ಗುಂಪು ಹಲ್ಲೆ ತಡೆಯಲು ಕಾನೂನು ರಚಿಸಿ; ವೆಲ್ಪೆರ್ ಪಾರ್ಟಿ ಆಗ್ರಹ
ದೇಶಾದ್ಯಂತ ಗುಂಪುಗಳಿಂದ ನಡೆಯುವ ಕೊಲೆ ಘಟನೆ ಗಳನ್ನು ತಡೆಯಲು ಸುಪ್ರೀಂ ಕೋರ್ಟ್ ಪ್ರತ್ಯೇಕ ಕಾನೂನು ರಚಿಸಲು ಕೇಂದ್ರ ಸರ್ಕಾರ ಕ್ಕೆ ಸೂಚಿಸಿತ್ತು. ಇದಕ್ಕೆ ಉತ್ತರ ವಾಗಿ ಕೇಂದ್ರ ಸರಕಾರ ಪ್ರತ್ಯೇಕ ಕಾನೂನಿನ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ .ಇದಾಗಿ ಒಂದೆರಡು ದಿವಸಗಳಲ್ಲಿ ರಾಜಸ್ಥಾನದ ಅಲ್ವಾರ್ ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಗೋರಕ್ಷರ ಗುಂಪು ಕೊಂದು ಹಾಕಿತು.
ಮಧ್ಯಪ್ರದೇಶಕ್ಕೆ ಹೈನುಗಾರಿಕೆ ಉದ್ದೇಶದಿಂದ ದನಗಳನ್ನು ಕೊಂಡುಹೋಗುವಾಗ ಓರ್ವ ಬ್ರಾಹ್ಮಣ,ಮತ್ತು ಮುಸ್ಲಿಮನಿಗೆ ರಾಜಸ್ಥಾನ ದ ಕೋಟಾದಲ್ಲಿ ಮಾರಣಾಂತಿಕವಾಗಿ ಥಳಿಸಲಾಯಿತು.ಸುಪ್ರೀಂ ಕೋರ್ಟ್ ಆದೇಶಿಸಿದ ಬಳಿಕವೂ ಇಷ್ಟೆಲ್ಲ ಆದರೂ ಪ್ರತ್ಯೇಕ ಕಾನೂನು ರಚಿಸುವ ಅಗತ್ಯ ಇಲ್ಲ ಯಾವ ಮನಸ್ಸಿನಿಂದ, ಯಾವ ಮಾನದಂಡದಿಂದ ಕೇಂದ್ರ ಸರ್ಕಾರ ಹೇಳುತ್ತಿದೆ ಎಂದು ವೆಲ್ಪೆರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ. ಪ್ರಶ್ನಿಸುತ್ತದೆ. ಜನರ ಪ್ರಾಣಕ್ಕೆ ಜಾನುವಾರುಗಳ ಷ್ಟು ಕೂಡಾ ಮಹತ್ವ ನೀಡದ ಕೇಂದ್ರ ದ ವರ್ತನೆ ಖಂಡನಾರ್ಹ ವಾದುದು.
ಈಗಾಗಲೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ವರದಿಯಲ್ಲಿ ಕಳೆದ ಅರು ತಿಂಗಳಲ್ಲಿ ದೇಶದಲ್ಲಿ ನೂರು ಗುಂಪು ಹಲ್ಲೆ ಘಟನೆ ಗಳಾಗಿರುವುದು ಬಹಿರಂಗ ಗೊಂಡಿರುವಾಗ.ಅದು ಕೂಡಾ ಬಿಜೆಪಿ ಅಡಳಿತ ಇರುವ ಉತ್ತರ ಪ್ರದೇಶ, ಗುಜರಾತ್ ಗಳಲ್ಲಿ ಅತಿ ಹೆಚ್ಚುಗುಂಪು ಹಲ್ಲೆ ಘಟನೆಗಳಾಗಿವೆ ಎಂಬ ಸತ್ಯ ಬಹಿರಂಗವಾಗಿರುವಾಗ.
ಗುಂಪು ಹಲ್ಲೆಗಳಲ್ಲಿ ಹೆಚ್ಚಾಗಿ ದಲಿತರು, ಮುಸ್ಲಿಮರು,ಹಿಂದುಳಿದವರು ಹಲ್ಲೆ ಮತ್ತು ಹತ್ಯೆಯಾದವರು.
ಅದರೂ ಇದನ್ನು ತಡೆಯಲು ಕಾನೂನು ನಿರ್ಮಿಸಲು ಕೇಂದ್ರ ಸರಕಾರ ನಿರಾಕರಿಸುತ್ತಿರುವುದು ಖಂಡಿತ ಅದರ ದುರುದ್ದೇಶವನ್ನು ಅನಾವರಣಗೋಳಿಸಿದೆ ಎಂದು ವೆಲ್ಫೆರ್ ಪಾರ್ಟಿ ಹೆಳಲಿಚ್ಛಿಸುತ್ತಿದೆ. ತಕ್ಷಣ ಕೇಂದ್ರ ಸರ್ಕಾರ ತನ್ನೆಲ್ಲಾ ತಪ್ಪು ಸಿದ್ದಾಂತ ಮತ್ತು ಪಕ್ಷಪಾತಿ ತತ್ವಗಳನ್ನು ಮೂಲೆಗೆಸೆದು ಗುಂಪು ಹಲ್ಲೆ ಮತ್ತು ಹತ್ಯೆ ಗಳಿಂದ ದೇಶದ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟಿನ ಸಲಹೆಯಂತೆ ಕಾನೂನು ರಚಿಸಬೇಕೆಂದು ವೆಲ್ಪೆರ್ ಪಾರ್ಟಿ ಹಕ್ಕೊತ್ತಾಯ ಮಾಡುತ್ತಿದೆ.
ಇಲ್ಲದಿದ್ದರೆ ಕಾನೂನು ರಚನೆಗಾಗಿ ಬೀದಿಗಿಳಿದು ಹೋರಾಡಲು ಹಿಂಜರಿಯುವುದಿಲ್ಲ ಎಂದು ವೆಲ್ಪೆರ್ ಪಾರ್ಟಿ ಈಮೂಲಕ ಸರಕಾರ ಕ್ಕೆ ಎಚ್ಚರಿಕೆ ನೀಡುತ್ತದೆ