ಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾ:ಸಚಿವ ಜಾರ್ಜ್
ಬೆಂಗಳೂರು: ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಫಲಾನುಭವಿಗಳಿಗೆ ಸರಿಯಾಗಿ ಹಣ ಪಾವತಿ ಮಾಡದೇ ಮೋಸ ಮಾಡುತ್ತಿದೆ ಎಂಬ ಆಕ್ರೋಶ ಕೇಳಿಬರುತ್ತಿದ್ದು, ಈ ನಡುವಲ್ಲೇ ಸಚಿವ ಕೆಜೆ ಜಾರ್ಜ್ ಅವರು ನೀಡಿರುವ ಹೇಳಿಕೆಯೊಂದು ವಿವಾದ ಸೃಷ್ಟಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಿಂಗಳು ತಿಂಗಳು ಹಣ ಹಾಕುವುದಕ್ಕೆ ಅದೇನು ಸಂಬಳನಾ? ಹಾಕುತ್ತಾರೆ ಬಿಡಿ ಎಂದು ಬೇಜವಾಬ್ಧಾರಿಯುತ ಹೇಳಿಕೆ ನೀಡಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಕೂಡ ಹಾರಿಕೆ ಉತ್ತರ ನೀಡಿದರು. ಸಿಎಂ ಸಿದ್ದರಾಮಯ್ಯ ಯಾವುದೇ ಗ್ಯಾರಂಟಿ ನಿಲ್ಲಿಸಲ್ಲ, ಸದ್ಯದಲ್ಲೇ ಹಣ ಹಾಕುತ್ತೇವೆ ಎಂದು ಭರವಸೆ ಹೇಳಿದರು.
ಈ ನಡುವೆ ಗ್ಯಾರಂಟಿ ನೀಡುತ್ತೇವೆ ಎಂದು ಘೋಷಿಸಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರದ ಸಚಿವರಿಂದ ಇಂತಹ ಬೇಜವಾಬ್ಧಾರಿಯುತ ಉತ್ತರ ಬಂದಿರುವುದಕ್ಕೆ ಸಾರ್ವಜನಿಕಕರಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.