Home Mangalorean News Kannada News ಚೆಂಬುಗುಡ್ಡೆಯಲ್ಲಿ ಸಾರ್ವಜನಿಕರಿಗೆ ಕೊರೋನ ಪರೀಕ್ಷೆ; ಸ್ವತಃ ಪರೀಕ್ಷೆಗೊಳಗಾದ ಖಾದರ್

ಚೆಂಬುಗುಡ್ಡೆಯಲ್ಲಿ ಸಾರ್ವಜನಿಕರಿಗೆ ಕೊರೋನ ಪರೀಕ್ಷೆ; ಸ್ವತಃ ಪರೀಕ್ಷೆಗೊಳಗಾದ ಖಾದರ್

Spread the love

ಚೆಂಬುಗುಡ್ಡೆಯಲ್ಲಿ ಸಾರ್ವಜನಿಕರಿಗೆ ಕೊರೋನ ಪರೀಕ್ಷೆ; ಸ್ವತಃ ಪರೀಕ್ಷೆಗೊಳಗಾದ ಖಾದರ್

ಮಂಗಳೂರು : ಉಳ್ಳಾಲ ನಗರಸಭೆ ವ್ಯಾಪ್ತಿಯ ಚೆಂಬುಗುಡ್ಡೆ ಪರಿಸರದ ವ್ಯಕ್ತಿಯೊಬ್ಬರಲ್ಲಿ ಇತ್ತೀಚೆಗೆ ಕೊರೋನ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರಿಗೆ ಕೋವಿಡ್-19 ಪರೀಕ್ಷೆಗೆ ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಸೋಮವಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸ್ವತಃ ಪರೀಕ್ಷೆಗೊಳಗಾದರು. ಹಾಗೂ ಸಾರ್ವಜನಿಕರಿಗೆ ಪರೀಕ್ಷೆಗೆ ಒಳಗಾಗಲು ಧೈರ್ಯ ತುಂಬಿದರು.

ಈ ವೇಳೆ ಮಾತನಾಡಿದ ಯು ಟಿ ಖಾದರ್, “ಕಳೆದ ವಾರ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಕೋವಿಡ್ -19 ಪ್ರಕರಣ ಪತ್ತೆಯಾಗಿದೆ ಮತ್ತು ರೋಗಿಯು ಮಸೀದಿಗೆ ಭೇಟಿ ನೀಡಿದ್ದರು. ಕಟ್ಟಡವು ಚೆಂಬುಗುಡ್ಡೆ ಬಳಿ ಇರುವುದರಿಂದ, ಪ್ರದೇಶದ ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ವೈರಸ್ ಇರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ನಾನು ಇಲ್ಲಿ ಗಂಟಲು ಸ್ವ್ಯಾಬ್ ಪರೀಕ್ಷೆಯನ್ನು ಮಾಡಿದ್ದೇನೆ ಮತ್ತು ಈ ಪ್ರದೇಶದ ನಿಮ್ಮೆಲ್ಲರಿಗೂ ಈ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸುತ್ತೇನೆ ಎಂದರು ”.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸ್ಥಳೀಯರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಯಿತು. ಹಲವರು ಇದರ ಪ್ರಯೋಜನ ಪಡೆದರು.


Spread the love

Exit mobile version