Home Mangalorean News Kannada News ಗಾಂಜಾ ಮಾರಾಟ ಮಾಡುತ್ತಿದ್ದ ಓಡಿಸ್ಸಾ ವ್ಯಕ್ತಿಯ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ಓಡಿಸ್ಸಾ ವ್ಯಕ್ತಿಯ ಬಂಧನ

Spread the love
RedditLinkedinYoutubeEmailFacebook MessengerTelegramWhatsapp

ಗಾಂಜಾ ಮಾರಾಟ ಮಾಡುತ್ತಿದ್ದ ಓಡಿಸ್ಸಾ ವ್ಯಕ್ತಿಯ ಬಂಧನ

ಮಂಗಳೂರು:  ನಗರದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರ ಪತ್ತೆಯ ಬಗ್ಗೆ ಇಕೊನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೋಲಿಸ್ ಠಾಣಾ ಪೊಲೀಸ್ ನಿರೀಕ್ಷಕರು ಮತ್ತು ಸಿಬಂದಿಗಳು ಕೈಗೊಂಡು ಒರಿಸ್ಸಾ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಕಿಶೋರ್ ಚಂದ್ರ ಸಮಲ್ (47) ಒಡಿಸ್ಸಾ ರಾಜ್ಯದ ಗಂಜಮ್ ಜಿಲ್ಲೆಯವನು ಎಂದು ಗುರುತಿಸಲಾಗಿದೆ.

ಬಂಧಿತನು ಮಂಗಳೂರು ತಾಲೂಕು ತೆಂಕ ಉಳೆಪ್ಪಾಡಿ ಗ್ರಾಮದ ಗಂಜಿಮಠ ಮಳಲಿ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ರೂ 30000 ಮೌಲ್ಯದ 2 ಕೆ.ಜಿ 20 ಗ್ರಾಮ ತೂಕದ ಗಾಂಜಾ ಮತ್ತು 1 ಮೊಬೈಲ್ ಫೋನ್ ವಶಪಡಿಸಿದ್ದು, ವಶಪಡಿಸದ ಗಾಂಜಾ ಮತ್ತು ಸೊತ್ತುಗಳ ಒಟ್ಟು ಮೌಲ್ಯ ರೂ 31000 ಆಗಿರುತ್ತದೆ. ಆರೋಪಿ ಕೆಲವು ದಿನಗಳಿಂದ ಓಡಿಸ್ಸಾದಿಂದ ವಾರಕ್ಕೊಮ್ಮೆ ಗಾಂಜಾವನ್ನು ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನು.


Spread the love

Exit mobile version