ಗುಡ್ ಫ್ರೈಡೆ ದಿನ ನಿಗದಿಯಾಗಿದ್ದ ಸಿಇಟಿ ಪರೀಕ್ಷೆ ದಿನಾಂಕ ಬದಲಾವಣೆ

Spread the love

ಗುಡ್ ಫ್ರೈಡೆ ದಿನ ನಿಗದಿಯಾಗಿದ್ದ ಸಿಇಟಿ ಪರೀಕ್ಷೆ ದಿನಾಂಕ ಬದಲಾವಣೆ

ಬೆಂಗಳೂರು: ಎಪ್ರಿಲ್ ತಿಂಗಳ 18 ಗುಡ್ ಫ್ರೈಡೆಯಂದು ನಿಗದಿಯಾಗಿದ್ದ ಉನ್ನತ ವಿದ್ಯಾಭ್ಯಾಸಕ್ಕೆ ನಿರ್ಧರಿತವಾಗಿರುವ ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ)ಯನ್ನು ಎಪ್ರಿಲ್ 15ನೇ ತಾರಿಕಿಗೆ ನಿಗದಿಪಡಿಸಲು ನಿರ್ಧರಿಸಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ ಸಿ ಸುಧಾಕರ್ ಅವರು ತಿಳಿಸಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ನಿರ್ಧರಿತವಾಗಿರುವ ಸಿ.ಇ.ಟಿ (ಸಾಮಾನ್ಯ ಪ್ರವೇಶ ಪರೀಕ್ಷೆ)ಯು ಏಪ್ರಿಲ್ ತಿಂಗಳ 16, 17 ಮತ್ತು 18ನೇ ತಾರೀಕಿನಂದು ನಡೆಲು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ಧರಿಸಿರುತ್ತಾರೆ. ಏಪ್ರಿಲ್ ತೀಂಗಳ 16,17,18ನೇ ದಿನಗಳು ಕ್ರೈಸ್ತ ಸಮುದಾಯಕ್ಕೆ ಪವಿತ್ರವಾದ ವಾರವಾಗಿದೆ. “18 ರಂದು ಗುಡ್ ಪ್ರೈಡೆ ” ಸರ್ಕಾರಿ ರಜೆಯಿದೆ. ಅನೇಕ ಕ್ರೈಸ್ತ ಸಂಘಗಳು ಮೇಲಿನ ಪರೀಕ್ಷೆಗಳಿಗೆ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಕ್ರೈಸ್ತ ಧರ್ಮಕ್ಕೆ ಸೇರಿದ ಸಾವಿರಾರು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಭಾಗವಹಿಸಲು ಈಗಾಗಲೇ ಅರ್ಜಿಯನ್ನು ಸಲ್ಲಿಸಿರುತ್ತಾರೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿಸೋಜಾ ರವರು ವಿಧಾನ ಪರಿಷತ್ತಿನ ಕಲಾಪದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು.

ಕ್ರೈಸ್ತ ಸಮುದಾಯದ ಅತ್ಯಂತ ಪ್ರಮುಖವಾದ ಈ ವಾರವನ್ನು “ಹೋಲಿ ವೀಕ್” ಎಂದು ಕರೆಯುತ್ತಾರೆ. ಸೋಮವಾರದಿಂದ ಆದಿತ್ಯವಾರದವರೆಗೆ ಕ್ರೈಸ್ತರು ಉಪವಾಸ ಮತ್ತು ಚರ್ಚ್ ಗಳಲ್ಲಿ ಪ್ರಾರ್ಥನೆಗಳಲ್ಲಿ ತೊಡಗಿರುತ್ತಾರೆ, ಅಲ್ಲದೇ ಈವರೆಗೆ ನಡೆದ ಎಲ್ಲಾ ಸಿಇಟಿ ಪರೀಕ್ಷೆಗಳು  ಶನಿವಾರ ಮತ್ತು ಆದಿತ್ಯವಾರ ನಡೆಸಲಾಗಿದೆ. ಕ್ರೈಸ್ತ ಸಮುದಾಯದ ಪವಿತ್ರವಾದ ಏಸು ಕ್ರಿಸ್ತರನ್ನು ಶಿಲುಬೆಗೆ ಏರಿಸಿದ ದಿನವಾಗಿರುತ್ತದೆ. ರಾಜ್ಯ ಸರ್ಕಾರ ನೀಡಿದ ರಜೆಯನ್ನು ಗಮನಿಸದೇ ಇರುವುದರಿಂದ, ಇದನ್ನು ಪುನರ್ ಪರಿಶೀಲಿಸಬೇಕೆಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿಸೋಜಾ ರವರು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಎಲ್ಲಾ ಅಂಶಗಳನ್ನು ಗಮನಿಸಿ, ರಾಜ್ಯ ಸರ್ಕಾರವು ಕ್ರೈಸ್ತ ಧರ್ಮದ ವಿದ್ಯಾರ್ಥಿಗಳ ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ದಿನಾಂಕ:18.04.2025 ರಂದು ನಿಗದಿಯಾಗಿರುವ ಕನ್ನಡ ಭಾಷೆ ಪರೀಕ್ಷೆಯನ್ನು ದಿನಾಂಕ:15.04.2025ಕ್ಕೆ ನಿಗದಿಪಡಿಸಲು ನಿರ್ಧರಿಸಿದೆ ಸಚಿವರು ವಿಧಾನಪರಿಷತ್ತಿನಲ್ಲಿ ಉತ್ತರ ನೀಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments