Home Mangalorean News Kannada News ಚಿತ್ರಕಲಾ ಕ್ಷೇತ್ರದಲ್ಲೂ ವಿಪುಲ ಅವಕಾಶವಿದೆ; ಎನ್.ಎಸ್.ಯು.ಐ ಅಧ್ಯಕ್ಷ ಕ್ರಿಸ್ಟನ್ ಡಿ ಅಲ್ಮೇಡಾ

ಚಿತ್ರಕಲಾ ಕ್ಷೇತ್ರದಲ್ಲೂ ವಿಪುಲ ಅವಕಾಶವಿದೆ; ಎನ್.ಎಸ್.ಯು.ಐ ಅಧ್ಯಕ್ಷ ಕ್ರಿಸ್ಟನ್ ಡಿ ಅಲ್ಮೇಡಾ

Spread the love

ಚಿತ್ರಕಲಾ ಕ್ಷೇತ್ರದಲ್ಲೂ ವಿಪುಲ ಅವಕಾಶವಿದೆ; ಎನ್.ಎಸ್.ಯು.ಐ ಅಧ್ಯಕ್ಷ ಕ್ರಿಸ್ಟನ್ ಡಿ ಅಲ್ಮೇಡಾ

ಉಡುಪಿ: ಇತರ ಕ್ಷೇತ್ರಗಳಂತೆ ಚಿತ್ರಕಲಾ  ಕ್ಷೇತ್ರದಲ್ಲೂ ವಿಪುಲ ಅವಕಾಶವಿದ್ದು ವಿದ್ಯಾರ್ಥಿಗಳ ಈ ಆಸಕ್ತಿಗೆ ಪೋಷಕರು ಬೆನ್ನೆಲುಬಾಗಿ ನಿಂತಲ್ಲಿ ಉತ್ತಮ ಭವಿಷ್ಯವಿದೆ ಎಂದು  ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಕ್ರಿಸ್ಟನ್ ಡಿ ಅಲ್ಮೇಡಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಅಲೆವೂರಿನ ನೆಹರೂ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಶನ್ (ರಿ). ಇವರು ಮಕ್ಕಳ ದಿನಾಚರಣೆ ಯ ಅಂಗವಾಗಿ ನೆಹರೂ ಕ್ರೀಡಾಂಗಣದಲ್ಲಿ  ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸ ಮಾತನಾಡಿದರು.

ಲಯನೆಸ್ ಜಿಲ್ಲಾ ಸಂಯೋಜಕಿ ವಿದ್ಯಲತಾ ಉದಯ ಶೆಟ್ಟಿ ನೆಹರೂರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಲಯನೆಸ್ ಮುಖಂಡೆ ನಿರುಪಮಾ ಪ್ರಸಾದ್ ಶೆಟ್ಟಿ, ಬೀನಾ, ನಿವೃತ್ತ ಚಿತ್ರಕಲಾ ಅಧ್ಯಾಪಕ ಶೇಖರ್ ಕಲ್ಮಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಗೌರವಾಧ್ಯಕ್ಷ  ಅಲೆವೂರು ಹರೀಶ್ ಕಿಣಿ  ಪ್ರಸ್ತಾವನೆಗೈದರು.ಅಧ್ಯಕ್ಷ ನಿತ್ಯಾನಂದ ಅಂಚನ್ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಶ್ರೀಧರ್ ಪೂಜಾರಿ ವಂದಿಸಿದರು. ಕೋಶಾಧಿಕಾರಿ ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version