್ಡೆ ನಿವಾಸಿ ಫೈಜಲ್ ಅಹಮ್ಮದ್ @ನರಂಬು ಫೈಜಲ್ @ ಪಜ್ಜು (36) ಎಂದು ಗುರುತಿಸಲಾಗಿದೆ.
ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಟಿ ಕೋದಂಡರಾಮ್ ಅವರಿಗೆ ಬಂದ ಖಚಿತ ಮಾಹಿತಿಯಂತೆ, ಬೂದು ಬಣ್ಣದ ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನದಲ್ಲಿ 3 ಜನರು ಗಾಂಜಾವನ್ನು ಸಾಗಿಸುತ್ತಿದ್ದಾಗ ತೊಕ್ಕೊಟ್ಟು ನಾಗನಕಟ್ಟೆ ಬಳಿ ಸ್ಕೂಟರ್ ಅಡ್ಡ ಹಾಕಿ ಮೂವರನ್ನು ವಶಕ್ಕೆ ಪಡೆದು ಅವರಿಂದ ಸುಮಾರು 4 ಕೆಜಿ ತೂಕದ ಗಾಂಜಾ, ಬೂದು ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಸೇರಿ ಸುಮಾರು 1 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಮುಸ್ತಾಪನ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ಸೇರಿದಂತೆ ಮೂರು ಪ್ರಕರಣಗಳು ಮೂರು ಪ್ರಕರಣಗಳು ದಾಖಲಾಗಿವೆ. ಆರೋಪಿ ಫೈಜಲ್ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ, ಕಳ್ಳತನ ಮತ್ತು ಗಾಂಜಾ ಮಾರಾಟ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಆರೋಪಿಯನ್ನು ಬಂಧೀಸಲು ಬಾಕಿ ಇದ್ದು ಹೆಚ್ಚಿನ ತನಿಖೆ ಮುಂದುವರೆದಿದೆ.