Home Mangalorean News Kannada News ಗೋಪಾಡಿ ಮಿತ್ರ ಸಂಗಮದ ವತಿಯಿಂದ ಕರಾವಳಿಯಲ್ಲಿ ಸರಕಾರಿ ಬಸ್ ಓಡಿಸಲು ಮನವಿ

ಗೋಪಾಡಿ ಮಿತ್ರ ಸಂಗಮದ ವತಿಯಿಂದ ಕರಾವಳಿಯಲ್ಲಿ ಸರಕಾರಿ ಬಸ್ ಓಡಿಸಲು ಮನವಿ

Spread the love

ಗೋಪಾಡಿ ಮಿತ್ರ ಸಂಗಮದ ವತಿಯಿಂದ ಕರಾವಳಿಯಲ್ಲಿ ಸರಕಾರಿ ಬಸ್ ಓಡಿಸಲು  ಮನವಿ

ಕುಂದಾಪುರ: ಕರಾವಳಿಯ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಕರ್ಯ ಇಲ್ಲದೇ ಇರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಕರಾವಳಿ ಭಾಗಗಳಲ್ಲಿ ಸರಕಾರಿ ಬಸ್‍ಗಳನ್ನು ಓಡಿಸಬೇಕು ಎಂದು ಜಿಲ್ಲಾ ಪ್ರಸಸ್ತಿ ಪುರಸ್ಕøತ ಸಂಸ್ಥೆಯಾದ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ,ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶಾಲಾ ಸಮಯದಲ್ಲಿ ಸಾಸ್ತಾನದಿಂದ ಪ್ರಾರಂಭಿಸಿ ಕರಾವಳಿಯ ರಸ್ತೆ ಮೂಲಕ ಕೋಡಿಕನ್ಯಾಣ, ಕೋಡಿತಲೆ, ಪಾರಂಪಳ್ಳಿ ಪಡುಕರೆ, ಕೋಟ ಪಡುಕರೆ, ಮಣುರು ಪಡುಕೆರೆ, ಕೊಮೆ, ಕೊರವಡಿ, ಗೋಪಾಡಿಯ ಮೂಲಕ ಬೀಜಾಡಿ ಫಿಶರೀಸ್ ರಸ್ತೆಯ ಮಾರ್ಗವಾಗಿ ಕೆಎಸ್‍ಆರ್‍ಟಿಸಿ ಬಸ್‍ನ್ನು ನಿಗದಿತ ಸಮಯದಲ್ಲಿ ಓಡಿಸಬೇಕೆಂದು ಮನವಿ ಮಾಡಲಾಯಿತು.ಮನವಿಯ ಜತೆಯಲ್ಲಿ ಸರಕಾರಿ ಬಸ್ ಓಡಿಸುವ ಕುರಿತು ಬೀಜಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಡಿದ ನಿರ್ಣಯದ ಪ್ರತಿಯನ್ನು ಲಗತ್ತಿಸಲಾಯಿತು.

ಮನವಿ ಸ್ವೀಕರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಬೈಂದೂರು ಶಾಸಕ ಗೋಪಾಲ ಪೂಜಾರಿ ಮಾತನಾಡಿ ಆದಷ್ಟು ಬೇಗ ಮನವಿಯನ್ನು ಪರಿಶೀಲಿಸಿ ಅಧಿಕಾರಿಗಳ ಮೂಲಕ ಸರ್ವೇನಡೆಸಿ ಬಸ್ ಓಡಿಸಲು ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೀಜಾಡಿ ಮಿತ್ರ ಸಂಗಮದ ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್, ಅಧ್ಯಕ್ಷ ಬಿ.ಜಿ ನಾಗರಾಜ, ಕಾರ್ಯದರ್ಶಿ ಶ್ರೀಕಾಂತ್ ಭಟ್, ಸಂಸ್ಥೆಯ ಸಂಚಾಲಕರಾದ ಚಂದ್ರ ಬಿ.ಎನ್.,ರಾಜೇಶ್ ಆಚಾರ್ಯ,ಗಿರೀಶ್ ಕೆ.ಎಸ್, ಪತ್ರಕರ್ತರಾದ ಚಂದ್ರಶೇಖರ ಬೀಜಾಡಿ, ಐಶ್ವರ್ಯ ಬೀಜಾಡಿ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version