Home Mangalorean News Kannada News ಗ್ರಾಮೀಣ ಕಲೆಗಳಿಂದ ನಾಡು ಶ್ರೀಮಂತ- ಶೀಲಾ ಕೆ ಶೆಟ್ಟಿ

ಗ್ರಾಮೀಣ ಕಲೆಗಳಿಂದ ನಾಡು ಶ್ರೀಮಂತ- ಶೀಲಾ ಕೆ ಶೆಟ್ಟಿ

Spread the love

ಗ್ರಾಮೀಣ ಕಲೆಗಳಿಂದ ನಾಡು ಶ್ರೀಮಂತ- ಶೀಲಾ ಕೆ ಶೆಟ್ಟಿ

ಉಡುಪಿ : ಪ್ರತಿಯೊಂದು ಆಚರಣೆಗಳಿಗೂ ಅದರದೇ ಆದ ಹಿನ್ನಲೆ ಇರುತ್ತವೆ , ಗ್ರಾಮೀಣ ಭಾಗದಲ್ಲಿ ಆಚರಿಸುವ ಆಚರಣೆಗಳು ನಾಡಿನ ಕಲೆಯನ್ನು ಶ್ರೀಮಂತಗೊಳಿಸಿವೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಹೇಳಿದ್ದಾರೆ.

ಅವರು ಶುಕ್ರವಾರ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಅವರ ವತಿಯಂದ ಮಣ್ಣಪಳ್ಳ ನಿಸರ್ಗಧಾಮದ ಬಯಲು ಮಂದಿರದಲ್ಲಿ ಆಯೋಜಿಸಿದ್ದ ಸುಗ್ಗಿ-ಹುಗ್ಗಿ ಜಾನಪದ ಕಾರ್ಯಕ್ರಮ ಉದ್ಘಾಟಿಸಿದರು.

ಹಿಂದೆ ಜನವರಿ- ಫೆಬ್ರವರಿ ಮಾಹೆಯಲ್ಲಿ ಕೃಷಿ ಜಮೀನಿನಲ್ಲಿ ಬೆಳೆದ ಫಸಲು ಮನೆ ತುಂಬುವ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಸಿಹಿ ಅಡುಗೆ ಮಾಡಿ ಸಂಭ್ರಮಿಸುತ್ತಿತ್ತು, ಪ್ರತಿಯೊಂದು ಆಚರಣೆಗಳಿಗೂ ಅದರದೇ ಆದ ಹಿನ್ನಲೆ ಇರುತ್ತವೆ , ಗ್ರಾಮೀಣ ಭಾಗದಲ್ಲಿ ಆಚರಿಸುವ ಆಚರಣೆಗಳು ನಾಡಿನ ಕಲೆಯನ್ನು ಶ್ರೀಮಂತಗೊಳಿಸಿವೆ, ಉಡುಪಿ ಜಿಲ್ಲೆಹಲವು ಕ್ಷೇತ್ರದಲ್ಲಿ ಮುಂದಿದ್ದರೂ ಸಹ ಕೃಷಿ ಕ್ಷೇತ್ರದಲ್ಲಿ ಹಿಂದುಳಿದಿದೆ, ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ , ಯುವಕರಲ್ಲಿ ನಿರಾಸಕ್ತಿ ಮೂಡಿದೆ ಎಂದು ಶೀಲಾ ಶೆಟ್ಟಿ ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆವತಿಯಿಂದ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸಾರ್ವಜನಿಕರಿಗೆ ಸಾಮೆಯಿಂದ ತಯಾರಿಸಿದ ಪಾಯಸ, ರಾಗಿಯಿಂದ ಮಾಡಿದ ಉಂಡೆ ಹಾಗೂ ನವಣೆಯಿಂದ ಮಾಡಿದ ತಿನಿಸನ್ನು ವಿತರಿಸಲಾಯಿತು.

ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯ ನರಸಿಂಹ ನಾಯಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಂಥೋಣಿ ಮರಿಯಾ ಇಮಾನ್ಯುಯಲ್, ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ತಾಂತ್ರಿಕ ಮೇಲ್ಚಿಚಾರಕರಾದ ಪೂರ್ಣಿಮಾ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡ. ದೇವದಾಸ ಪೈ ಸ್ವಾಗತಿಸಿದರು, ಸತೀಶ್ ಚಿತ್ರಪಾಡಿ ನಿರೂಪಿಸಿದರು.

ಸುಮಾರು 20 ಕಲಾತಂಡಗಳಿಂದ , ರಾಜ್ಯದ ಕೃಷಿ, ಸಂಸ್ಕøತಿ, ಜನಪದ ನೆನಪಿಸುವ ನೃತ್ಯ, ಹಾಡು , ಡೊಳ್ಳು ಕುಣಿತ, ನಗಾರಿ, ಪೂಜಾ ಕುಣಿತ, ಕೋಲಾಟ, ವೀರಗಾಸೆ, ಕಂಸಾಳೆ, ಕಂಗೀಲು, ಸುಗ್ಗಿ ಕುಣಿತ, ಶಾರ್ದೂಲ ನೃತ್ಯ, ಕುಡುಬಿ ನೃತ್ಯ, ಕೊರಗರ ನೃತ್ಯ, ಸಿದ್ದಿ ಸಿಗ್ಮೂ ಕುಣಿತ, ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.


Spread the love

Exit mobile version