Home Mangalorean News Kannada News ಜನತಾ ಕರ್ಫ್ಯೂ ಗೆ ಸಂಪೂರ್ಣ ಬೆಂಬಲ – ಸ್ತಬ್ಧವಾದ ಉಡುಪಿ ಜಿಲ್ಲೆ

ಜನತಾ ಕರ್ಫ್ಯೂ ಗೆ ಸಂಪೂರ್ಣ ಬೆಂಬಲ – ಸ್ತಬ್ಧವಾದ ಉಡುಪಿ ಜಿಲ್ಲೆ

Spread the love

ಜನತಾ ಕರ್ಫ್ಯೂ ಗೆ ಸಂಪೂರ್ಣ ಬೆಂಬಲ – ಸ್ತಬ್ಧವಾದ ಉಡುಪಿ ಜಿಲ್ಲೆ

ಉಡುಪಿ: ಮಹಾಮಾರಿ ಕೊರೋನಾ ವೈರಸ್ ತಡೆಗೆ ಇಂದು ದೇಶಾದ್ಯಂತ ಜನತಾ ಕರ್ಫ್ಯೂ ನಡೆಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಜನರು ಸ್ವ ಇಚ್ಛೆಯಿಂದ ಮನೆಯಲ್ಲಿಯೇ ಉಳಿದುಕೊಳ್ಳಲು ಬಯಸಿದ್ದಾರೆ. ಪ್ರಧಾನಿ ಮೋದಿಯವರ ಕರೆಗೆ ಉಡುಪಿ ಜಿಲ್ಲೆಯ ಜನತೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ವಾಹನ ಸಂಚಾರ ಸ್ತಬ್ಧವಾಗಿದ್ದು ನಗರದ ರಸ್ತೆಗಳು ಜನರಿಲ್ಲದೆ ಖಾಲಿಯಾಗಿದೆ. ಜಿಲ್ಲೆಯ ರೆಸಿಡೆನ್ಸಿಯಲ್ ಏರಿಯಾಗಳು ಸಂಪೂರ್ಣ ಮೌನವಾಗಿದ್ದು ಜನರು ಮನೆಯಿಂದ ಹೊರಗಡೆ ಬಾರದೆ ಜನತಾ ಕರ್ಫ್ಯೂ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಂಚಾರ ಸಾರಿಗೆ, ಸೇರಿದಂತೆ ಖಾಸಗಿ ಬಸ್ಸುಗಳು, ಆಟೋ, ಉಬರ್, ಒಲಾಗಳ ಓಡಾಟ ಸ್ತಬ್ಧವಾಗಿದೆ. ಮಾರುಕಟ್ಟೆ, ದಿನಸಿ, ತರಕಾರಿ, ಹಣ್ಣು ಮಾರುಕಟ್ಟೆಗಳು ಬಂದ್ ಆಗಿವೆ

ನಗರದಲ್ಲಿನ ಕೃಷ್ಣ ಮಠ ಸೇರಿದಂತೆ ಎಲ್ಲಾ ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು ಕೂಡ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಮಾಡಿವೆ.


Spread the love

Exit mobile version