ಗಿಫ್ಟ್ ಆಮೀಷ ತೋರಿ ಮಹಿಳೆಗೆ ವಂಚನೆ; ಆರೋಪಿಗಳ ಬಂಧನ
ಮಂಗಳೂರು: ಮಹಿಳೆಯೊಬ್ಬರಿಗೆ ಫಾರಿನ್ ಕರೆನ್ಸಿ ಗಿಫ್ಟ್ ನೀಡುವುದಾಗಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ ಘಟನೆ ಕುರಿತು ಉಳ್ಳಾಲ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ನವದೆಹಲಿಯ ಲಾಲ್ ತಾಣ್ ಮಾವಿಯಾ (34) ಹಾಗೂ ಕೂಫ್ ಬೋಯಿ ಯಾನೆ ಲಿಯಾನ್ ಕೂತಾನ್ ಮಣಿಪುರ ಎಂದು ಗುರುತಿಸಲಾಗಿದೆ.
ಉಳ್ಳಾಲ ನಿವಾಸಿ ವಾಯ್ಲೆಟ್ ಡಿಸೋಜ ಎಂಬವರಿಗೆ ಆರೋಪಿತರುಗಳು ರಾಯಲ್ ಬ್ಯಾಂಕ್ ಸ್ಕಾಟ್ ಲ್ಯಾಂಡ್ ನವದೆಹಲಿ ಎಂಬ ಹೆಸರಿನಲ್ಲಿ ಈ ಮೇಯ್ಲ್ ಸಂದೇಶ ಕಳುಹಿಸಿ ಫಾರಿನ್ ಕರೆನ್ಸಿ ಮತ್ತು ಗಿಫ್ಟ್ ಕಳುಹಿಸುವುದಾಗಿ ಹೇಳಿ ವಾಯ್ಲೆಟ್ ಅವರ ಸ್ನೇಹಿತಯ ಹೆಸರಿನಲ್ಲಿ ಸಂಪರ್ಕಿಸಿ ದೊಡ್ಡ ಮೊತ್ತದ ಫಾರಿನ್ ಕರೆನ್ಸಿಯ ಗಿಫ್ಟ್ ಕಳುಹಿಸಿಕೊಡುವ ಬಗ್ಗೆ ಆಮಿಷ ನೀಡಿ ಬಳಿಕ ಪಾರ್ಸೆಲ್ ನ್ನು ಮತ್ತು ಗಿಫ್ಟ್ ಪಡೆದುಕೊಳ್ಳಲು ಪ್ರೋಸಿಜರ್ ಚಾರ್ಜ್ ಸಂದಾಯ ಮಾಡುವಂತೆ ನಂಬಿಸಿ ಆರೋಪಿತರ ಖಾತೆಗಳಿಗೆ ಸುಮಾರು ರೂ 21, 58, 200 ವರ್ಗಾಯಿಸಿ ಬಳಿಕ ನಕಲಿ ವೆಬ್ ಸಂಸ್ಥೆಗಳನ್ನು ಸೃಷ್ಟಿಸಿ ಮೋಸ ಮಾಡಿದ್ದರು. ಈ ಕುರಿತು ವಾಯ್ಲೆಟ್ ಅವರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಕುರಿತು ಉಳ್ಳಾಲ ಠಾಣಾ ಪಿಐ ಗೋಪಿಕೃಷ್ಣ, ಪಿಎಸ್ ಐ ರಾಜೇಂದ್ರ ಮತ್ತು ಎಎಸ್ ಐ ವಿಜಯ್ ರಾಜ್ ಎಂಬವರು ಜೊತೆಯಾಗಿ ಆರೋಪಿಗಳನ್ನು ನವದೆಹಲಿಯ ವಿಕಾಸ್ ಪುರಿ ಎಂಬಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.