“ಗುಡ್ ಫ್ರೈಡೆ” ರಜೆಯನ್ನು ರದ್ದುಪಡಿಸುವ ವಿರುದ್ದ ಮಂಗಳೂರು ಧರ್ಮಪ್ರಾಂತ್ಯದಿಂದ ಮುಖ್ಯಮಂತ್ರಿಗೆ ಮನವಿ

Spread the love

“ಗುಡ್ ಫ್ರೈಡೆ” ರಜೆಯನ್ನು ರದ್ದುಪಡಿಸುವ ವಿರುದ್ದ ಮಂಗಳೂರು ಧರ್ಮಪ್ರಾಂತ್ಯದಿಂದ ಮುಖ್ಯಮಂತ್ರಿಗೆ ಮನವಿ

ಮಂಗಳೂರು: ಶುಭ ಶುಕ್ರವಾರದ (“ಗುಡ್ ಫ್ರೆøಡೆ) ರಜೆಯನ್ನು ರದ್ದು ಮಾಡಲು ಸರಕಾರವು ನಡೆಸುತ್ತಿರುವ ಆಲೋಚನೆಯ ವಿರುದ್ದ ಮಂಗಳೂರು ಧರ್ಮಪ್ರಾಂತ್ಯದ ನಿಯೋಗವು ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿಗೆ ಜೂನ್ 1ರಂದು ಮನವಿ ಸಲ್ಲಿಸಿತು.

ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ವಂದನೀಯ ಮ್ಯಾಕ್ಸಿಂ ನೊರೊನ್ಹಾರವರ ಮುಂದಾಳತ್ವದಲ್ಲಿ ನಿಯೋಗವು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ರವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ಜಿಲ್ಲಾಧಿಕಾರಿಯವರು, ಕ್ರೈಸ್ತ ಸಮುದಾಯದ ಈ ಬೇಡಿಕೆಯನ್ನು, ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

ನಿಯೋಗದಲ್ಲಿ, ವಂದನೀಯ ವಿಕ್ಟರ್ ವಿಜೆಯ್ ಲೋಬೊ, ಸಾರ್ವಜನಿಕ ಸಂಪರ್ಕಾಧಿಕಾರಿ ಮಂಗಳೂರು ಧರ್ಮಪ್ರಾಂತ್ಯ, ವಂದನೀಯ ಆಂಟನಿ ಶೆರಾ, ಕಾರ್ಯದರ್ಶಿ ಕಥೋಲಿಕ ವಿದ್ಯಾ ಮಂಡಳಿ, ವಂದನೀಯ ಜೆ,ಬಿಕ್ರಾಸ್ತಾ , ಕಾರ್ಯದರ್ಶಿ ಶ್ರೀ ಸಾಮಾನ್ಯರ ಆಯೋಗ, ವಂದನೀಯ ರಿರ್ಚಾಡ್ ಡಿಸೋಜ, ನಿರ್ದೇಶಕರು ಕೆನಾರಾ ಸಂಪರ್ಕ ಕೇಂದ್ರ, ಸುಶೀಲ್ ನೊರೊನ್ಹಾ, ಸದಸ್ಯರು, ಕಥೋಲಿಕ್ ಕೌನ್ಸಿಲ್ಆಫ್ಇಂಡಿಯಾ, ರಾಯ್ಕ್ಯಾಸ್ತಲಿನೊ, ಮಾಜಿ ಅಧ್ಯಕ್ಷರು ಕರ್ನಾಟಕ ಕೊಂಕಣಿ ಸಾಹಿತ್ಯಆಕಾಡೆಮಿ ಇವರುಗಳು ಉಪಸ್ಥಿತರಿದ್ದರು


Spread the love