Home Mangalorean News Kannada News ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಕಾಲೇಜುಗಳ ವಿರುದ್ದ ಕ್ರಮಕ್ಕೆ ಆಗ್ರಹ

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಕಾಲೇಜುಗಳ ವಿರುದ್ದ ಕ್ರಮಕ್ಕೆ ಆಗ್ರಹ

Spread the love

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಕಾಲೇಜುಗಳ ವಿರುದ್ದ ಕ್ರಮಕ್ಕೆ ಆಗ್ರಹ

ಮಂಗಳೂರು: `ಸ್ವಾತಂತ್ರ್ಯ ಮತ್ತು ಭಾಂದವ್ಯದೆಡೆಗೆ ನಡಿಗೆ’ಯ  ಹೆಸರಿನಡಿಯಲ್ಲಿ   ಗೌರಿ ಲಂಕೇಶ ಇವರ ಹತ್ಯೆಯನ್ನು ಖಂಡಿಸಿ, ಮಂಗಳೂರಿನಲ್ಲಿ ನಡೆಸಿದ ಜಾಥಾದಲ್ಲಿ ನಗರದ ಕೆಲವೊಂದು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. . ಇಂತಹ ಕಾರ್ಯಕ್ರಮಗಳಿಗೆ  ವಿಧ್ಯಾರ್ಥಿಗಳನ್ನು ಕಳುಹಿಸಿರುವ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ಮತ್ತು ಅನ್ಯ ಸಂಘಟನೆಗಳ ವತಿಯಿಂದ ಮಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ  ಜಂಟಿ ನಿರ್ದೇಶಕರಿಗೆ ಮನವಿಯನ್ನು ನೀಡಲಾಯಿತು.

`ಸ್ವಾತಂತ್ರ್ಯ ಮತ್ತು ಭಾಂದವ್ಯದೆಡೆಗೆ ನಡಿಗೆ’ಯ  ಹೆಸರಿನಡಿಯಲ್ಲಿ   ಗೌರಿ ಲಂಕೇಶ ಇವರ ಹತ್ಯೆಯನ್ನು ಖಂಡಿಸಿ, ಮಂಗಳೂರಿನಲ್ಲಿ ಜಾಥಾ ನಡೆಸಲಾಯಿತು.

ಜಾಥಾದಲ್ಲಿ ಸೇಂಟ್ ಅಲೋಶಿಯಸ್ ಮತ್ತು ರೋಶನಿ ಕಾಲೇಜ್‍ನ ವಿಧ್ಯಾರ್ಥಿಗಳೂ ಸೇರಿದಂತೆ ಕೆಲವು ಕಾಲೇಜುಗಳ ವಿಧ್ಯಾರ್ಥಿಗಳನ್ನು ಸಹಭಾಗಿ ಮಾಡಿಕೊಳ್ಳಲಾಯಿತು. ಅಲ್ಲದೇ ಕಾಲೇಜಿನ ಸಮಯದಲ್ಲೇ ಸೇಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕರು ಸಹ ಈ ಜಾಥಾದಲ್ಲಿ ಭಾಗವಹಿಸಿದ್ದರು. ಈ ಜಾಥಾದ ಕೊನೆಯ ಸಭಾ ಕಾರ್ಯಕ್ರಮದಲ್ಲಿ ಹಿಂದೂ ವಿರೋಧಿ ವಿಚಾರಗಳನ್ನು ಮಂಡಿಸಲಾಯಿತು.

ಇದು ಜಾತ್ಯಾತೀತ ರಾಷ್ಟ್ರ .ಯಾವುದೇ ಹತ್ಯೆಯನ್ನು ನಾವು ಖಂಡಿಸಬೇಕಾಗಿದೆ . ಶರತ್ ಮಡಿವಾಳ ಇವರ ಹತ್ಯೆಯನ್ನು ಖಂಡಿಸಿ ಆಂದೋಲನವನ್ನು ನಡೆಸಿದರೆ ಕಾಲೇಜು ವಿದ್ಯಾರ್ಥಿಗಳನ್ನು ಆಂದೋಲನದಲ್ಲಿ ಭಾಗವಹಿಸಲು ಅನುಮತಿ ಸಿಗುತ್ತಿತ್ತೆ? ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಂಡು ಯಾವುದೇ ಒಂದು ಧರ್ಮದ ವಿರುದ್ಧ ಮಾತನಾಡುವುದು ಸಂವಿಧಾನ ವಿರೋಧಿಯಾಗಿದೆ.

ಜಂಟಿ ನಿರ್ದೇಶಕರ ಅನುಪಸ್ಥಿತಿಯಲ್ಲಿ ಇಲಾಖೆಯಲ್ಲಿ ಉಪಸ್ಥಿತ ಮ್ಯಾನೇಜರ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ದ.ಕ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೇರ, ರಾಮ ಸೇನೆಯ ಲೊಕೇಶ ಕುತ್ತಾರ, ಕೊಲ್ಲಿಯ ಮಧುಸೂಧನ ಅಯಾರ,ಸೌ.ಉಮಾ, ಬಾಲಕೃಷ್ಣ, ಉಪೇಂದ್ರ ಆಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು. ಈ ಮನವಿಯಲ್ಲಿ ಒಂದೊಮ್ಮೆ ಕಾಲೇಜಿನ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಸಮಿತಿಯು ಕಾನೂನಿನ ಹೋರಾಟ ನಡೆಸುವುದು ಎಂದೂ ತಿಳಿಸಲಾಗಿದೆ.


Spread the love
1 Comment
Inline Feedbacks
View all comments
7 years ago

these communal minded people are very dangerous for innocent people.

wpDiscuz
Exit mobile version