ಗಾಂಜಾ ಮಾರಾಟ ಯತ್ನ – ನಾಲ್ವರ ಬಂಧನ
ಮಂಗಳೂರು: ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಆರ್ ಗೌಡ ನೇತೃತ್ವದ ವಿಶೇಷ ಅಪರಾಧ ಪತ್ತೆ ದಳ ಸುರತ್ಕಲ್ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ನಿಂತುಕೊಂಡಿದ್ದ ಯುವಕ ಹಾಗೂ ಆತನಿಗೆ ಮಾರಾಟ ಮಾಡಲು ಆಟೋರಿಕ್ಷಾವೊಂದರಲ್ಲಿ ಗಾಂಜಾವನ್ನು ಮೂರು ಜನ ಸೇರಿ ಒಟ್ಟು 4 ಮಂದಿ ಯುವಕರನ್ನು, 2 ಕಿಲೋ ಗ್ರಾಂ ಗಾಂಜಾ ಮತ್ತು ಆಟೋ ರಿಕ್ಷಾ ಸಮೇತ ದಸ್ತಗಿರಿ ಮಾಡುವಲ್ಲಿ ವಿಶೇಷ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.
ಬಂಧಿತರನ್ನು ಬಂಟ್ವಾಳ ತಾಲೂಕು ಸಜಿಪ ಮೂಡ ನಿವಾಸಿ ಆಸೀಫ್ (27), ಮಲ್ಪೆ ನಿವಾಸಿ ಕಿರಣ್ ಯಾನೆ ಕಿರಣ್ ಮೆಂಡನ್ (34), ಉಳ್ಳಾಲ ನಿವಾಸಿ ಅಬ್ದುಲ್ ರಹೀಮ್ ಯಾನೆ ಅಂಕುಶ್ ರಹೀಮ್ (47) ಮತ್ತು ಕುರ್ನಾಡ್ ನಿವಾಸಿ ಹಫೀಜ್ ಯಾನೆ ಅಭೀ ಯಾನೆ ಮೊಯ್ದಿನ್ (33) ಎಂದು ಗುರುತಿಸಲಾಗಿದೆ.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀ ಶ್ರೀನಿವಾಸ ಆರ್ ಗೌಡ ನೇತೃತ್ವದ ವಿಶೇಷ ಅಪರಾಧ ಪತ್ತೆ ದಳ ಜೂನ್ 16ರಂದು ನಡೆಯುತ್ತಿರುವ ಇಂಡಿಯಾ – ಪಾಕಿಸ್ತಾನ್ ನಡುವಿನ ವಲ್ಡ್ ಕಪ್ ಕ್ರಿಕೆಟ್ ಪಂದ್ಯಾಟ ನಿಮಿತ್ತ ಬಜಪೆ ಪೊಲೀಸ್ ನಿರೀಕ್ಷಕರ ಜೊತೆಯಲ್ಲಿ ಸುರತ್ಕ್ಲ ಪರಿಸರದಲ್ಲಿ ವಿಶೇಷ ಗಸ್ತು ನಡೆಸುತ್ತಿದ್ದ ಸಂಜೆ ಸುಮಾರು 6.30 ರ ಗಂಟೆಗೆ ಸುರತ್ಕಲ್ ಚೊಕ್ಕಬೆಟ್ಟು ಪರಿಸರದಲ್ಲಿ ಗಸ್ತು ನಡೆಸುತ್ತಿರುವ ಸಂದರ್ಭ ಅಪರಾಧ ಪತ್ತೆ ದಳದ ಸಿಬಂದಿಗೆ ದೊರೆತ ಖಚಿತ ಮಾಹಿತಿಯೇನಂದರೆ ಮಂಗಳುರು ಮೂಲಕ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ವಾಸವಾಗಿರುವ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಿರಣ್ ಮೆಂಡನ್ ಎಂಬಾತನಿಗೆ ಮಾರಾಟ ಮಾಡುವ ಸಲುವಾಗಿ ದೊಡ್ಡ ಮೊತ್ತದ ಗಾಂಜಾ ವನ್ನು ಉಳ್ಳಾಲ ಮತ್ತು ಬಿಸಿ ರೋಡ್ ಕಡೆಯಿಂದ ಮೂರು ಜನ ವ್ಯಕ್ತಿಗಳು ಆಟೋರಿಕ್ಷದಲ್ಲಿ ತೆಗೆದುಕೊಂಡು ಬರುತ್ತಿರುವುದಾಗಿ ಮತ್ತು ಅದನ್ನು ಸುರತ್ಕಲ್ ಬಳಿಯ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಹಸ್ತಾಂತರ ಮಾಡಲಾಗುತ್ತೆ ಎನ್ನುವ ಮಾಹಿತಿಯಾಧರಿಸಿ ಬಜಪೆ ಪೊಲೀಸ್ ನಿರೀಕ್ಷಕರಾದ ಪರಶಿವ ಮೂರ್ತಿ ಜೊತೆಯಲ್ಲಿ ವಿಶೇಷ ಅಪರಾಧ ಪತ್ತೆ ದಳ ಸುರತ್ಕಲ್ ಸಮೀಪದ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಹೊಂಚು ಹಾಕಿ ನಿಂತಿದ್ದು ಮಾಹಿತಿಯಂತೆ ಮಾಹಿತಿದಾರರು ತಿಳಿಸಿದ ಚಹರೆಯ ವ್ಯಕ್ತಿಯು ನಿಂತಲ್ಲಿಗೆ ಬಂದು ಆಟೋ ಬಂದು ನಿಂತುಕೊಂಡಾಗ ಆಟೋ ರಿಕ್ಷಾದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಅದರಿಂದ ಇಳಿದು ಒಂದು ಪ್ಲ್ಯಾಸ್ಟಿಕ್ ಚೀಲದ ಒಂದು ಕಟ್ಟನ್ನು ರಸ್ತೆಯ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಗೆ ಕೊಡುತ್ತಿದ್ದಂತೆಯೇ ಗಾಂಜಾವನ್ನು ಸ್ವಾಧೀನ ಪಡಿಸಿ 4 ಜನ ಆರೋಪಿಗಳನ್ನು ಆಟೋ ರಿಕ್ಷ ಸಮೇತ ದಸ್ತಗಿರಿ ಮಾಡಿ ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಬಂಧಿತರಿಂದ 2 ಕಿಲೋ ಗ್ರಾಂ ಗಾಂಜಾ, ಒಂದು ಆಟೋರಿಕ್ಷಾ, 5 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ ರೂ 2.70 ಲಕ್ಷ ರೂಗಳಾಗಿದೆ.