Home Mangalorean News Kannada News ಚಿಕ್ಕಮಗಳೂರಿನಲ್ಲಿ ಪ್ರೀತಿಗಾಗಿ ಹಿಂದು ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ!

ಚಿಕ್ಕಮಗಳೂರಿನಲ್ಲಿ ಪ್ರೀತಿಗಾಗಿ ಹಿಂದು ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ!

Spread the love

ಚಿಕ್ಕಮಗಳೂರಿನಲ್ಲಿ ಪ್ರೀತಿಗಾಗಿ ಹಿಂದು ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ!

ಚಿಕ್ಕಮಗಳೂರು: ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾನೆ.

ನಗರದ ಓಂಕಾರೇಶ್ವರ ಗಣಪತಿ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿಯ ಪೂಜಾ ಕಾರ್ಯಕ್ರಮದಲ್ಲಿ ಮತಾಂತರ ಕಾರ್ಯಕ್ರಮ ನಡೆದಿದೆ. ಹುಬ್ಬಳ್ಳಿ ಮೂಲದ ವಿಜಯಲಕ್ಷ್ಮಿ ಮತ್ತು ಮುಸ್ತಾಕ್ ಇವರಿಬ್ಬರು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಮದುವೆ ಕೂಡ ಆಗಿದ್ದರು.

ಹಿಂದೂ ಧರ್ಮದ ಬಗ್ಗೆ ಅಪಾರ ನಂಬಿಕೆ ಇರುವ ಮುಸ್ತಾಕ್ ಇಂದು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾನೆ. ಮುಸ್ತಾನ್‌ ಪ್ರತಾಪ್ ಎಂದು ಮರುನಾಮಕರಣಗೊಂಡಿದ್ದಾನೆ. ಈ ನವದಂಪತಿಗೆ ಮುಂದೆಯೂ ಯಾವುದೇ ತೊಂದರೆ ಆಗದಂತೆ ಸಮಾಜ ನೋಡಿಕೊಳ್ಳುತ್ತದೆ ಎಂದು ಹಿಂದು ಸಂಘಟಕರು ಆಶ್ವಾಸನೆ ಕೊಟ್ಟಿದ್ದಾರೆ.


Spread the love

Exit mobile version