ಗೋ ರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಕೊಲೆಗಳು ಬುದ್ದಿವಂತ ಉಡುಪಿ ಜಿಲ್ಲೆಗೆ ಅಂಟಿದ ಕಳಂಕ; ವಿಶ್ವಾಸ್ ಶೆಟ್ಟಿ
ಉಡುಪಿ: ಧರ್ಮ ಗೋ ರಕ್ಷಣೆ ಹೆಸರಲ್ಲಿ ದೌರ್ಜನ್ಯಗಳು ಹಾಗೂ ಕೊಲೆಗಳು ನೆಡೆಯುತ್ತಿರುವುದು ಬುದ್ದಿವಂತ ಜಿಲ್ಲೆ ಎಂದು ಕರೆಸಿಕೊಂಡ ಉಡುಪಿ ಜಿಲ್ಲೆಗೆ ಅಂಟಿದ ಕಳಂಕವಾಗುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಹೇಳಿದ್ದಾರೆ.
ಗೋ ರಕ್ಷಣೆ ಬಗ್ಗೆ ಮಾತಾಡುವ ಸಂಘಟನೆಯವರೇ ಸಾವಿರಾರು ಟನ್ ವಿದೇಶಕ್ಕೆ ರಪ್ಪ್ತಗುತ್ತಿರುವ ಗೋ ಮಾಂಸ ನಿಷೇಧ ಮಾಡಲು ಕೇಂದ್ರ ಸರಕಾರದ ವಿರುದ್ಧ ದ್ವನಿ ಎತ್ತಿ ನಿಮ್ಮದೇ ಸರ್ಕಾರ ಕೇಂದ್ರದಲ್ಲಿ ಇರುವುದು ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಲು ಪ್ರತಿಭಟನೆ ಮಾಡಬೇಕಾಗಿದೆ.
ಯಾವುದೇ ವ್ಯಕ್ತಿ ತಪ್ಪು ಮಾಡಿದರೂ ಶಿಕ್ಷೆ ಕೊಡಲು ಕಾನೂನು ಇದೆ ಇನ್ನೊಬ್ಬರ ಜೀವವನ್ನು ಬಲಿ ತೆಗೆದುಕೊಳ್ಳಲು ನೀವು ಯಾರು?? ಪೋಲಿಸ್ ಅಧಿಕಾರಿಗಳೇ ಈ ಕೊಲೆಯಲ್ಲಿ ಬಾಗಿಯಾಗಿರುವುದು ನೋಡಿದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಗೋ ರಕ್ಷಣೆಯ ಕೆಲವು ಕಾರ್ಯಕರ್ತರಿಗೆ ನನ್ನ ಮನವಿ ನಿಮ್ಮ ತಂದೆ ತಾಯಿಗಳೇ ಗೋವನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತಾರೆ ಮೊದಲು ನಿಮ್ಮ ತಂದೆ ತಾಯಿ ಕುಟುಂಬದವರು ಮಾರಾಟ ಮಾಡುವುದನ್ನು ನಿಲ್ಲಿಸಿ ಅವರನ್ನು ಸರಿ ಮಾಡಿ ನಂತರ ಸಮಾಜವನ್ನು ಸರಿಮಾಡಿ
ಸಂಘ ಪರಿವಾರದ ಕಾರ್ಯಕರ್ತನಾದ ಪ್ರವೀಣ್ ಪೂಜಾರಿಯನ್ನೇ ಇಂತಹ ವಿಚಾರದಲ್ಲಿ ಕೊಲೆ ಮಾಡಿದ್ದಿರಿ ಗೋ ರಕ್ಷಣೆ ಹೆಸರಲ್ಲಿ ಕೊಲೆ ಮಾಡುವುತ್ತಿರಿ ಎಂದರೇ ನಿಮ್ಮನ್ನು ಬೆಳಸಿದ ನಾಯಕರ ಬಗ್ಗೆ ಸಮಾಜ ಯೋಚಿಸಬೇಕಾಗಿದೆ ಬಿಜೆಪಿ ನಾಯಕರೆ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ದರ್ಮ ಗೋ ರಕ್ಷಣೆ ಹೆಸರಲ್ಲಿ ಅಮಾಯಕ ಯುವಕರಿಗೆ ಇಲ್ಲ ಸಲ್ಲದ್ದನ್ನು ತಲೆಗೆ ತುಂಬಿ ಅವರ ಜೀವನ ಹಾಗೂ ಅವರನ್ನೇ ನಂಬಿಕೊಂಡ ಕುಟುಂಬವನ್ನು ದಯವಿಟ್ಟು ಬೀದಿಪಾಲು ಮಾಡಬೇಡಿ ಅವರ ಬಡತನವನ್ನು ಬಂಡವಾಳ ಮಾಡಿಕೊಂಡು ಅವರನ್ನು ನೀವು ಬೇಕಾದ ರೀತಿಯಲ್ಲಿ ಬಳಸಿಕೊಂಡು ಅವರ ಜೀವನ ಬಲಿಕೊಟ್ಟರೇ ಯುವಕರ ಕುಟುಂಬದ ಶಾಪ ನಿಮ್ಮ ಮಕ್ಕಳಿಗೂ ತಾಗಬಹುದು ಅದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಿ ಎಂದು ವಿಶ್ವಾಸ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.