ಜನಸಾಮಾನ್ಯರಿಗೆ ಕೇಂದ್ರ ಸರಕಾರವು ನೀಡಿದ ಬಜೆಟ್ ನಿರಾಶಾದಾಯಕ : ದಕ ಜಿಲ್ಲಾ ಜೆಡಿಎಸ್
ಮಂಗಳೂರು: ಕೇಂದ್ರ ಸರಕಾರವು ಮಂಡಿಸಿದ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದ್ದು ಜನ ಸಾಮಾನ್ಯರಿಗೆ ಯಾವುದೇ ಲಾಭವಿಲ್ಲದ ಬಜೆಟ್ ಇದಾಗಿದೆ. ರೈತರು ಹಾಗೂ ಯುವಕರ ಬಗ್ಗೆ ಯಾವುದೇ ಯೋಜನೆಗಳನ್ನು ಬಜೆಟಿನಲ್ಲಿ ಉಲ್ಲೇಖಿಸದೇ ಇರುವುದು ಅಘಾತಕಾರಿ ವಿಷಯ ಎಂದು ದಕ್ಷಿಣ ಕನ್ನಡ ಜೆಡಿಎಸ್ ಅಭಿಪ್ರಾಯಪಟ್ಟಿದೆ
ಕೇವಲ ಹೆಚ್ಚಿನ ಅದಾಯ ತೆರಿಗೆ ಸಂಗ್ರಹ ಮಾಡಲು ಪ್ಯಾನ್ ಕಾರ್ಡ್ ಬದಲು ಅಧಾರ್ ಕಾರ್ಡ್ ಕೂಡ ಉಪಯೋಗಿಸಬಹುದೆಂದು ಹೇಳುವುದು ಇದರಿಂದ ಜನ ಸಾಮಾನ್ಯರಿಗೆ ಯಾವುದೇ ಲಾಭವಿಲ್ಲ. ಪೆಟ್ರೋಲ್ ಮತ್ತು ಡೀಸಿಲ್ 2 ರುಪಾಯಿ ಸೆಸ್ ವಿಧಿಸಿ ದಿನ ಬಳಕೆ ವಸ್ತುಗಳ ಮೇಲೆ ಹಾಗೂ ಜನ ಸಾಮಾನ್ಯಾರ ಮೇಲೆ ಹೆಚ್ಚಿನ ಹೊರೆ ಬೀಳುವುದರಲ್ಲಿ ಸಂದೇಹವಿಲ್ಲ. ಕೇಂದ್ರ ಸರಕಾರವು ಬ್ಯಾಂಕ್ಗಳಿಗೆ 70 ಸಾವಿರ ಕೋಟಿ ನೀಡಲು ಮುಂದಾಗಿದ್ದು, ಶ್ರೀಮಂತರಿಗೆ ಕೊಳ್ಳೆ ಹೊಡೆಯಲು ಅನುಕೂಲವಾಗಲಿರುವುದು. ಕೇಂದ್ರ ಸರಕಾರ ನಡೆಸಲು ಬಿಜೆಪಿಗೆ ಸ್ವಷ್ಟ ಬಹು ಮತವನ್ನು ನೀಡಿದಕ್ಕೆ ಜನಸಾಮಾನ್ಯರಿಗೆ ದೊರೆತ ದೊಡ್ಡ ಉಡುಗೊರೆಯಾಗಿದೆಂದು ದಕ್ಷಿಣ ಕನ್ನಡ ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.