“ಗೋವಂಶ ರಕ್ಷಿಸುವಂತೆ ಜಗದೊಡೆಯನಿಗೆ ದೂರು” ಕೊಡುವ ಬಗ್ಗೆ ಪೇಜಾವರ ಮಠಾಧೀಶರ ನಿಲುವು ಅನುಷ್ಠಾನಕ್ಕೆ ವಿಹಿಂಪ ಕರೆ
ಇತ್ತೀಚೆಗೆ ಗೋಮಾತೆಯ ಕೆಚ್ಚೆಲು ಕಡಿದ ಘಟನೆ ಸಹಿತ ಗೊವಂಶದ ಮೇಲಾಗುತ್ತಿರುವ ಹೇಯಕ್ರತ್ಯ ಮರುಕಳಿಸದಂತೆ ಗೊವಂಶ ರಕ್ಷಿಸಲು ಜಗದೊಡೆಯನಿಗೆ ದೂರು ಕೊಡುವ ಬಗ್ಗೆ ಪೇಜಾವರ ಮಠಾಧೀಶರು ವಿವಿಧ ಮಠಾಧೀಶರ ಸಹಯೋಗದೊಂದಿಗೆ ಕರೆ ಕೊಟ್ಟಿದ್ದು ಇದನ್ನು ವಿಶ್ವ ಹಿಂದೂ ಪರಿಷತ್ತು ಬೆಂಬಲಿಸುತ್ತಿದ್ದು ಜನವರಿ 23 ರಿಂದ 29 ರವರೆಗೆ ಪ್ರತಿ ಮನೆಯಲ್ಲಿ ದೇವರ ಎದುರು ದೀಪಾವಳಿ ಬೆಳಗಿಸಿ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಶಿವ ಪಂಚಾಕ್ಷರಿ ಜಪ, ಜನವರಿ 25ರಂದು ಉಪವಾಸ, ಮಾಡಿ ಗೊವಂಶ ರಕ್ಷಿಸಲು ಪ್ರಾರ್ಥನೆ ಮಾಡುವಂತೆ ಜನವರಿ 29ರಂದು ದೇವಸ್ಥಾನ ಮಠ ಮಂದಿರಗಳಲ್ಲಿ, ದೈವಸ್ಥಾನ, ಭಜನಾಮಂದಿರಗಳಲ್ಲಿ ಇದರ ಸೂಕ್ತ ಸಮಾಪನ ಮಾಡುವಂತೆ ಇಡೀ ಹಿಂದೂ ಸಮಾಜವನ್ನು ವಿಶ್ವ ಹಿಂದೂ ಪರಿಷತ್ತು ಕರೆ ನೀಡಿದೆ. ಇದನ್ನು ಅನುಷ್ಠಾನಿಸುವಂತೆ ಕಾಶಿ ಮಠಾಧೀಶರು, ಉಡುಪಿ ಅಷ್ಟಮಠಾಧೀಶರು ರಾಮಚಂದ್ರಪುರ ಮಠಾಧೀಶರು, ಕೂಡ್ಲಿ ಶಂಕರ ಮಠಾಧೀಶರು, ಉತ್ತರಾದಿ ಮಠಾಧೀಶರು, ಚಿತ್ರಾಪುರ ಮಠಾಧೀಶರು, ಗುರುಪುರ ಮಠಾಧೀಶರು, ಮಾಣಿಲ ಮಠಾಧೀಶರು, ಮಂತ್ರಾಲಯ ಮಠಾಧೀಶರು, ಸುಬ್ರಹ್ಮಣ್ಯ ಮಠಾಧೀಶರು,ಆರ್ಯ ಈಡಿಗ ಸಂಸ್ಥಾನ ಮಠಾಧೀಶರು, ಭೀಮಕಟ್ಟೆ ಮಠಾಧೀಶರು ಇತ್ಯಾದಿ ಹಲವು ಮಠಾಧೀಶರು ಸಮಾಜಕ್ಕೆ ಕರೆ ನೀಡಿರುತ್ತಾರೆ. ಹಾಗಾಗಿ ನಾವು ಆರಾಧಿಸುವ ಪೂಜನೀಯ ಗೋಮಾತೆಯ ಮೇಲಾಗುತ್ತಿರುವ ರಾಕ್ಷಸೀಯ ಕೃತ್ಯ ಕೊನೆಯಾಗಲು ಹಿಂದೂಗಳು ಈ ಕರೆಯನ್ನು ಅನುಷ್ಠಾನಿಸುವಂತೆ ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.