ಗ್ಯಾಸ್ ಟ್ಯಾಂಕರ್ ಬ್ರೈಕ್ ವೈಫಲ್ಯ – ತಪ್ಪಿದ ಭಾರೀ ಅನಾಹುತ

Spread the love

ಮಂಗಳೂರು: ಗ್ಯಾಸ್ ಟ್ಯಾಂಕರ್ ಒಂದರ ಬ್ರೇಕ್ ವೈಫಲ್ಯದಿಂದ ಟಯರ್ ಸ್ಪೋಟಗೊಂಡ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಗರದ ಪಂಪ್ ವೆಲ್ ಬಳಿ ಗುರುವಾರ ನಡೆದಿದೆ.

image015tanker-mishap-20160602-015 image014tanker-mishap-20160602-014 image013tanker-mishap-20160602-013 image012tanker-mishap-20160602-012 image009tanker-mishap-20160602-009 image010tanker-mishap-20160602-010 image011tanker-mishap-20160602-011 image006tanker-mishap-20160602-006 image007tanker-mishap-20160602-007 image008tanker-mishap-20160602-008 image003tanker-mishap-20160602-003 image004tanker-mishap-20160602-004 image005tanker-mishap-20160602-005

ಪಣಂಬೂರಿನಿಂದ ತಮಿಳುನಾಡಿಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಪಂಪ್ವೆಲ್ ವೃತ್ತದ ಬಳಿ ನಂತೂರು ದಾರಿಯಲ್ಲಿ ಬ್ರೇಕ್ ವೈಫಲ್ಯಗೊಂಡಿತ್ತು. ಈ ವೇಳೆ ಟ್ಯಾಂಕರ್ ಚಾಲಕ ನಡೆಯಲಿರುವ ಭಾರಿ ಅನಾಹುತವನ್ನು ತಪ್ಪಿಸುವ ಸಲುವಾಗಿ ವಾಹವನವನ್ನು ತಿರುಗಿಸಿದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದು ಟಯರ್ ಸ್ಪೋಟಗೊಂಡಿತ್ತು.
ಟ್ಯಾಂಕರಿನಲ್ಲಿ ಗ್ಯಾಸ್ ತುಂಬಿದ್ದು, ಯಾವುದೇ ರೀತಿಯಲ್ಲಿ ಅನಿಲ ಸೋರಿಕೆ ಆಗದ ಕಾರಣ ಭಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ತಕ್ಷಣ ಟ್ರಾಫಿಕ್ ಪೋಲಿಸರು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಘಟನೆಯಿಂದ ಸ್ಪಲ್ಪ ಸಮಯ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು, ಪೋಲಿಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು


Spread the love