Home Mangalorean News Kannada News ಗೊತ್ತು-ಗುರಿ ಇಲ್ಲದ ಅತ್ಯಂತ ಕಳಪೆ ಬಜೆಟ್- ಮಟ್ಟಾರ್ ರತ್ನಾಕರ ಹೆಗ್ಡೆ

ಗೊತ್ತು-ಗುರಿ ಇಲ್ಲದ ಅತ್ಯಂತ ಕಳಪೆ ಬಜೆಟ್- ಮಟ್ಟಾರ್ ರತ್ನಾಕರ ಹೆಗ್ಡೆ

Spread the love

ಗೊತ್ತು-ಗುರಿ ಇಲ್ಲದ ಅತ್ಯಂತ ಕಳಪೆ ಬಜೆಟ್- ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ: ಮುಖ್ಯಮಂತ್ರಿ ಹಾಗೂ ಹಣಕಾಸು ಖಾತೆಗಳನ್ನು ಹೊಂದಿರುವ ಮಾನ್ಯ ಸಿದ್ದರಾಮಯ್ಯನವರು ಮಂಡಿಸಿದ 2018-19 ರ ಸಾಲಿನ ರಾಜ್ಯ ಬಜೆಟ್ ಗೊತ್ತು ಗುರಿ ಇಲ್ಲದ ಅತ್ಯಂತ ಕಳಪೆ ಬಜೆಟ್ ಇದಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ತಿಳಿಸಿದ್ದಾರೆ.

ಬಹಳ ನಿರೀಕ್ಷೆಯನ್ನಿರಿಸಿದ ರೈತರ ಸಾಲ ಮನ್ನಾ ಮಾಡಲಾಗಿಲ್ಲ. ಮೀನುಗಾರಿಕೆಗೆ ಯಾವುದೇ ಹೊಸ ಸವಲತ್ತುಗಳನ್ನು ನೀಡಲಾಗಲಿಲ್ಲ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಜನರ ನಿರೀಕ್ಷೆಯನ್ನು ಮುಟ್ಟುವಲ್ಲಿ ಮಾನ್ಯ ಸಿದ್ದರಾಮಯ್ಯನವರು ವಿಫಲವಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಲ್ಲಿ ಹೊಸ ಬಜೆಟ್ ಮಂಡನೆ ಅನಿವಾರ್ಯ ಎಂದು ಹೆಗ್ಡೆಯವರು ತಿಳಿಸಿದ್ದಾರೆ.


Spread the love

Exit mobile version