Home Mangalorean News Kannada News ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವೆಬ್ಸೈಟ್, ಫೇಸ್ಬುಕ್, ಟ್ವಟ್ಟರ್ ಬಿಡುಗಡೆ

ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವೆಬ್ಸೈಟ್, ಫೇಸ್ಬುಕ್, ಟ್ವಟ್ಟರ್ ಬಿಡುಗಡೆ

Spread the love

ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವೆಬ್ಸೈಟ್, ಫೇಸ್ಬುಕ್, ಟ್ವಟ್ಟರ್ ಬಿಡುಗಡೆ

ಚಿಕ್ಕಮಗಳೂರು: ಸಾರ್ವಜನಿಕರೊಂದಿಗೆ ತ್ವರಿತ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ಇಲಾಖೆ ಹೊಸ ವೆಬ್ ಸೈಟ್ www.ckmpolice.in ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಪೇಜ್ Face book page: Chikkamagaluru District Police(www.facebook.com/ckmpolice) ಮತ್ತು ಟ್ವಿಟ್ಟರ್ Twitter:SPChikkamagaluru (www.twitter.com/spckmofficial) ಪೇಜಿಗಳಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಸಾರ್ವಜನಿಕರ ಉಪಯೋಗಕ್ಕೆ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಡಿಜಿಟಲ್ ಯುಗದಲ್ಲಿ ಜನರು ಪ್ರಪಂಚದ ನಾನಾ ಮೂಲೆಗಳಿಂದ ಅಂತರ್ಜಾಲದ ಸಹಾಯದಿಂದ ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ಸಂವಹನ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಪೋಲಿಸ್ ಇಲಾಖೆಯು ಕೂಡ ಅಂತರ್ಜಾಲದ ಸದುಪಯೋಗ ಮಾಡಿಸಿಕೊಂಡು ವಿವಿಧ ಡಿಜಿಟಲ್ ವೇದಿಕೆ ಉಪಯೋಗಿಸಿಕೊಂಡು ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಪೋಲಿಸರು ಕರ್ತವ್ಯದ ವೇಳೆ ತೋರುವ ಮಾನವೀಯ ಮುಖವನ್ನು ಈ ಸಾರ್ವಜನಿಕ ಜಾಲತಾಣದಲ್ಲಿ ಅನಾವರಣಗೊಳಿಸಲಾಗುವುದು ಎಂದರು.

ವೆಬ್‍ಸೈಟ್‍ನಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಘಟಕದ ಬಗ್ಗೆ ಸಂಪೂರ್ಣ ಮಾಹಿತಿ, ಸಾರ್ವಜನಿಕರ ಉಪಯೋಗಕ್ಕಾಗಿ ವಿವಿಧ ಕಾನೂನು ಮತ್ತು ನಿಯಮಗಳ ಬಗ್ಗೆ ಮಾಹಿತಿ, ದೈನಂದಿನ ವರದಿಯಾಗುವ ಅಪರಾಧಗಳ ಮಾಹಿತಿ, ಪತ್ರಿಕಾ ಪ್ರಕಟಣೆಗಳು, ಸಾರ್ವಜನಿಕರ ಗಮನಕ್ಕೆ ತರಬೇಕಾದಂತಹ ಸುತ್ತೋಲೆ ಮತ್ತು ಇತರೇ ಮಾಹಿತಿಗಳು ಲಭ್ಯವಿರುತ್ತವೆ. ಇದಲ್ಲದೇ ಸಾರ್ವಜನಿಕರು ತಮ್ಮ ದೂರು, ಮಾಹಿತಿಗಳು ಮತ್ತು ಅನಿಸಿಕೆಗಳನ್ನು ಸಹ ವೆಬ್‍ಸೈಟ್ ಮೂಲಕ ಸಲ್ಲಿಸಬಹುದು.

ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಪೇಜ್ ನ್ನು ಸಾರ್ವಜನಿಕರು ಲೈಕ್ ಮಾಡಿಕೊಂಡು ಹಾಗೂ ಟ್ವಿಟರ್ ನಲ್ಲಿ ಫಾಲೋ ಮಾಡಿಕೊಂಡು, ಸಾರ್ವಜನಿಕರು ತ್ವರಿತವಾಗಿ ಚಿಕ್ಕಮಗಳೂರು ಪೊಲೀಸ್ ಘಕಟದೊಂದಿಗೆ ಸಂವಹನ ನಡೆಸಬಹುದಾಗಿರುತ್ತದೆ.

ತಾತ್ಕಾಲಿಕ ಮಹಿಳಾ ಠಾಣೆ ಆರಂಭ

ಜಿಲ್ಲೆಯ ಮೊದಲ ಮಹಿಳಾ ಪೋಲಿಸ್ ಠಾಣೆಯನ್ನು ಜಿಲ್ಲಾ ಅಪರಾಧ ವಿಭಾಗದ ಒಂದು ಸಣ್ಣ ಕೊಠಡಿಯಲ್ಲಿ ವಿದ್ಯುಕ್ತವಾಗಿ ಆರಂಭಿಸಲಾಗಿದೆ.

ಠಾಣೆಗೆ ಒಬ್ಬರು ಪಿಎಸ್ ಐ, ಇಬ್ಬರು ಎಎಸ್ಐ, 4 ಹೆಡ್ ಕಾನ್ಸ್ ಟೇಬಲ್, 11 ಪೋಲಿಸ್ ಕಾನ್ ಸ್ಟೇಬಲ್ ನೀಡಲಾಗಿದೆ. ಸದ್ಯಕ್ಕೆ ನಗರಠಾಣೆ ಸಬ್ ಇನ್ಸ್ ಪೆಕ್ಟರ್ ಪ್ರಭಾರ ಠಾಣಾಧಿಕಾರಿಯಾಗಿರುತ್ತಾರೆ, ಚಿತ್ರದುರ್ಗದಲ್ಲಿ ಪೋಲಿಸ್ ಗುಪ್ತದಳದಲ್ಲಿರುವ ಪಿಎಸ್ಐ ಶೋಭಾ ಸದ್ಯದಲ್ಲೇ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜಿಲ್ಲಾ ಮಹಿಳಾ ಠಾಣೆ ಮುಖ್ಯಸ್ಥರ ಹುದ್ದೆಗೆ ರಾಜ್ಯ ಸರ್ಕಾರ ಇನ್ನೂ ಇನ್ಸ್ ಪೆಕ್ಟರ್ ಕೊಟ್ಟಿಲ್ಲ ಸದ್ಯದಲ್ಲೇ ಮಹಿಳಾ ಠಾಣೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಎಂಜಿ ರಸ್ತೆಯಲ್ಲಿರುವ ಹಳೆ ನಗರಠಾಣೆಗೆ ಸ್ಥಳಾಂತರವಾಗಲಿದೆ ಎಂದರು.


Spread the love

Exit mobile version