ಚಾಲಕನ ನಿರ್ಲಕ್ಷ್ಯ, ಅಂಗಡಿಗೆ ನುಗ್ಗಿದ ಬಸ್ಸು
ಮಂಗಳೂರು: ಬಸ್ ಚಾಲಕನ ನಿರ್ಲಕ್ಷ್ಯತನದಿಂದ ನ್ಯೂಟ್ರಲ್ ನಲ್ಲಿ ನಿಲ್ಲಿಸಿದ್ದ ಬಸ್ಸೊಂದು ಮುಂದಕ್ಕೆ ಚಲಿಸಿ ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಮಂಗಳೂರು ಸ್ಟೇಟ್ ಬ್ಯಾಂಕ್ ನಿಲ್ದಾಣದಲ್ಲಿ ನಡೆದಿದೆ.
ರೂಟ್ ನಂಬರ್ 2 ಸಿ ಬಸ್ಸಿನ ಚಾಲಿಕ ಎಂದಿನಂತೆ ತನ್ನ ಬಸ್ಸನ್ನು ನಿಗದಿತ ಸ್ತಳದಲ್ಲಿ ನಿಲ್ಲಿಸಿ ಚಹಾ ಕುಡಿಯಲು ತೆರಳಿದ್ದು, ಈ ಸಂದರ್ಭ ನ್ಯೂಟ್ರಲ್ ಗೇರಿನಲ್ಲಿದ್ದ ಬಸ್ಸು ರಸ್ತೆ ಇಳಿಜಾರಾಗಿರುವುದರಿಂದ ಮುಂದಕ್ಕೆ ಚಲಿಸಿ, ನೇರವಾಗಿ ಎದರುಗಿದ್ದ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಬಸ್ ಚಾಳಕನಿಲ್ಲದೆ ಬಸ್ಸು ಮುಂದೆ ಚಲಿಸುತ್ತಿರುವುದನ್ನು ಕಂಡ ಮಹಿಳೆಯೋರ್ವರು ಬೊಬ್ಬೆ ಹಾಕಿ ಬಸ್ಸು ಮುಂಬಾಗದಲ್ಲಿ ನಡೆದು ಹೋಗುತ್ತಿದ್ದ ಸಾರ್ವಜನಿಕರನ್ನು ಎ್ಚರಿಸಿದರು. ಇದರಿಂದ ಎಚ್ಚೆತ್ತ ಸಾರ್ವಜನಿಕರು ಚದರಿದ ಪರಿಣಾಮ ಭಾರಿ ಅನಾಹುತ ತಪ್ಪಿದೆ ಎನ್ನಲಾಗಿದೆ. ಘಟನೆಯಿಂದ ಬಸ್ಸು ಹಾಗೂ ಅಂಗಡಿಗೆ ಹಾನಿಯಾಗಿದೆ.
ಬಸ್ಸು ಮಾಲಕ ಅಂಗಡಿಗೆ ಸಂಭವಿಸಿದ ಹಾನಿಯನ್ನು ಭರಿಸಲು ಒಪ್ಪಿ ಕೊಂಡಿದ್ದಾರೆ ಎಂದು ಅಂಗಡಿ ಮಾಲಿಕ ಅಶ್ರಫ್ ಮಾಧ್ಯಮಕ್ಕೆ ತಿಳೀಸಿದ್ದಾರೆ.
ಬಸ್ಸು ಚಾಲಕರ ಮಿತಿಮೀರಿದ ವೇಗದ ಮತ್ತು ನಿರ್ಲಕ್ಷ್ಯವೇ ಇಂತಹ ಅವಘಡಗಳಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.