ಜನಪ್ರತಿನಿಧಿಗಳೇ ಪ್ರಚೋದಿತ  ಹೇಳಿಕೆಗಳಿಗಿಂತ ಆಶಕ್ತರೆಂದು ಒಪ್ಪಿಕೊಳ್ಳಿ: ಸುಶೀಲ್ ನೊರೊನ್ಹ

Spread the love

ಜನಪ್ರತಿನಿಧಿಗಳೇ ಪ್ರಚೋದಿತ  ಹೇಳಿಕೆಗಳಿಗಿಂತ ಆಶಕ್ತರೆಂದು ಒಪ್ಪಿಕೊಳ್ಳಿ: ಸುಶೀಲ್ ನೊರೊನ್ಹ

ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಎರಡು ವರುಷಗಳಿಂದ ಪಂಪ್‍ವೆಲ್ ಮೇಲ್ಸೆತುವೆ ಕಾಮಾಗಾರಿ ಬಗ್ಗೆ ನವಯುಗ ಕಂಪೆನಿ ವಿರೋಧ ಹೇಳಿಕೆ, ಆನಂತರ ಉಧ್ಘಾಟನೆಗೆ ದಿನಾಂಕ ನಿಗದಿ, ಕಾಮಾಗಾರಿ ವಿಳಂ¨ ಸಂಧರ್ಭ ಟೋಲ್‍ಗೇಟ್ ಒಡೆಯುವುದು ಈ ಎಲ್ಲಾ ನಾಟಕೀಯ ಹೇಳಿಕೆಗಳು ಒಬ್ಬ ಜವಾವ್ದಾರಿಯುತ ಸಂಸದರ ಘನತೆಗೆ ತಕ್ಕ ಮಾತುಗಳಲ್ಲ. ಕಳೆದ ಒಂಭತ್ತು ವರುಷಗಳಿಂದ ತಾವು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಪಂಪ್‍ವೆಲ್ ಮೇಲ್ಸೆತುವೆಯ ಕೆಲಸವನ್ನು ಸಂಪೂರ್ಣಗೊಳಿಸಲು ಪ್ರಯತ್ನ ಮಾಡದೇ ತಮ್ಮ ಪ್ರಚೋದನೆಯನ್ನು ವ್ಯಕ್ತಪಡಿಸಿ ತಾನು ಜೈಲಿಗೆ ಹೋಗುತ್ತೇನೆ ಎಂದು ಹೇಳಿ ಜನರಿಗೆ ಮರಳು ಮಾಡುವುದು ಎಷ್ಟರಮಟ್ಟಿಗೆ ಸರಿ? ನಿಮ್ಮ ಮಾತಿನ ಶೈಲಿಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಸುರತ್ಕಲ್ ಟೋಲ್‍ಗೇಟ್ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಜಿಲ್ಲೆಯಲ್ಲಿ 7 ಶಾಸಕರಿದ್ದು ಕೇಂದ್ರದಲ್ಲಿ ತಮ್ಮ ಸರಕಾರ ಅಧಿಕಾರದಲ್ಲಿದ್ದು ಪಂಪ್‍ವೆಲ್ ಮೇಲ್ಸೆತುವೆ, ಸುರತ್ಕಲ್ ಟೋಲ್ ಗೇಟ್, ವಿಜಯ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡದೊಡನೆ ವೀಲಿನ ಇಂತಹ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರಕದಿರುವುದು ಈ ಜಿಲ್ಲೆಯ ಮಹಾ ದುರಂತ. ನಮ್ಮ ಜನಪ್ರತಿನಿಧಿಗಳಿಗೆ ತಮ್ಮ ಅಧಿಕಾರವನ್ನು ಹೇಗೆ ಚಲಾವಣೆ ಮಾಡುವುದರ ಬಗ್ಗೆ ತಿಳಿಯದಿರುವುದು ಸ್ಪಷ್ಟ ಗೋಚರವಾಗುತ್ತದೆ. ಇದೀಗ ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರ ಕಾರ್ಯದರ್ಶಿ ವೈಭವ್‍ರವರು ಮೇ 2019 ರ ಅವಧಿ ಒಳಗೆ ಕೆಲಸವನ್ನು ಸಂಪೂರ್ಣಗೊಳಿಸಲು ನವಯುಗ ಕಂಪೆನಿಗೆ ಆದೇಶ ನೀಡಿದ್ದು, ಮೇ ತಿಂಗಳಿನಲ್ಲಿ ಮಹಾಚುನಾವಣೆಯ ಸಮಯ, ಅನಂತರ ಮಳೆಗಾಲ ಪ್ರಾರಂಬ. ಅದ್ದರಿಂದ ತಾವು ಕೇವಲ ಪ್ರಚೋದನೆಯ ಹೇಳಿಕೆಗಳನ್ನು ನೀಡುವುದಕ್ಕಿಂತ ತಾವು ಅಸಹಾಯಕರು ಎಂದು ತಮ್ಮನ್ನು ಲೋಕಸಭೆಗೆ ಪ್ರತಿನಿಧಿಯಾಗಿ ಕಳುಹಿಸಿದ ಜಿಲ್ಲೆಯ ಜನರಲ್ಲಿ ಕ್ಷಮೆಯನ್ನು ಕೇಳಿರಿ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.


Spread the love