Home Mangalorean News Kannada News ಗೋಲಿಬಾರ್ ಪರಿಹಾರ ತಡೆ ಸರಿಯಲ್ಲ – ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ

ಗೋಲಿಬಾರ್ ಪರಿಹಾರ ತಡೆ ಸರಿಯಲ್ಲ – ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ

Spread the love

ಗೋಲಿಬಾರ್ ಪರಿಹಾರ ತಡೆ ಸರಿಯಲ್ಲ – ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ

ಮಂಗಳೂರು ಗೋಲಿಬಾರ್ ಘಟನೆಯ ಬಗ್ಗೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಘಟನೆಗಳು ಮಾನವೀಯತೆಗೆ ತಕ್ಕದಲ್ಲ. ಒಂದೆಡೆ ಈ ಘಟನೆ ನಡೆಯುವಾಗ ಗುಪ್ತಚಾರ ಇಲಾಖೆವಿದ್ದು ಯಾವುದೇ ಮುನ್ಸೂಚನೆ ಸರಕಾರಕ್ಕೆ ನೀಡದಿರುವುದು ದುರದ್ರಷ್ಟಕರ ಹಾಗೂ ಸರಕಾರದ ವಿಫಲತೆಗೆ ಸಾಕ್ಷಿ. ಈ ಬಗ್ಗೆ ಸರಕಾರ ಗುಪ್ತಚಾರ ಇಲಾಖೆ ಬಗ್ಗೆ ಕ್ರಮ ಕೈಗೊಳ್ಳತ್ತಿರುವುದು ವಿಪರಾಸ್ಯ.

ಸೆಕ್ಷನ್ 144 ಜಾರಿದ್ದು ಕೂಡ ಪೋಲಿಸ್ ಇಲಾಖೆ ಪ್ರಾರಂಭಿಕ ಹಂತದಲ್ಲೇ ತಡೆಯಿಡಿಯಲು ಅವಕಾಶವಿದ್ದರು ತಡೆಯಿಡಿಯದೇ ಅವಕಾಶ ಕೊಟ್ಟದ್ದು ತಪ್ಪು. ಆನಂತರ ನಡೆದ ಘಟನೆಗೆ ಯಾರು ತಪ್ಪು ಯಾರು ಸರಿ ಎಂಬುದಕಿಂತ ಎರಡು ಜೀವ ಬಲಿತೆಗೆದುಕೊಂಡದ್ದು ಇದು ಮಂಗಳೂರು ನಗರದ ಮಹಾ ದೊಡ್ಡ ದುರಂತ.

ಇದೀಗ ಜಾಲತಾಣಗಳಲ್ಲಿ ಪರ ವಿರೊದ್ದ ಅಭಿಪ್ರಾಯಗಳು ವ್ಯಕ್ತವಾಗುವುದು ಅದು ಸರ್ವ ಸಾಮಾನ್ಯ ಆದರೆ ಈ ರಾಜ್ಯದ ಮುಖ್ಯಮಂತ್ರಿಗಳು ನಗರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಮರಣವೊಂದಿದ್ದ ಮನೆಗಳಿಗೆ ಬೇಟಿ ನೀಡದೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುತ್ತಿರುವ ಪ್ರತಿಭಟನೆಕಾರರಾಗಲಿ, ಪೋಲಿಸ್ ಇಲಾಖೆಯ ಸಿಭಂದಿಗಳಾಗಲಿ ಬೇಟಿ ಮಾಡುವುದು ಅವರ ಕರ್ತವ್ಯ ಜವಬ್ದಾರಿ ಮಾನವೀಯತೆ. ಇದು ಯಾವುದೇ ಕೊಲೆ ಅಥವಾ ಅತ್ಯಚಾರ ಪ್ರಕರಣ ವಲ್ಲ. ಇದರಲ್ಲಿ ನೇರ ಅಪರಾದಿಗಳನ್ನು ಬೊಟ್ಟು ಮಾಡುವಂತದಿಲ್ಲ. ಹೀಗಿರುವಾಗ ಮಾನ್ಯ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಪರಿಹಾರವನ್ನು ತಡೆಯಿಡುಯುವುದು ಸರಿಯಲ್ಲ ಮಾತ್ರವಲ್ಲ ಯಾವುದೇ ಧರ್ಮ ಜಾತಿ ಪಂಗಡವನ್ನು ನೋಡದೆ ಗಾಯಾಳುಗಳಾದ ಜನಸಾಮಾನ್ಯರಿಗೆ ಪೋಲೀಸ್ ರವರಿಗೆ ಪರಿಹಾರವನ್ನು ಕೊಡುವುದು ಅವಷ್ಯಕ ಎಂದು ಜೆಡಿಎಸ್ ಮಾಜಿ ರಾಜ್ಯ ಉಪಾಧ್ಯಕ್ಷ ಹಾಗೂ ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಒತ್ತಾಯಿಸಿದ್ದಾರೆ.


Spread the love

Exit mobile version