Home Mangalorean News Kannada News ಗಿಳಿಯಾರಿನಲ್ಲಿ ಜನಸೇವಾ ಟ್ರಸ್ಟ್ ಅನಾವರಣ, ಅಭಿಮತ ದಶಮ ಸಂಭ್ರಮ

ಗಿಳಿಯಾರಿನಲ್ಲಿ ಜನಸೇವಾ ಟ್ರಸ್ಟ್ ಅನಾವರಣ, ಅಭಿಮತ ದಶಮ ಸಂಭ್ರಮ

Spread the love

ಗಿಳಿಯಾರಿನಲ್ಲಿ ಜನಸೇವಾ ಟ್ರಸ್ಟ್ ಅನಾವರಣ, ಅಭಿಮತ ದಶಮ ಸಂಭ್ರಮ

ಕೋಟ : ಸೈನಿಕರು ನಮ್ಮ ದೇಶಕ್ಕಾಗಿ ಊರು, ಕುಟುಂಬಗಳನ್ನು ತ್ಯಜಿಸಿ ಸೇವೆ ಸಲ್ಲಿಸುತ್ತಾರೆ. ಅವರ ಕುಟುಂಬಗಳಿಗೆ ಸಮಸ್ಯೆಯಾದಗ ಅದನ್ನು ವಿಚಾರಿಸಲು ಪೋಲೀಸ್ ಇಲಾಖೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಅಗತ್ಯ ಎಂದು ಕರ್ನಾಟಕ ಪಶ್ಚಿಮ ವಲಯ ಐ.ಜಿ.ಪಿ. ಅರುಣ್ ಚಕ್ರವರ್ತಿ ಹೇಳಿದರು.

ಅವರು ಮಾ.31ರಂದು ಮೂಡುಗಿಳಿಯಾರು ಹಿ.ಪ್ರಾ.ಶಾಲೆ ಮೈದಾನದಲ್ಲಿ, ಪತ್ರಕರ್ತ ವಿಷ್ಣು ವಕ್ವಾಡಿ ವೇದಿಕೆಯಲ್ಲಿ ಜರಗಿದ ಗಿಳಿಯಾರು ಜನಸೇವಾ ಟ್ರಸ್ಟ್ ಅನಾವರಣ ಹಾಗೂ ಅಭಿಮತ ದಶಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಜನಸೇವಾ ಟ್ರಸ್ಟ್ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಲಿ ಹಾಗೂ ಸಮಾಜಮುಖಿ ಕಾರ್ಯದಲ್ಲಿ ಮುಂದುವರಿಯಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಪ್ರಸನ್ನ ಗಣಪತಿ ದೇಗುಲದ ಧರ್ಮದರ್ಶಿ ಬೆಳ್ಳಿಪಾಡಿ ಹರಿಪ್ರಸಾದ್ ರೈ ಮಾತನಾಡಿ, ವಸಂತ್ ಗಿಳಿಯಾರ್ ನೇತೃತ್ವದಲ್ಲಿ ಉದ್ಘಾಟನೆಗೊಂಡಿರುವ ಜನಸೇವಾ ಟ್ರಸ್ಟ್ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತದೆ ಎನ್ನುವುದು ಉದ್ಘಾಟನೆಯ ಸಂದರ್ಭದಲ್ಲೇ ಕೈಗೊಂಡಿರುವ ಸಮಾಜಮುಖಿ ಕಾರ್ಯಗಳಿಂದ ತಿಳಿದುಬಂದಿದೆ ಎಂದರು.

ದುಬೈನ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಟ್ರಸ್ಟ್ ಉದ್ಘಾಟಿಸಿ ಶುಭ ಹಾರೈಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಹಲವು ಮಂದಿ ಗಣ್ಯರು ಟ್ರಸ್ಟ್ಗೆ ಸಹಕಾರ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭ ಸುದ್ದಿವಾಹಿನಿಯ ನಿರೂಪಕ ರಾಘವೇಂದ್ರ ಕಾಂಚನ್, ಸಾಮಾಜಿಕ ಜಾಲತಾಣದ ಕುಂದಗನ್ನಡದ ಹೀರೋ ಮನು ಹಂದಾಡಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ಸಿರಿ ಕಂಬಳದ ಸಾಧಕ ರಾಘವೇಂದ್ರ ಶೆಟ್ಟಿ ಹಂಡಿಕೆರೆ ಅವರಿಗೆ ಕೀರ್ತಿ ಕಲಶ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿತೇಶ ಕರ್ಕೇರ, ಶರತ್ ಶೆಟ್ಟಿ ಕೊತ್ತಾಡಿ, ಅನಿಕೇತ್ ಶೆಣೈ, ಶರತ್ ಆಚಾರ್ಯ, ಸ್ವಾತಿ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆ ಇಲ್ಲಿನ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ, ಗಿಳಿಯಾರು ದಿ| ಐತ ಪೂಜಾರಿ ಸ್ಮರಣಾರ್ಥ ನೇತ್ರದಾನಕ್ಕೆ ಹೆಸರು ನೋಂದಣಿ ಶಿಬಿರ. ರವಿ ಬಸ್ರೂರು ಸಾರಥ್ಯದ ಪ್ರತಿಭಾನ್ವೇಷಣೆ ಅಲ್ಬಮ್ ಬಿಡುಗಡೆ, ಸೆಲಿ ವಿದ್ ಅಮ್ಮ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು, ಬಡ ಕುಟುಂಬದ ವಿದ್ಯಾರ್ಥಿನಿಯ ದತ್ತು ಸ್ವೀಕಾರ, ಎಲ್ಲಾ ಪ್ರೇಕ್ಷಕರಿಗೆ ಸೀಡ್ ಬಾಲ್ ವಿತರಣೆ, ಜಿಲ್ಲಾಮಟ್ಟದ ಸಾಂಸ್ಕøತಿಕ ಸ್ಪರ್ಧೆ, ಕಾವ್ಯಶ್ರೀ ಅಜೇರು ಇವರಿಂದ ಯಕ್ಷ ರಸಕಾವ್ಯ, ಝೀ ವಾಹಿನಿಯ ಸರಿಗಮಪ ಖ್ಯಾತಿಯ ಸಾನ್ವಿ ಶೆಟ್ಟಿಯಿಂದ ಸಂಗೀತ ಸುಧೆ, ಅಗಲಿದ ಸೈನಿಕರಿಗೆ ಶ್ರದ್ಧಾಂಜಲಿ ಮುಂತಾದ ಕಾರ್ಯಕ್ರಮ ನಡೆಯಿತು.

ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ವಿವೇಕ ಆಳ್ವಾ, ಬ್ರಹ್ಮಾವರ ಪ್ರೆಸ್ ಕ್ಲಬ್ನ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಬೆಂಗಳೂರು ಯೂನಿವರ್ಸಲ್ ಕೋಚಿಂಗ್ ಸೆಂಟರ್ನ ಆರ್. ಉಪೇಂದ್ರ ಶೆಟ್ಟಿ, ಮಂಗಳೂರು ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಡಾ| ಮಹಾಬಲೇಶ್ವರ ಶೆಟ್ಟಿ, ಮೊಗವೀರ ಮುಂದಾಳು ಸುರೇಶ ಕಾಂಚನ್, ಉದ್ಯಮಿ ಮರಾಠ ಸುರೇಶ ಶೆಟ್ಟಿ, ಮುಂಬೈ ಬಂಟರ ಸಂಘದ ಉಳ್ತೂರು ಮೋಹನ್ದಾಸ್ ಶೆಟ್ಟಿ, ಬಡಾಮನೆ ರತ್ನಾಕರ ಶೆಟ್ಟಿ, ಅಭಯ್ ಗ್ರೂಪ್ನ ಮಂದಾರ್ತಿ ಉಮೇಶ ಶೆಟ್ಟಿ, ಜೈ ಭಾರ್ಗವ ಬಳಗದ ರಾಜ್ಯಾಧ್ಯಕ್ಷ ಅಜಿತ್ ಶೆಟ್ಟಿ ಕಿರಾಡಿ, ಕರುಣಾ ಬೆಳಕು ಟ್ರಸ್ಟ್ನ ಕರುಣಾಕರ ಹೆಗ್ಡೆ ಆನಗಳ್ಳಿ ಉಪಸ್ಥಿತರಿದ್ದರು.

ಟ್ರಸ್ಟ್ನ ಅಜಿತ್ ಶೆಟ್ಟಿ ಉಳ್ತೂರು ಸ್ವಾಗತಿಸಿ, ವಸಂತ್ ಗಿಳಿಯಾರ್ ಪ್ರಾಸ್ತಾವಿಕ ಮಾತನಾಡಿ, ಪತ್ರಕರ್ತ ಚಂದ್ರಶೇಖರ್ ಬೀಜಾಡಿ, ಆರ್.ಜೆ. ರೇವತಿ ಶೆಡ್ತಿ ಕಾರ್ಯಕ್ರಮ ನಿರೂಪಿಸಿ, ನಾಗರಾಜ್ ಶೆಟ್ಟಿ ನಾೈಕಂಬ್ಳಿ ವಂದಿಸಿದರು.


Spread the love

Exit mobile version