ಗಾಯಗೊಂಡ ಕಾಳಿಂಗ ಸರ್ಪಕ್ಕೆ ಪಿಲಿಕುಳದಲ್ಲಿ ಚಿಕಿತ್ಸೆ
ಮಂಗಳೂರು : ಸಾಕಿದ ಬೆಕ್ಕನ್ನು ಓಡಿಸಿಕೊಂಡು ಕಾಳಿಂಗ ಸರ್ಪವೊಂದು ಉಬರಡ್ಕ ಗ್ರಾಮದ ವೆಂಕಪ್ಪಗೌಡರ ಮನೆಗೆ ಪ್ರವೇಶಿಸಿತು.
ಮನೆಯವರು ಸಾಕಿದ ನಾಯಿಯು ಹಾವಿನ ಜೊತೆ ಸೆಣೆಸಾಡಲು ಪ್ರಾರಂಭಿಸಿ, ನಾಯಿಯು ಬಲವಾಗಿ ಹಾವಿಗೆ ಕಚ್ಚಿತ್ತು. ಪಿಲಿಕುಳ ಮೃಗಾಲಯದ ಸಿಬ್ಬಂದಿಗಳು ಬಂದು ಹಾವನ್ನು ಪಿಲಿಕುಳ ಜೈವಿಕ ಉದ್ಯಾನಕ್ಕೆ ಸಾಗಿಸಿರುತ್ತಾರೆ. ಗಾಯಗೊಂಡ ಕಾಳಿಂಗಕ್ಕೆ ಪಿಲಿಕುಳದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಕಾಳಿಂಗವು ಚೇತರಿಸಿ ಕೊಳ್ಳುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕರ ಪ್ರಕಟಣೆ ತಿಳಿಸಿದೆ.