ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಭಾಷಣ ವ್ಯಕ್ತಿಯ ಬಂಧನ
ಸುಳ್ಯ: ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಜುನಾಥ ಉಡುಪ ಎಂದು ಗುರುತಿಸಲಾಗಿದೆ
ಸಪ್ಟೆಂಬರ್ 9ರಂದು ಬಂಟ್ವಾಳ ತಾಲ್ಲೂಕು ವಿಟ್ಲ ಠಾಣಾ ವ್ಯಾಪ್ತಿಯ ಕಡಂಬು ಗ್ರಾಮದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ಖಾಸಗಿ ಜಾಗದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಕೇರಳದ ಕಾಸರಗೋಡು ಜಿಲ್ಲಾ ಹಿಂದೂ ಐಕ್ಯವೇಧಿ ಕಾರ್ಯದರ್ಶಿ ಮಂಜುನಾಥ ಉಡುಪ @ ಪುಷ್ಪರಂಗ ಭಟ್ ಎಂಬುವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡುವಾಗ ಅನ್ಯಧರ್ಮದವರನ್ನು ಹೀಯಾಳಿಸಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದು ಈ ಕಾರ್ಯಕ್ರಮಕ್ಕೆ ಅನುಮತಿ ಪಡೆಯದೆ ಧ್ವನಿವರ್ಧಕವನ್ನು ಉಪಯೋಗಿಗಸಿದ್ದು ಈ ಕುರಿತು ಭಾಷಣ ಮಾಡಿದ ಮಂಜುನಾಥ ಉಡುಪ, ಕಾರ್ಯಕ್ರಮದ ಸಂಘಟಕ ಚೇತನ್ ಪೆಡಿಮಲೆ, ನಿರೂಪಕ ಭಾಸ್ಕರ್ ಟೇಲರ್, ಮತ್ತು ವೇದಿಕೆ ಮೇಲೆ ಹಾಜರಿದ್ದ ಸುರೇಶ ಕೊಟ್ಟಾರಿ, ವರದರಾಜ ಕೊಟ್ಟಾರಿ, ಬಿ.ಕೆ ಕೃಷ್ಣಪ್ಪ ಸಾಲಿಯಾನ, ರಮೇಶ ಪೂಜಾರಿ ರವರ ಮೇಲೆ ವಿಟ್ಲ ಠಾಣೆ ಅ.ಕ್ರ 243/2018 u/s 153A, 295A IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣ ದಾಖಲಾದ ದಿನದಿಂದ ಆರೋಪಿತರೆಲ್ಲರೂ ತಲೆ ಮರೆಸಿಕೊಂಡಿದ್ದು ಮಂಜುನಾಥ ಉಡುಪ ಮತ್ತು ಬಿ.ಕೆ ಕೃಷ್ಣಪ್ಪ ಸಾಲಿಯಾನ ರವರನ್ನು ಹೊರತು ಪಡಿಸಿ ಉಳಿದ ಆರೋಪಿಗಳು ಸಪ್ಟೆಂಬರ್ 11 ರಂದು ACJ & JMFC ನ್ಯಾಯಾಲಯ ಬಂಟ್ವಾಳದಲ್ಲಿ ಜಾಮೀನು ಪಡೆದು ಠಾಣೆಗೆ ಹಾಜರಾಗಿರುತ್ತಾರೆ.ಸದರಿ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ಉಡುಪ ಪತ್ತೆಗೆ ಕೇರಳದ ಕಾಸರಗೋಡು ಜಿಲ್ಲೆಯ ಅದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳೇರಿಯಾ, ಗಾಡಿಗುಡ್ಡೆ, ಕುಂಟಾರು ಪ್ರದೇಶಗಳಲ್ಲಿ ಶೋಧಿಸಿದ್ದು ಈತನು ಕಣಿಯೂರು ಮಠ ಶಾಖೆ ಗಾಡಿಗುಡ್ಡೆ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ.ಅಲ್ಲದೆ ಕಾಸರಗೋಡು ಬಿ.ಜೆ.ಪಿ ಪ್ರಮುಖ ರವೀಷ ತಂತ್ರಿಯವರ ಸಹವರ್ತಿಯಾಗಿರುತ್ತಾನೆ ಮತ್ತು ಈತನ ಮೇಲೆ ಅದೂರು ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ.ಈತ ಮೂಲತಹ ತುಮಕೂರು ಜಿಲ್ಲೆ ಶೆಟ್ಟಿಕೆರೆ ಗೇಟ್ ಸಿ.ಎನ್ ಹಳ್ಳಿ ಯವಾನಾಗಿದ್ದು ಪ್ರಸ್ತುತ ಕಾಸರಗೋಡು ಜಿಲ್ಲೆ ಹಿಂದೂ ಐಕ್ಯವೇಧಿ ಕಾರ್ಯದರ್ಶಿ ಯಾಗಿರುತ್ತಾನೆ.
ಪ್ರಕರಣ ದಾಖಲಾದ ದಿನದಿಂದ ತಲೆಮೆರೆಸಿಕೊಂಡಿದ್ದವನು ಸಪ್ಟೆಂಬರ್ 19 ರಂದು ಮಾನ್ಯ ACJ & JMFC ನ್ಯಾಯಾಲಯದಿಂದ ಜಾಮೀನು ಪಡೆದು ಠಾಣೆಗೆ ಹಾಜರಾದವನನ್ನು ದಸ್ತಗಿರಿ ಮಾಡಿರುತ್ತೇವೆ.ಈತನ ವಿರುದ್ಧ ಮತೀಯ ಗೂಂಡಾಶೀಟ್ ತೆರೆಯಲು ಕ್ರಮವಹಿಸಲಾಗಿದೆ