ಉಡುಪಿ: ಗೆಳೆಯರ ಬಳಗ ಮಾರ್ಪಳ್ಳಿ ಮತ್ತು ಮಹಿಳಾ ಮಂಡಳಿಯ ವಾರ್ಷಿಕೋತ್ಸವ ಶನಿವಾರ ಜರುಗಿತು.
ಕಾರ್ಯಕ್ರಮವನ್ನು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ನಾಯಕ್ ಉದ್ಘಾಟಿಸಿ ಈ ಭಾಗದಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾಮಾಗಾರಿ ಮಾಡಿದ್ದು ಇನ್ನು ಹಲವು ಮೂಲಭೂತ ಸೌಕರ್ಯ ಒದಗಿಸಲು ಸ್ಥಳೀಯ ಸಹಕಾರದಿಂದು ಮಾಡಲು ಸಾಧ್ಯ ಇಗಾಗಲೇ ಸಂಘದ ಸದಸ್ಯರು ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಿದ್ದರೆ. ಈ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು, ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾನವಿ ಮಾಡಲಾಗಿದೆಂದು ತಿಳಿಸಿದರು.
ಅತಿಥಿಗಳಾಗಿ ಅಲೆವೂರು ಶಾಂತಿನೀಕೆತನ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ದಿನೇಶ ಕಿಣಿ ಮಾತನಾಡಿ ಹೆತ್ತವರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಉತ್ತಮ ಗುಣಮಟ್ಟದ ಆಹಾರ ನೀಡಿದರೆ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಲು ಸಾಧ್ಯವೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಆರ್ಯುವೇದ ವೈದ್ಯರಾದ ಕೆ.ಪಿ.ರವಿಚಂದ್ರ ವಹಿಸಿದ್ದರು. ಮುಖ್ಯ , ಉದ್ಯಮಿ ಯತೀಶ ಪೂಜಾರಿ,ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅನುರಾಧ ಉದಯ್, ಅಧ್ಯಕ್ಷೆ ಸುರೇಖ,ಕೋಶಧಿಕಾರಿ ಮಂಜುನಾಥ್ ಶೆಟ್ಟಿಗಾರ್ ,ರಮೇಶ ಮಾರ್ಪಳ್ಳಿ, ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭ ಸ್ಥಳೀಯ ಹಿರಿಯ ಕೃಷಿಕ ಮಾಧವ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಗೌರವಾಧ್ಯಕ್ಷ ಕುಂಞುಮೋನು ಸ್ವಾಗತಿಸಿದರು.ಕಾರ್ಯದರ್ಶಿ ಹರಿಶ್ಚಂದ್ರ ವರದಿ ವಾಚನಗೈದರು. ಸಂಘದ ಅಧ್ಯಕ್ಷ ಉಮೇಶ ಮಾರ್ಪಳ್ಳಿ ವಂದಿಸಿದರು,ಜತೆ ಕಾರ್ಯದರ್ಶಿ ಗಣೇಶ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಮಹಿಳಾ ಮಂಡಳಿಯ ಸದಸ್ಯರಿಂದ ವಿವಿಧ ವಿನೋಧವಳಿ ಮತ್ತು ಸಂಘದ ಸದಸ್ಯರಿಂದ ದಿನಕರ ಭಂಡಾರಿ ಕಣಂಜಾರು ರಚಿತ ನಾಟಕ “ದಾಯೇ ಇಂಚ ಮಲ್ತಾ” ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.