ಗೃಹರಕ್ಷಕಿಯರಿಗೆ ಒತ್ತಡ ನಿರ್ವಹಣೆ ಕುರಿತು ವಿಶೇಷ ತರಬೇತಿ

Spread the love

ಗೃಹರಕ್ಷಕಿಯರಿಗೆ ಒತ್ತಡ ನಿರ್ವಹಣೆ ಕುರಿತು ವಿಶೇಷ ತರಬೇತಿ

ಮಂಗಳೂರು : ವಿಶ್ವ ಮಹಿಳಾ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಒತ್ತಡ ನಿರ್ವಹಣೆಯ ಬಗ್ಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಅನ್ವೇಷನಮ್ ಇದರ ಸಂಸ್ಥಾಪಕಿ ಸಚಿತಾ ನಂದಗೋಪಾಲ್ ತರಭೇತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಸೆಂಟರ್ ಫಾರ್ ಇಂಟರ್‍ಗ್ರೇಟೆಡ್ ಲರ್ನಿಂಗ್ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ಕಾಲೇಜು, ಹಿರಿಯಡ್ಕ ಇಲ್ಲಿನ ಪ್ರಾಧ್ಯಾಪಕಿ ಸುಮನ ಸುಧಾಕರ, ಮಾತನಾಡಿ ಮಹಿಳೆಯರು ಮತ್ತು ಪುರುಷರು ವಾಹನದ ಎರಡು ಚಕ್ರಗಳಿದ್ದಂತೆ ಹಾಗೂ ಮಹಿಳೆಯರು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿಕೊಂಡು ಹೋಗಬೇಕು ಎಂದು ನುಡಿದರು.

ನಿಸ್ವಾರ್ಥ ಸೇವೆಯನ್ನು ಮಾಡುವ ಗೃಹರಕ್ಷಕಿಯರಿಗೆ ಆರೋಗ್ಯದ ಬಗ್ಗೆ ಗಮನಕೊಡಬೇಕು ಮತ್ತು ವೈಯಕ್ತಿಕ ಜೀವನಕ್ಕೂ ಮಹತ್ವ ಕೊಡಬೇಕು. ಮುಂದಿನ ದಿನಗಳಲ್ಲಿ ಗೃಹರಕ್ಷಕರ ಸಾಧಕ-ಭಾಧಕಗಳನ್ನು ಅರಿತು ಸರ್ಕಾರದಿಂದ ಸವಲತ್ತು ಹಾಗೂ ಮೀಸಲಾತಿಯನ್ನು ದೊರಕಿಸುವ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡಬೇಕು ಎಂದರು.

ಗೃಹರಕ್ಷಕ ದಳದ ಇಬ್ಬರು ಗೃಹರಕ್ಷಕಿಯರಾದ ನಮಿತಾ ಬಾಲಕೃಷ್ಣ ಮತ್ತು ಶಾಂತಿ ಡಿ.ಪಿ. ಇವರಿಗೆ ¸ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹರಕ್ಷಕ ದಳದ ಸಮಾದೇಷ್ಟ ಡಾ|| ಮುರಲಿ ಮೋಹನ ಚೂಂತಾರು ವಹಿಸಿದ್ದರು.

ಸುಮಾರು 30 ಮಂದಿ ಗೃಹರಕ್ಷಕಿಯರು ಒತ್ತಡ ನಿರ್ವಹಣೆಯ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಸೆಂಟರ್ ಫಾರ್ ಇಂಟರ್‍ಗ್ರೇಟೆಡ್ ಲರ್ನಿಂಗ್ ಮಂಗಳೂರು ಇದರ ಸ್ಥಾಪಕ ನಂದಗೋಪಾಲ್, ಹಿರಿಯ ಗೃಹರಕ್ಷಕರಾದ ರಮೇಶ್ ಭಂಡಾರಿ, ದಿವಾಕರ, ಹಾಗೂ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.


Spread the love