ಚುನಾವಣಾ ತರಬೇತಿ ಪಡೆದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ!

Spread the love

ಚುನಾವಣಾ ತರಬೇತಿ ಪಡೆದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ!

ಉಡುಪಿ: ಉಡುಪಿಯ ಸೈಂಟ್ ಸಿಸಿಲಿ ಶಾಲೆಯಲ್ಲಿ , ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಗಳಿಗೆ ಭಾನುವಾರ ತರಬೇತಿ ನಡೆಯುತ್ತಿತ್ತು, ತರಬೇತಿ ಕೊಠಡಿದಲ್ಲಿದ್ದ ಸಿಬ್ಬಂದಿಗೆ ಹಾಗೂ ತರಬೇತುದಾರರಿಗೆ ಒಂದು ಕ್ಷಣ ಗಾಬರಿ, ಮತ್ತೊಂದೆಡೆ ಆಶ್ಚರ್ಯ .. ಕಾರಣ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತರಬೇತಿ ನಡೆಯುತ್ತಿದ್ದ ಕೊಠಡಿಗೆ ಆಗಮಿಸಿ, ನೇರವಾಗಿ ತೆರಳಿ ಸಿಬ್ಬಂದಿ ಮಧ್ಯೆ ಕುಳಿತದ್ದು.

ತರಬೇತಿ ಕೇಂದ್ರಕ್ಕೆ ಅನಿರೀಕ್ಷಿತವಾಗಿ ಆಗಮಿಸಿದ ಜಿಲ್ಲಾಧಿಕಾರಿ, ಕೊಠಡಿಯೊಂದಕ್ಕೆ ತೆರಳಿ ಸಿಬ್ಬಂದಿ ಮಧ್ಯೆ ಕುಳಿತು, ತರಬೇತುದಾರರಿಗೆ ತರಬೇತಿ ಮುಂದುವರೆಸುವಂತೆ ಸೂಚಿಸಿದರು, ಜಿಲ್ಲಾಧಿಕಾರಿ ಆಗಮಿಸಿದಾಗ ನಡೆಯುತ್ತಿದ್ದ ತರಬೇತಿ ವಿಷಯ, ಮತಗಟ್ಟೆಗೆ ಮತದಾರರಲ್ಲದೆ ಯಾರಿಗೆ ಪ್ರವೇಶ ನೀಡಬಹುದು ಎಂದು.

ಚುನಾವಣಾ ಆಯೋಗದಿಂದ ಅಧಿಕೃತ ಗುರುತಿನ ಚೀಟಿ ಪಡೆದ ಪತ್ರಕರ್ತರಿಗೆ ಮಾತ್ರ ಪ್ರವೇಶ ನೀಡಬಹುದಾಗಿದ್ದು, ಮತದಾರರನ್ನು ಹೊರತುಪಡಿಸಿ ಇತರೆ ಯಾರಿಗೂ ಅನಧಿಕೃತ ಪ್ರವೇಶ ಇಲ್ಲ, ಗುರುತು ಚೀಟಿ ಇಲ್ಲದೆ , ತಮ್ಮ ಸಂಸ್ಥೆಯ ಗುರುತು ಚೀಟಿ ನೀಡಿದರೂ ಪ್ರವೇಶ ನೀಡಬಾರದು ಎಂದು ತರಬೇತುದಾರರು ತಿಳಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ, ತರಬೇತಿಯ ಸಮಯದಲ್ಲಿ ಯಾವುದೇ ಸಂಶಯಗಳಿದ್ದರೂ ಪರಿಹರಿಸಿಕೊಳ್ಳಿ, ಮತಕೇಂದ್ರದಲ್ಲಿ ಸಿಬ್ಬಂದಿಗಳು ಅನವಶ್ಯಕವಾಗಿ ಚರ್ಚೆ ಮಾಡಬೇಡಿ, ಸಮಸ್ಯೆಗಳಿದ್ದಲ್ಲಿ ನೇರವಾಗಿ ತಿಳಿಸಿ, ಉಡುಪಿ ಜಿಲ್ಲೆ ಇಡೀ ರಾಜ್ಯಕ್ಕೆ ಎಲ್ಲಾ ವಿಧದಲ್ಲಿ ಮಾದರಿಯಾಗಿದ್ದು, ಚುನಾವಣಾ ಕಾರ್ಯದಲ್ಲೂ ಸಹ ಮಾದರಿಯಾಗಲಿದೆ.

ಸುಗಮ ಚುನಾವಣೆಗಾಗಿ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಿ, ಮತದಾನದ ಕರ್ತವ್ಯ ಕಷ್ಟ ಎಂದುಕೊಳ್ಳಬೇಡಿ, ಪ್ರತಿಯೊಬ್ಬರಿಗೂ ಚುನಾವಣಾ ಕರ್ತವ್ಯ ಸಿಗುವುದಿಲ್ಲ, ನೀವು ಅರ್ಹರಿದ್ದಿರೀ ಎಂದು ನಿಮ್ಮನ್ನು ಕರ್ತವ್ಯಕ್ಕೆ ಆಯ್ಕೆ ಮಾಡಲಾಗಿದೆ ಎಂದ ಡಿಸಿ, ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಚುನಾವಣೆಯನ್ನು ಯಶಸ್ವಿಗೊಳಿಸಿ ಎಂದು ಹೇಳಿದರು.


Spread the love