ಚುನಾವಣೆಗೆ ಐದೇ ದಿನ ಬಾಕಿ; ಸೊರಕೆಯಿಂದ ಬಿರುಸಿನ ಮತಪ್ರಚಾರ

Spread the love

ಚುನಾವಣೆಗೆ ಐದೇ ದಿನ ಬಾಕಿ; ಸೊರಕೆಯಿಂದ ಬಿರುಸಿನ ಮತಪ್ರಚಾರ

ಉಡುಪಿ: ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದರು.

ಕಾರ್ಯಕರ್ತರೊಂದಿಗೆ ಮನೆಮನೆಗೆ ತೆರಳಿದ ಸೊರಕೆ ಈ ಬಾರಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ತನ್ನನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಕಟಪಾಡಿ, ಕೋಟೆ, ಕುತ್ಯಾರು, ಹಿರಿಯಡ್ಕ ವ್ಯಾಪ್ತಿಯಲ್ಲಿ, ಬೆಳಪು, ಪಲಿಮಾರು, ಪಡುಬಿದ್ರೆ , ಮುದರಂಗಡಿ ಹಾಗೂ ಇತರ ಭಾಗದಲ್ಲಿ ಮತದಾರರನ್ನು ಬೇಟಿ ಮಾಡಿದರು.

ಈ ವೇಳೆ ಮಾತನಾಡಿದ ಸೊರಕೆಯವರು ಕಾಪು ನನ್ನ ಶಾಸಕತ್ವದ ಅವಧಿಯಲ್ಲಿ ಬಹಳಷ್ಟು ಪ್ರಗತಿ ಕಂಡಿದೆ. ಇನ್ನೊಂದು ಅವಧಿಯಲ್ಲಿ ಐತಿಹಾಸಿಕ ಅಭಿವೃದ್ಧಿ ಯತ್ತ ಕಾಪುವನ್ನು ಮುನ್ನೆಡೆಸುವತ್ತ ಹೆಜ್ಜೆ ಇಟ್ಟಿದ್ದೀನಿ. ಬಿಜೆಪಿ ಪಕ್ಷದ ಕಾರ್ಯಕರ್ತರು ಈಗಾಗಲೇ ಕಾಪು ಕ್ಷೇತ್ರದ ಬಗ್ಗೆ ಹಾಗೂ ಅಭಿವ್ರದ್ಧಿಯ ಕುರಿತು ಬಹಳಷ್ಟು ಅಪಪ್ರಚಾರ ನಡೆಸುತ್ತಿದ್ದಾರೆ. ಕಾಪು ಕ್ಷೇತ್ರದ ಅಭಿವ್ರದ್ಧಿ ನಿಮ್ಮ ಕಣ್ಣ ಮುಂದೆಯೇ ಇದೆ. ಇದನ್ನು ಅರಿತುಕೊಂಡು ತಪ್ಪು ಮಾಡದೇ ಮತ ಚಲಾಯಿಸಿ. ಯಾರು ಕೂಡಾ ಕಾಪು ತಾಲೂಕು ಆಗುತ್ತೆ ಅಂತಾ ನಿರೀಕ್ಷೆ ಮಾಡಿರಲಿಲ್ಲ. ತಾಲೂಕಿಗೆ ಸಂಬಂಧಿಸಿದಂತೆ ಈಗಾಗಲೇ 30 ಶೇ ದಷ್ಟು ಕೆಲಸ ಆಗಿದೆ. ತಾಲೂಕು ಆದ ವೇಗದಲ್ಲಿಯೇ ಉಳಿದ ಕೆಲಸಾನೂ ಶೀಘ್ರವಾಗಿ ಆಗುತ್ತೆ. ತಾಲೂಕು ಮಾಡಿದ್ದಾರೆ ಏನು ಮಾಡಿಲ್ಲ ಅನ್ನೋರಿಗೆ ಜನರೇ ಉತ್ತರ ಕೊಡ್ತಾರೆ.

ಕಳೆದ 5 ವರ್ಷಗಳಲ್ಲಿ ಸದಾ ನಿಮ್ಮೊಂದಿಗೆ ಪ್ರಾಮಾಣಿಕತೆಯ ಸೇವೆ ಸಲ್ಲಿಸಿದ್ದೇನೆ. ಬರುವ ಚುನಾವಣೆ ಯಲ್ಲಿ ಮತ್ತೊಂದು ಅವಕಾಶ ಮಾಡಿಕೊಟ್ಟರೆ ಕಾಪು ಕ್ಷೇತ್ರದ ಚಿತ್ರಣವನ್ನೇ ಬದಲಿಸುವಷ್ಟು ಅಭಿವೃದ್ಧಿ ಮಾಡ್ತಿನಿ ಅಂತಾ ಹೇಳಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್ನ, ಪ್ರಮೀಳ ಜತ್ತನ್ನ, ಸರಸು ಡಿ ಬಂಗೇರ, ಸುಧಾಕರ ಆಚಾರ್ಯ, ದೇವು ಪುತ್ರನ್, ಜಹೀರ್, ನಿರಂಜನ ಶೆಟ್ಟಿ, ವಿನ್ಸೆಂಟ್ ರೊಡ್ರಿಗಸ್, ಸುಧೀರ್, ರಾಜಶೇಖರ ಕೋಟ್ಯಾನ್, ಡೆವಿಡ್ ಮುದರಂಗಡಿ, ನವೀನ್ ಸುವರ್ಣ, ದೀಪಕ್ ಎರ್ಮಾಳ್, ವಿಶ್ವಾಸ್ ಅಮೀನ್, ಹಸನಬ್ಬ, ಕರುಣಾಕರ ಪೂಜಾರಿ,ದಿನೇಶ್ ಕೋಟ್ಯಾನ್, ಮೊಯ್ದಿನಬ್ಬ, ಜಿತೇಂದ್ರ ಪುಟಾರ್ಡೊ, ಸುಧೀರ್ ಹೆಗ್ಡೆ,ಮಹಾಬಲ ಕುಂದರ್, ಲಕ್ಷ್ಮೀನಾರಾಯಣ ಪ್ರಭು, ಮೊದಲಾದವರ ಸುಂದರ ಪೂಜಾರಿ, ಗಣೇಶ ನಾಯಕ್, ಗಣೇಶ್ ಶೆಟ್ಟಿ, ಸುಂದರ್ ಶೇರಿಗಾರ್, ರಾಜು ಪೂಜಾರಿ, ದಿವ್ಯ, ಕಸ್ತೂರಿ ಪೂಜಾರಿ, ಕುದಿ ಸಂತೋಷ್ ಶೆಟ್ಟಿ, ಚರಣ್ ವಿಠ್ಠಲ, ಸುಧಾಕರ ಶೆಟ್ಟಿ, ಚಂದ್ರಶೇಖರ ನಾಯಕ್, ಸವಿತಾ ನಾಯಕ್, ಮೋಹನ್ ಶೆಟ್ಟಿ, ಶಶಿಧರ್ ಜತ್ತನ್ ಉಪಸ್ಥಿತರಿದ್ದರು.


Spread the love