Home Mangalorean News Kannada News ಗೆಳೆಯರೊಂದಿಗೆ ಮರುವಾಯಿ ಹೆಕ್ಕಲು ಹೊಗಿದ್ದ ಯುವಕ ಫಲ್ಗುಣಿ ನದಿಯಲ್ಲಿ ಮುಳುಗಿ ಸಾವು

ಗೆಳೆಯರೊಂದಿಗೆ ಮರುವಾಯಿ ಹೆಕ್ಕಲು ಹೊಗಿದ್ದ ಯುವಕ ಫಲ್ಗುಣಿ ನದಿಯಲ್ಲಿ ಮುಳುಗಿ ಸಾವು

Spread the love

ಗೆಳೆಯರೊಂದಿಗೆ ಮರುವಾಯಿ ಹೆಕ್ಕಲು ಹೊಗಿದ್ದ ಯುವಕ ಫಲ್ಗುಣಿ ನದಿಯಲ್ಲಿ ಮುಳುಗಿ ಸಾವು

ಮಂಗಳೂರು: ಗೆಳೆಯರೊಂದಿಗೆ ಮರುವಾಯಿ ಹೆಕ್ಕಲು ಹೊಗಿದ್ದ ಯುವಕನೋರ್ವ ಮರವೂರಿನ ಬಳಿ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತ ಯುವಕನ್ನು ಕಾವೂರು ಪಳನೀರ್ ಕಟ್ಟೆ ನಿವಾಸಿ ಯುವ ಛಾಯಾಗ್ರಾಹಕ ಕೌಶಿಕ್ (22) ಎಂದು ಗುರುತಿಸಲಾಗಿದೆ. ಇವರು ಕಾವೂರಿನಲ್ಲಿ ದಿಯಾ ಸ್ಟುಡೀಯೊದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಶನಿವಾರ ಕೌಶಿಕ್ ತನ್ನ ನಾಲ್ವರು ಗೆಳೆಯರೊಂದಿಗೆ ಮರವೂರುಗೆ ಚಿಪ್ಪು (ಮರುವಾಯಿ) ಹೆಕ್ಕಲು ಹೋಗಿದ್ದರು. ಈ ಸಂದರ್ಭ ನೀರಿನಲ್ಲಿ ಮುಳುಗಿದ್ದಾರೆ. ಜತೆಗಿದ್ದವರು ಬೊಬ್ಬೆ ಹಾಕಿದಾಗ ಸ್ಥಳೀಯರೊಬ್ಬರು ಬಂದು ರಕ್ಷಣೆಗೆ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ


Spread the love

Exit mobile version