Spread the love
ಗ್ರಾಮ ಲೆಕ್ಕಾಧಿಕಾರಿಗಳ ಮನವಿಗೆ ಸಂಬಂಧಿತರು ಶೀಘ್ರ ಸ್ಪಂದಿಸಲಿ- ವಿಕಾಸ್ ಹೆಗ್ಡೆ
ಉಡುಪಿ: ಕಂದಾಯ ಇಲಾಖೆಯಲ್ಲಿ ಜನಸಾಮಾನ್ಯರ ನೋವು, ನಲಿವುಗಳಿಗೆ ದಿನಾಲೂ ಸ್ಪಂದಿಸುವ ಜೀವ ಎಂದರೆ ಅದು ಗ್ರಾಮ ಲೆಕ್ಕಾಧಿಕಾರಿಗಳು ಆದರೆ ಇವತ್ತು ಎಲ್ಲಾ ವಿಭಾಗಗಳಿಂದ ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿರುವವರು ಇದೇ ಗ್ರಾಮ ಲೆಕ್ಕಾಧಿಕಾರಿಗಳು. ಇವತ್ತು ಅದೆಷ್ಟೋ ಭಾರೀ ಸಂಬಂಧಿತ ಸರ್ಕಾರ, ಜನಪ್ರತಿನಿದಿನಗಳು, ಮೇಲ್ಮಟ್ಟದ ಅಧಿಕಾರಿಗಳ ಬಳಿ ತಮ್ಮ ಸಮಸ್ಯೆ ತಿಳಿಸಿ ಅದನ್ನು ಪರಿಹರಿಸಲು ಕೇಳಿಕೊಂಡಾಗಲೂ ಸಹ ಪರಿಹಾರ ಕಾಣದೆ ಇದ್ದಾಗ ಇಂದು ಗ್ರಾಮ ಲೆಕ್ಕಾಧಿಕಾರಿಗಳು ಅನಿವಾರ್ಯವಾಗಿ ಅನಿರ್ದಿಷ್ಟಾವದಿ ಧರಣಿ ಕುಳಿತುಕೊಂಡಿದ್ದಾರೆ. ಕೂಡಲೇ ಸಂಬಂಧಿತರು ಇವರ ಮನವಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.
Spread the love