Home Mangalorean News Kannada News ಚಿನ್ನಾಭರಣ ತಯಾರಿಕಾ ಘಟಕದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ನಾಲ್ವರು ಬಾಲಕಾರ್ಮಿಕರ ರಕ್ಷಣೆ

ಚಿನ್ನಾಭರಣ ತಯಾರಿಕಾ ಘಟಕದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ನಾಲ್ವರು ಬಾಲಕಾರ್ಮಿಕರ ರಕ್ಷಣೆ

Spread the love

ಚಿನ್ನಾಭರಣ ತಯಾರಿಕಾ ಘಟಕದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ನಾಲ್ವರು ಬಾಲಕಾರ್ಮಿಕರ ರಕ್ಷಣೆ

ಉಡುಪಿ : ಕಾರ್ಮಿಕ ಇಲಾಖೆ ಉಡುಪಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಉಡುಪಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ನಗರ ಠಾಣೆ ಹಾಗೂ ನಾಗರೀಕಾ ಸೇವಾ ಸಮಿತಿ, ಉಡುಪಿ ಇದರ ಜಂಟಿ ಕಾರ್ಯಾಚರಣೆಯಲ್ಲಿ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿ ಇರುವ ಜ್ಯುವೆಲ್ ಪ್ಲಾಜಾ ಕಟ್ಟಡದಲ್ಲಿ ಚಿನ್ನಾಭರಣ ತಯಾರಿಕಾ ಘಟಕದಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ಪಶ್ಚಿಮ ಬಂಗಾಳ ಮೂಲದ 4 ಬಾಲಕರನ್ನು ರಕ್ಷಿಸಲಾಯಿತು.

ನಾಲ್ಕು ಬಾಲಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದ್ದು, ಸಮಿತಿಯು ತಾತ್ಕಾಲಿಕ ಪುನರ್ವಸತಿಗಾಗಿ ಕೃಷ್ಣಾನುಗ್ರಹ, ಸಂತೆಕಟ್ಟೆ ಇಲ್ಲಿಗೆ ದಾಖಲಿಸಲಾಯಿತು.

ಕಾರ್ಯಾಚರಣೆಯಲ್ಲಿ ರಾಮಮೂರ್ತಿ.ಎಸ್.ಎಸ್, ಕಾರ್ಮಿಕ ನಿರೀಕ್ಷಕರು, 1ನೇ ವೃತ್ತ, ಉಡುಪಿ. ಪ್ರಭಾಕರ ಆಚಾರ್, ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಉಡುಪಿ, ಪ್ರವೀಣ್ ಕುಮಾರ್, ಪ್ರಥಮ ದರ್ಜೆ ಸಹಾಯಕರ್ರು, ಕಾರ್ಮಿಕ ಇಲಾಖೆ, ಉಡುಪಿ, ಕಪಿಲಾ, ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ,ಉಡುಪಿ, ಯೋಗೀಶ್, ಸಮಾಜ ಸೇವಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ,ಉಡುಪಿ, ಸಂಗನಗೌಡ, ಪೋಲೀಸ್, ಉಡುಪಿ ನಗರಠಾಣೆ, ನಿತ್ಯಾನಂದ ವಳಕಾಡು ನಾಗರೀಕಾ ಸೇವಾ ಸಮಿತಿ ಉಡುಪಿ ಇವರುಗಳು ಪಾಲ್ಗೊಂಡಿದ್ದರು.


Spread the love

Exit mobile version