ಗ್ರಾಮೀಣ ಭಾಗದಲ್ಲಿ ಅಡಿಕೆ ಮತ್ತು ರಬ್ಬರ್ ಬೆಳೆಗಾರರ ಜೊತೆ ಶಾಸಕ ಲೋಬೋ ಅಧ್ಯಯನ

Spread the love

ಗ್ರಾಮೀಣ ಭಾಗದಲ್ಲಿ ಅಡಿಕೆ ಮತ್ತು ರಬ್ಬರ್ ಬೆಳೆಗಾರರ ಜೊತೆ ಶಾಸಕ ಲೋಬೋ ಅಧ್ಯಯನ

ವಿಟ್ಲ: ಕರಾವಳಿಯ ಹಳ್ಳಿಗಳಲ್ಲಿ ರಬ್ಬರ್ ಹಾಗೂ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ವಿಧಾನಸಭೆಯಲ್ಲಿ ಚರ್ಚೆ ನಡೆಸಿ ಸರ್ಕಾರದ ಗಮನಕ್ಕೆ ತರುವುದಾಗಿ ಶಾಸಕ ಜೆ.ಆರ್ ಲೋಬೋ ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮಕ್ಕೆ ಭೇಟಿ ನೀಡಿ ಕೃಷಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕ ಜೆ.ಆರ್ ಲೋಬೋ ಗ್ರಾಮದ ರೈತರ ಮನೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.

image001jrlobo-study-visit-aracanut-20160802 image002jrlobo-study-visit-aracanut-20160802 image003jrlobo-study-visit-aracanut-20160802 image004jrlobo-study-visit-aracanut-20160802 image005jrlobo-study-visit-aracanut-20160802 image006jrlobo-study-visit-aracanut-20160802 image007jrlobo-study-visit-aracanut-20160802 image008jrlobo-study-visit-aracanut-20160802

ರೈತರು ಬೆಳೆದ ಬೆಳೆಗಳನ್ನು ವೀಕ್ಷಿಸಿದ ಶಾಸಕ ಲೋಬೋ ರೈತರ ಸಂಕಷ್ಟಗಳನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ ಹಾಗೂ ರಬ್ಬರ್ ಕೃಷಿಕರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಸೂಕ್ತ ಇಳುವರಿ ಸಮಸ್ಯೆ ಹಾಗೂ ಮಾರುಕಟ್ಟೆ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ ಎಂದ ಶಾಸಕರು ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಅಡಿಕೆ ಹಾಗೂ ರಬ್ಬರ್ ಕೃಷಿಗೆ ಬೆಂಬಲ ಬೆಲೆ ಘೋಷಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದಿದ್ದಾರೆ. ಅಲ್ಲದೇ ಕರ್ನಾಟಕದಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಈ ಭಾಗದಲ್ಲಿ ಮಾತ್ರ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದಕ್ಕೆ ಕಾರಣ ಈ ಭಾಗದ ರೈತರು ಒಂದೇ ಬೆಳೆಯನ್ನು ಬೆಳೆಯುವುದಿಲ್ಲ. ಬದಲಾಗಿ ಸಾಕಷ್ಟು ಮಿಶ್ರ ಬೆಳೆಗಳನ್ನು ಅವಲಂಭಿಸಿದ್ದಾರೆ. ಹೀಗಾಗಿ ಮಿಶ್ರಬೆಳೆಗಳನ್ನು ಬೆಳೆಸುವುದರಿಂದ ರೈತರು ಆತ್ಮಹತ್ಯೆಯನ್ನು ತಡೆಯಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿರು. ಈ ಮಧ್ಯೆ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ಅವರು ವಿಟ್ಲದಂತಹ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ರೈತರ ಜೊತೆ ಬೆಳೆಗಳ ಅಧ್ಯಯನ ನಡೆಸಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಅಲ್ಲದೇ ಇಲ್ಲಿನ ರೈತರ ಸಮಸ್ಯೆ ಬಗ್ಗೆ ಶಾಸಕರು ವಿಧಾನಸಭೆಯಲ್ಲಿ ಧ್ವನಿಯೆತ್ತುವ ಭರವಸೆ ನೀಡಿರುವುದರ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.


Spread the love