ಗೌರಿ ಲಂಕೇಶ್ ಹತ್ಯೆ: ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಖಂಡನೆ
ಉಡುಪಿ: ರಾಜ್ಯದ ಹಿರಿಯ ಪತ್ರಕರ್ತೆ ಹಾಗು ಪ್ರಗತಿಪರ ಚಿಂತಕಿಯಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆಯನ್ನು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಅಲ್ಮೇಡಾ ಅವರು ಈ ದೇಶದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಸ್ವಾತಂತ್ರ್ಯವಿದೆ. ಆದರೆ ಇಂತಹ ಚಿಂತಕರನ್ನು ಗುಂಡಿಕ್ಕಿ ಸಾಯಿಸುವ ಮೂಲಕ ಕೋಮು ಶಕ್ತಿಗಳ ವಿರುದ್ಧ ಯಾರೂ ಮಾತನಾಡದಂತೆ ಬೆದರಿಕೆ ಹಾಕಲಾಗಿತ್ತು. ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ ಎಂಬ ಅನುಮಾನ ಮೂಡುತ್ತಿದೆ. ಗೌರಿ ಲಂಕೇಶ್ ಅವರಂತಹ ಪ್ರಗತಿಪರ ಹೆಣ್ಣುಮಗಳನ್ನು ಗುಂಡಿಕ್ಕಿ ಕೊಂದಿರುವುದು ಕೋಮುಶಕ್ತಿಗಳ ಹೇಡಿತನವನ್ನು ತೋರಿಸುತ್ತದೆ.
ಸರಕಾರ ಕೂಡಲೇ ಈ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ಹಿಂದಿರುವ ಕಾಣದ ಕೈದಿಗಳನ್ನು ಬಂದಿಸಬೇಕು. ಪ್ರಗತಿಪರ ಚಿಂತನೆಗಳನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುತ್ತಿರುವ ದುಷ್ಟ ಶಕ್ತಗಳನ್ನು ಮಟ್ಟ ಹಾಕಬೇಕು.
ಈ ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ದಕ್ಷ ಅಧಿಕಾರಿಗಳ ತಂಡದಿಂದ ತನಿಖೆ ನಡೆಯಬೇಕು. ಈ ಹಿಂದೆ ನಡೆದದ್ದ ಡಾ.ಎಂ.ಎಂ ಕಲಬುರ್ಗಿ ಅವರ ಹಂತಕರು ಎರಡು ವರ್ಷವಾದರು ಪತ್ತೆಯಾಗಿಲ್ಲ. ಈ ಕೊಲೆಗು ಗೌರಿ ಲಂಕೇಶ್ ಅವರ ಕೊಲೆಗು ಸಾಮ್ಯತೆ ಇರುವುದು ಗೊತ್ತಾಗಿದೆ. ಇದು ಕೋಮುವಾದಿಗಳ ಕ್ರತ್ಯವಲ್ಲದೆ ಬೇರೆ ಯಾರದ್ದು ಆಗಿರಲು ಸಾದ್ಯವಿಲ್ಲ.
ಇಂತಹ ಕೋಮುಶಕ್ತಿಗಳನ್ನು ಬೇರು ಸಮೇತ ಕಿತ್ತು ಹಾಕಿದ್ದಲ್ಲಿ, ಪ್ಯಾಸಿಸ್ಟ್ ಶಕ್ತಿ ಇಡೀ ದೇಶದಲ್ಲಿ ವಿಜ್ರಂಭಿಸಿ ನರಕ ಸ್ರಷ್ಠಿಯಾಗುತ್ತದೆ. ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.