ಗೌರಿ ಲಂಕೇಶ್ ಹತ್ಯಾಕೋರರನ್ನು ಬಂಧಿಸುವಂತೆ ಕೆಥೊಲಿಕ್ ಸಭಾ ಆಗ್ರಹ
ಉಡುಪಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸುವುದರೊಂದಿಗೆ ಹತ್ಯೆಕೋರರನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸಭಾ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಪತ್ರಕರ್ತೆಯಾಗಿ ಸಮಾಜದ ಆಗು-ಹೋಗುಗಳಲ್ಲಿಯ ಅಂಕು-ಡೊಂಕುಗಳನ್ನು ಚಿಂತಕಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವುಗಳಿಗೆ ಸ್ಪಂದಿಸುತ್ತಿದ್ದ ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿರುವುದು ಖಂಡನೀಯ. ನಕ್ಸಲ್‍ವಾದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರಕಾರಕ್ಕೆ ಸಹಕಾರ ನೀಡುತ್ತ, ಅನ್ಯಾಯಗಳನ್ನು ಕೆಚ್ಚೆದೆಯಿಂದ ಪ್ರತಿಭಟಿಸುತ್ತಿದ್ದ ವ್ಯಕ್ತಿಯ ಅಂತ್ಯವು ಈ ರೀತಿಯಲ್ಲಿ ಆಗುತ್ತಿರುವುದು ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಬಡವರ ಪಾಲಿನ ಅಕ್ಕನಾಗಿ, ಅನ್ಯಾಯಕ್ಕೆ ಒಳಗಾದ ಶೋಷಿತರ ತಾಯಿಯಾಗಿ, ಉಚ್ಚ ವಿಚಾರಧಾರೆಗಳಿಂದ ಸಮಾಜವನ್ನು ಜಾಗೃತಗೊಳಿಸುತ್ತಿದ್ದಂತಹ ಗೌರಿ ಲಂಕೇಶ್ ಹತ್ಯೆಯನ್ನು ಪ್ರಬಲವಾಗಿ ಖಂಡಿಸುವುದಲ್ಲದೆ, ಶೋಷಿತರ ಧ್ವನಿಯಾಗಿರುವ ಧ್ವನಿಯನ್ನು ಈ ರೀತಿಯಾಗಿ ಅಂತ್ಯಗೊಳಿಸುವಂತಹುದು ನಿಜಕ್ಕೂ ಆಘಾತಕಾರಿ ಸಂಗತಿ. ಈ ರೀತಿಯಲ್ಲಿ ಹತ್ಯೆ ಮಾಡಿರುವಂತಹರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ ಮುಂದೆ ಸಮಾಜದಲ್ಲಿ ಇಂತಹ ಘಟನೆಗಳು ನಡಯದಂತೆ ಕಟ್ಟುಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ನಿಯೋಗದಲ್ಲಿ ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ವಲೇರಿಯನ್ ಆರ್. ಫೆರ್ನಾಂಡಿಸ್, ಕಾರ್ಯದರ್ಶಿ ಜಸಿಂತಾ ಕುಲಾಸೊ, ಉಡುಪಿ ವಲಯಾಧ್ಯಕ್ಷೆ ಮೇರಿ ಡಿಸೋಜಾ, ಪದಾಧಿಕಾರಿಗಳಾದ ಮ್ಯಾಕ್ಷಿಮ್ ಡಿಸೋಜಾ, ಮರಿಟಾ ಲೂವಿಸ್, ಲೂಕ್ ಡಿಸೋಜಾ, ಫಿಲಿಪ್ ಡಿಲೀಮಾ, ಜೊಸೇಫ್ ರೆಬೆಲ್ಲೊ, ವಿನ್ಸೆಂಟ್ ಕ್ರಾಸ್ತಾ ಉಪಸ್ಥಿತರಿದ್ದರು.
Oh, the hypocrisy of these organisations who don’t think twice to play the communal card in everything!! When youth from Kerala and Bhatkala joined ISIS, these guys didn’t utter a word. When RSS members were murdered including one in our own mangaluru district, these guys kept silent. Fatwas to behead Kamlesh Tiwari, Tarek Fatah and Taslima Nasreen didn’t bother them. When the ‘church attacks’ right after Modi’s election turned out to be false, did they come out and apologize? When christian nuns were killed and priest was abducted in Yemen, did they come out against Islamic terrorism? Now…they are all… Read more »