ಗೋ ಕಳ್ಳರ ಮೇಲೆ ಶೂಟೌಟ್ ಮಾಡಲು ಪೊಲೀಸರಿಗೆ ಆದೇಶ ಮಾಡಬೇಕಾಗುತ್ತದೆ: ಸಚಿವ ಮಂಕಾಳು ವೈದ್ಯ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳತನ ಈ ಹಿಂದಿನಿಂದಲ್ಲೂ ನಡೆಯುತ್ತಾ ಬಂದಿದೆ. ಆದರೆ ಈಗ ನಾವು ಸುಮ್ಮನಿರಲು ಸಾಧ್ಯವಿಲ್ಲ. ಈ ರೀತಿಯ ಪ್ರಕರಣ ಮುಂದುವರಿದರೆ ಗೋ ಕಳ್ಳರ ಮೇಲೆ ಸರ್ಕಲ್ ನಲ್ಲಿ ನಿಲ್ಲಿಸಿ ಶೂಟೌಟ್ ಮಾಡಲು ಪೊಲೀಸರಿಗೆ ಆದೇಶ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಗೋ ಕಳ್ಳತನ ಹೊಸದೇನು ಅಲ್ಲ. ಬಿಜೆಪಿ ಸರಕಾರದಲ್ಲೂ ಸಾಕಷ್ಟು ಗೋ ಕಳ್ಳತನ ಪ್ರಕರಣಗಳಾಗಿವೆ. ಆದರೆ ಅವರು ಸುಮ್ಮನಾಗಿದ್ದರು ಅಂತಾ ನಾವು ಸುಮ್ಮನಿರೋದಕ್ಕೆ ಆಗಲ್ಲ ಎಂದಿದ್ದಾರೆ. ಜಿಲ್ಲೆಯಲ್ಲಿ ಗೋ ಕಳ್ಳತನ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ವಿಷಯದ ಬಗ್ಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನ ಟಿಕೀಸಿದ್ದಾರೆ. ಇವರ ಸರಕಾರ ಇರುವಾಗ ಇನ್ನೂ ಅಧಿಕ ಗೋವು ಕಳ್ಳತವಾಗಿದೆ. ಆದರೆ ಯಾವುದೇ ರೀತಿಯಾದ ಕ್ರಮವಾಗಿರಲಿಲ್ಲ. ಆದರೆ ಈಗ ನಾವು ಯಾವುದೇ ಮುಲಾಜಿಲ್ಲದೆ ಗೋ ಕಳ್ಳರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಹೇಳಿದ್ದೇ ಮಾಡುತ್ತೇವೆ. ಇನ್ನು ಮುಂದೆ ಜಿಲ್ಲೆಯಲ್ಲಿ ಗೋವು ಕಳ್ಳತನ ಮಾಡಿದವ ಮೇಲೆ ಸೂಕ್ತ ಕ್ರಮ ಜಾರಿ ಮಾಡುವಂತೆ ಸೂಚಿಸಲಾಗಿದೆ ಎಂದರು.