ಗಾಂಜಾ ಸಾಗಾಟ ಆರೋಪ ; ಇಬ್ಬರ ಬಂಧನ

Spread the love

ಗಾಂಜಾ ಸಾಗಾಟ ಆರೋಪ ; ಇಬ್ಬರ ಬಂಧನ

ಮಂಗಳೂರು: ಅಂಬ್ಲಮೊಗರು ಗ್ರಾಮದ ಮದಕ ಎಂಬಲ್ಲಿ ಬೈಕ್ ಮೂಲಕ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೋಲಿಸರು ಬಂಧಿಸಿ, ಬೈಕ್ ಹಾಗೂ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರನ್ನು ಮಹಮ್ಮದ್ ಆಸೀಫ್ ಮತ್ತು ಕುತ್ತಾರಿನ ಶೇಖ್ ಶಹಬಾರ್ ಎಂದು ಗುರುತಿಸಲಾಗಿದೆ.

ಬಂಧಿತರು ಅಂಬ್ಲಮೊಗರು ಗ್ರಾಮದ ಮದಕ ಎಂಬಲ್ಲಿ ಮೋಟಾರ್ ಸೈಕಲ್ ನಂಬ್ರ ಕೆಎ-19-ಇಯು-7808 ನೇದರಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಬಂಧ ಮಾಹಿತಯ ಪ್ರಕಾರ ವಶಕ್ಕೆ ಪಡೆದುಕೊಂಡು ಆರೋಪಿಗಳ ವಶದಲ್ಲಿದ್ದ 5 ಪ್ಯಾಕೆಟ್ ಗಾಂಜಾವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರ ವಶದಲ್ಲಿದ್ದ ಗಾಂಜಾ ಮತ್ತು ಬೈಕನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಆರೋಪಿಗಳು ಕೂಡಾ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ದೃಢಪಟ್ಟಿರುತ್ತದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಮತ್ತು ಎ.ಸಿ.ಪಿ ದಕ್ಷಿಣ ಉಪ-ವಿಭಾಗರವರ ಪಾಲ್ಗೊಂಡಿರುತ್ತಾರೆ. ಈ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


Spread the love