ಗುಜರಿ ಕಾರುಗಳ ಚಾಸಿಸ್‌ ತೆಗೆದು ಮಾರುತ್ತಿದ್ದ ಮೂವರ ಬಂಧನ

Spread the love

ಗುಜರಿ ಕಾರುಗಳ ಚಾಸಿಸ್‌ ತೆಗೆದು ಮಾರುತ್ತಿದ್ದ ಮೂವರ ಬಂಧನ

ಮಂಗಳೂರು: ಕಾರಿಗೆ ಗುಜರಿಗೆ ಬಂದಿರುವ ಕಾರಿನ ಚಾಸಿಸ್‌ ನಂಬ್ರ ಇರುವ ಚಾಸಿಸ್‌ ನ ತುಂಡನ್ನು ತೆಗೆದು ಯಾವುದೋ ಮೂಲದಿಂದ ಬಂದ ಕಾರಿಗೆ ಅಳವಡಿಸಿ ನಂತರ ಇವುಗಳನ್ನು ವಿಲೇವಾರಿ ಮಾಡುವ ದಂಧೆಯಲ್ಲಿ ತೊಡಗಿದ ಮೂರು ಮಂದಿ ವ್ಯಕ್ತಿಗಳನ್ನು ಬರ್ಕೆ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಯೆಯ್ಯಾಡಿ ನಿವಾಸಿ ಸಂಪತ್ ಕುಮಾರ್ (36), ಕೊಟ್ಟಾರ ನಿವಾಸಿ ಹರೀಶ್ ಶೆಟ್ಟಿ (49), ಅಶೋಕನಗರ ನಿವಾಸಿ ವಿಲ್ಫ್ರೇಡ್ ಅವಿನಾಶ್ ಸೋನ್ಸ್ (32) ಎಂದು ಗುರುತಿಸಲಾಗಿದೆ.

ಡಿಸೆಂಬರ್ 30ರಂದು ಖಚಿತ ವರ್ತಮಾನದ ಮೇರೆಗೆ ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪ ವಿಭಾಗದ ಕ್ರೈಂ ಸ್ಕ್ವಾಡ್ ನ ಸಿಬ್ಬಂದಿಯವರಾದ ಬರ್ಕೆ ಪೊಲೀಸು ಠಾಣೆಯ ಪಿಎಸ್‌ಐ (ಕ್ರೈಂ) ನರೇಂದ್ರ ಮತ್ತು ಸಿಬ್ಬಂದಿಯವರೊಂದಿಗೆ ಮಣ್ಣಗುಡ್ಡೆಯ ದುರ್ಗಾ ಮಹಲ್ ಜಂಕ್ಷನ್ ಬಳಿ ಇರುವ ಮಾರುತಿ ಸರ್ವಿಸ್ ಸ್ಟೇಶನ್ ಎದುರು ಕೆಎ 03 ಪಿ 7398 ನೇ ಲ್ಯಾನ್ಸರ್ ಬಿಳಿ ಬಣ್ಣದ ಕಾರಿನಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ 3 ಜನ ವ್ಯಕ್ತಿಗಳನ್ನು ತಡೆದು ಕಾರಿನ ದಾಖಲಾತಿಗಳ ಬಗ್ಗೆ ಪರಿಶೀಲಿಸಲು ಕೋರಿದಲ್ಲಿ ಹಾಜರು ಪಡಿಸಲು ನಿರಾಕರಿಸಿದಲ್ಲದೇ, ಕಾರಿನ ಬಗ್ಗೆ ಕೂಡಾ ಯಾವುದೇ ಮಾಹಿತಿಯನ್ನು ಸರಿಯಾಗಿ ನೀಡದೇ ಇದ್ದುದರಿಂದ ಸದ್ರಿ ಆರೋಪಿಗಳು ಯಾವುದಾದರೂ ಒಂದು ಅಪರಾಧಿಕ ಕೃತ್ಯವನ್ನು ಮಾಡಲು ಹೋಗುವ ಅಥವಾ ಇತರ ಯಾವುದೋ ಮೂಲದಿಂದ ಹೊಂದಿರುವ ವಾಹನವಾಗಿರುವುದರಿಂದ, ಆರೋಪಿಗಳ ಬಗ್ಗೆ ಬಲವಾದ ಸಂಶಯ ಬಂದು ಸದ್ರಿ ಕಾರು ಮತ್ತು ಮೂರು ಜನರನ್ನು ವಶಕ್ಕೆ ತೆಗೆದುಕೊಂಡಿದ್ದು, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

ಪ್ರಕರಣ ತನಿಖೆಯ ವೇಳೆ ಆರೋಪಿಗಳು ಸಮಾನ ಉದ್ದೇಶ ಹೊಂದಿ ಯಾವುದೋ ಮೂಲದಿಂದ ಯಾವುದೋ ರೀತಿಯಲ್ಲಿ ಕಾರನ್ನು ಹೊಂದಿ, ಈ ಕಾರಿಗೆ ಗುಜರಿಗೆ ಬಂದಿರುವ ಕಾರಿನ ಚಾಸಿಸ್‌ ನಂಬ್ರ ಇರುವ ಚಾಸಿಸ್‌ ನ ತುಂಡನ್ನು ತೆಗೆದು ಯಾವುದೋ ಮೂಲದಿಂದ ಬಂದ ಕಾರಿಗೆ ಅಳವಡಿಸಿ ನಂತರ ಇವುಗಳನ್ನು ವಿಲೇವಾರಿ ಮಾಡುವ ದಂಧೆಯನ್ನು ಮಾಡುವವರಾಗಿರುತ್ತಾರೆ.

ಆರೋಪಿಗಳ ವಶದಿಂದ 1) ಮಿತ್ಸುಬಿಷಿ ಲ್ಯಾನ್ಸರ್‌ ಕಾರು ನಂ ಕೆಎ 03 ಪಿ 7398, 2) ಮಾರುತಿ ಸ್ವಿಪ್ಟ್‌ ಕೆಎ 15 ಎಮ್ 2282 ನೇದನ್ನು ಮತ್ತು ಗ್ಯಾಸ್ ವೆಲ್ಡಿಂಗ್ ಸಿಲಿಂಡರ್, ಪೈಪ್ ಮತ್ತು ಇತರ ಸಲಕರಣೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಸೊತ್ತುಗಳ ಒಟ್ಟು ಮೌಲ್ಯ ರೂ.4,60,500/- ಆಗಬಹುದು.

ಮಂಗಳೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಉದಯ್ ನಾಯಕ್ ಹಾಗೂ ಮಂಗಳೂರು ಬರ್ಕೆ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಜೇಶ್ ಎ ಕೆ ರವರ ನೇತೃತ್ವದಲ್ಲಿ ಬರ್ಕೆ ಠಾಣಾ ಅಪರಾಧ ವಿಭಾಗದ ಪಿಎಸ್ಐ ನರೇಂದ್ರ ಮತ್ತು ಪ್ರಕಾಶ್‌ ಕುಮಾರ್‌, ಪಿಎಸ್‌ಐ (ಕಾ ಮತ್ತು ಸು) ಹಾಗೂ ಎಎಸ್ಐ ಪ್ರಕಾಶ್ ಕೆ ಮತ್ತು ರುಕ್ಮಯ್ಯಾ ಹಾಗೂ ಸಿಬ್ಬಂದಿಗಳಾದ, ಗಣೇಶ್, ನಾಗರಾಜ್, ಮಹೇಶ್, ರಾಜೇಶ್, ಕಿಶೋರ್, ಜಯರಾಮ್ , ಕಿಶೋರ್ ಕೋಟ್ಯಾನ್‌ ರವರು ಆರೋಪಿಗಳ ಪತ್ತೆಗೆ ಸಹಕರಿಸಿರುತ್ತಾರೆ.


Spread the love