Home Mangalorean News Kannada News ಗೂಂಡಾ ಕಾಯ್ದೆಯಡಿ ಪ್ರವೀಣ್ ಖಾಂಡ್ಯ ಬಂಧನ

ಗೂಂಡಾ ಕಾಯ್ದೆಯಡಿ ಪ್ರವೀಣ್ ಖಾಂಡ್ಯ ಬಂಧನ

Spread the love

ಗೂಂಡಾ ಕಾಯ್ದೆಯಡಿ ಪ್ರವೀಣ್ ಖಾಂಡ್ಯ ಬಂಧನ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒಟ್ಟು 33 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಖಾಂಡ್ಯ ಪ್ರವೀಣ್ ನನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶದ ಹಿನ್ನಲೆಯಲ್ಲಿ ಪೋಲಿಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಗುಲ್ಬರ್ಗ ಜೈಲಿಗೆ ಕಳುಹಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರು ಚಿಕ್ಕಮಗಳೂರು ತಾಲೂಕಿನ ದೇವದಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾಂಡ್ಯ ಎಂಬಲ್ಲಿ ಎಚ್ ಕೆ ಪ್ರವೀಣ್ ಅಲಿಯಾಸ್ ಖಾಂಡ್ಯ ಪ್ರವೀಣ್ ಎಂಬ ಕುಖ್ಯಾತಿ ಹೊಂದಿರುವ ಈತನಿಗೆ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡದಂತೆ ಪೋಲಿಸ್ ಅಧಿಕಾರಿಗಳೂ ಈ ಮೊದಲು ಅನೇಕ ಸಲ ಎಚ್ಚರಿಕೆ ನೀಡಿದ್ದರು ಆದರೆ ಕ್ರಿಮಿನಲ್ ಚಟುವಟಿಕೆಯೊಂದಿಗಿನ ತನ್ನ ನಡವಳಿಕೆಯನ್ನು ಬದಲಾಯಿಸಿದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಪೋಲಿಸರು ಆರೋಪಿ ಪ್ರವೀಣ್ ಖಾಂಡ್ಯ ವಿರುದ್ದ ವಿವರವಾದ ವರದಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ನೀಡಲಾಗಿತ್ತು.
ಆರೋಪಿಯ ಮೇಲೆ ಕರ್ನಾಟಕ ಪ್ರಿವೆನ್ಸನ್ ಆಫ್ ಡೇಂಜರಸ್ ಆಕ್ಟಿವಿಟಿಸ್ ಆಫ್ ಬ್ರೂಟ್ ಲೇಗರ್ಸ್, ಡ್ರಗ್ ಅಫೆಂಡರ್ಸ್, ಗ್ಯಾಂಬ್ಲರ್ಸ್, ಗೂಂಡಾಸ್, ಇಮ್ಯಾರಲ್ ಟ್ರಾಫಿಕ್ ಅಂಫೆಂಡರ್ಸ್ ಸ್ಲಂ ಗ್ರ್ಯಾಬರ್ಸ್ ಕಾಯ್ದೆ 1985 ಕಲಂ 3(2) ಮತ್ತು 01.12.2016 ರಂತೆ ಜಿಲ್ಲಾ ದಂಡಾಧಿಕಾಇರಗೆ ಇರುವ ಪ್ರದತ್ತವಾದ ಅಧಿಕಾರವನ್ನ ಚಲಾಯಿಸಿ ಬಂಧನಾಧೇಶವನ್ನು ಹೊರಡಿಸಲಾಗಿತ್ತು. ಅದರಂತೆ ಪ್ರವೀಣನನ್ನು ಬಂಧಿಸಿರುವ ಪೋಲಿಸರು ಬೆಂಗಾವಲಿನಲ್ಲಿ ಗುಲ್ಬರ್ಗಾ ಜೈಲಿಗೆ ಕರೆದೊಯ್ದಿದ್ದಾರೆ.
ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣದ ಸಂಬಂಧ ಪ್ರವೀಣ್ ಖಾಂಡ್ಯ ಪ್ರಮುಖ ಆರೋಪಿಯಾಗಿದ್ದು, ಬಳಿಕ ಈತ ಆಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು, ಸಿಐಡಿ ಪೋಲಿಸರು ಈತನನ್ನು ಜನವರಿ 16ರವರೆಗೆ ವಿಚಾರಣೆಗೆ ಒಳಪಡಿಸಿದ್ದರು.
ಗೂಂಡಾ ಕಾಯ್ದೆಯ ಈ ಬಂಧನವು ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಎಚ್ಚರಿಕೆ ಸಂದೇಶವಾಗಿದೆ ಎಂದು ಅಣ್ಣಾಮಲೈ ಎಚ್ಚರಿಸಿದ್ದಾರೆ.


Spread the love
1 Comment
Inline Feedbacks
View all comments
umakanth
7 years ago

praveen khadya is a goonda

wpDiscuz
Exit mobile version