Home Mangalorean News Kannada News ಜನಾರ್ದನ ಪೂಜಾರಿಗೆ ಕೊಲೆ ಬೆದರಿಕೆ ; ಕಠಿಣ ಕ್ರಮಕ್ಕೆ ಜೆ. ಆರ್ ಲೋಬೊ ಆಗ್ರಹ

ಜನಾರ್ದನ ಪೂಜಾರಿಗೆ ಕೊಲೆ ಬೆದರಿಕೆ ; ಕಠಿಣ ಕ್ರಮಕ್ಕೆ ಜೆ. ಆರ್ ಲೋಬೊ ಆಗ್ರಹ

Spread the love

ಜನಾರ್ದನ ಪೂಜಾರಿಗೆ ಕೊಲೆ ಬೆದರಿಕೆ ; ಕಠಿಣ ಕ್ರಮಕ್ಕೆ ಜೆ. ಆರ್ ಲೋಬೊ ಆಗ್ರಹ

ಮಂಗಳೂರು: ಸಾಮಾಜಿಕ ಜಾಲ ತಾಣದಲ್ಲಿ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ವಿತ್ತ ಸಚಿವರಾದ ಜನಾರ್ದನ ಪೂಜಾರಿಯ ಬಗ್ಗೆ ಅವಹೇಳನಕಾರಿ ಸಂದೇಶ ಕಳುಹಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಜೊತೆಯಲ್ಲಿ ಪೊಲೀಸ್ ಆಯುಕ್ತರಿಗೆ ಮಾಜಿ ಶಾಸಕರಾದ ಜೆ.ಆರ್.ಲೋಬೊರವರು ಮನವಿ ಸಲ್ಲಿಸಿದರು.

ಡಿಸೆಂಬರ್ 2ರಂದು ಅನಾಮಧೇಯ ವ್ಯಕ್ತಿಯೊಬ್ಬ ಕಾಂಗ್ರೆಸಿನ ಹಿರಿಯ ನಾಯಕ ಜನಾರ್ದನ ಪೂಜಾರಿಯವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳಾಗಿ ಚಿತ್ರೀಕರಿಸಿ ಅವರನ್ನು ದೇಶದ್್ರೋಹಿ ಹಾಗೂ ಎನ್ ಕೌಂಟರ್ ಮಾಡಬೇಕೆಂದು ಕರೆ ನೀಡಿರುತ್ತಾರೆ. ಈ ನಿಟ್ಟಿನಲ್ಲಿ ತ್ವರಿತ ಹಾಗೂ ಪರಿಣಾಮಕಾರಿಯಾಗಿ ತನಿಖೆ ಮಾಡಿ ಇಂತಹ ಹೇಳಿಕೆ ನೀಡುವ ವ್ಯಕ್ತಿ ಅಥವಾ ಸಂಘಟನೆ ಹಾಗೂ ಇದರ ಹಿನ್ನಲೆಯನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಲೋಬೊ ಒತ್ತಾಯಿಸಿದ್ದಾರೆ.


Spread the love

Exit mobile version