ಜನಾರ್ದನ ಪೂಜಾರಿ ಅತ್ಮಚರಿತ್ರೆಯಲ್ಲಿ ಬಂಗಾರಪ್ಪ ಅವಹೇಳನ; ಅಕ್ಷಿತ್ ಸುವರ್ಣ ಖಂಡನೆ

Spread the love

ಜನಾರ್ದನ ಪೂಜಾರಿ ಅತ್ಮಚರಿತ್ರೆಯಲ್ಲಿ ಬಂಗಾರಪ್ಪ ಅವಹೇಳನ; ಅಕ್ಷಿತ್ ಸುವರ್ಣ ಖಂಡನೆ

ಮಂಗಳೂರು: ಕಾಂಗ್ರೆಸಿನ ಹಿರಿಯ ನಾಯಕ ಜನಾರ್ದನ ಪೂಜಾರಿಯವರು ತಮ್ಮ ಆತ್ಮಚರಿತ್ರೆಯ ಪುಸ್ತಕದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಅವಹೇಳನ ಮಾಡಿರುವುದನ್ನು ದಕ ಜಿಲ್ಲಾ ಯುವ ಜೆಡಿಎಸ್ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಮತ್ತು ವಸಂತ ಪೂಜಾರಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ವಸಂತ ಪೂಜಾರಿ ಅವರು, ಜನಾರ್ದನ ಪೂಜಾರಿಯವರು ತಮ್ಮ ಆತ್ಮ ಚರಿತ್ರೆಯಲ್ಲಿ ಹಿರಿಯ ಹಾಗೂ ಹಿಂದುಳಿದ ವರ್ಗಗಳ ನಾಯಕರು ಹಾಗೂ ಬಿಲ್ಲವ ಸಮಾಜದ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾದ ಈ ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ಏಳಿಗೆಗಾಗಿ, ಕಾರಣೀಕರ್ತರಾದ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪರವನ್ನು ಅವಹೇಳನ ಮಾಡಿರುವುದು ಅವರ ಅಭಿಮಾನಿಗಳಿಗೆ ಹಾಗೂ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು, ಪೂಜಾರಿಯವರು ತಮ್ಮ ಆತ್ಮ ಚರಿತ್ರೆ ಪುಸ್ತಕವನ್ನು ಪುನರಪಿ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜಾತ್ಯಾತೀತ ನೆಲೆಯಲ್ಲಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಧೀಮಂತ ನಾಯಕ ಎನಿಸಿಕೊಂಡಿದ್ದ ಬಂಗಾರಪ್ಪನವರು ಈ ರಾಜ್ಯದಲ್ಲಿ ಹಾಗೂ ದಕ ಜಿಲ್ಲೆಯ ಹಿಂದುಳೀದ ವರ್ಗಗಳಿಗೆ ಹಾಗೂ ಮೂರ್ತೆದಾರರ ಏಳಿಗೆಗಾಗಿ ದುಡಿದಂತಹ ಬಿಲ್ಲವ ಸಮಾಜದ ಅಗ್ರಮಾನ್ಯ ನಾಯಕರಾಗಿ ಮೂಡಿಬಂದವರು.

ಜನಾರ್ದನ ಪೂಜಾರಿಯವರ ಆತ್ಮಚರಿತ್ರೆಯ ಬರವಣಿಗೆಯ ಮೂಲಕ ಬಂಗಾರಪ್ಪರವರನ್ನು ಅವಮಾನ ಮಾಡಿದ್ದರಿಂದ ಬಿಲ್ಲವ ಸಮಾಜಕ್ಕೆ ಹಾಗೂ ಹಿಂದುಳೀದ ವರ್ಗಕ್ಕೆ ಬಹಳ ಬೇಸರವಾಗಿದ್ದು ಆತ್ಮಚರಿತ್ರೆಯಲ್ಲಿ ಬರೆದಂತಹ ಬರವಣಿಗೆಯನ್ನು ಜಾತ್ಯಾತೀತ ನೆಲೆಯಲ್ಲಿ ಖಂಡಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love