Home Mangalorean News Kannada News ಜನ ಮನ – ಫಲಾನುಭವಿ ಬೇಡಿಕೆ 24 ಗಂಟೆಯೊಳಗೆ ಪೂರೈಕೆ

ಜನ ಮನ – ಫಲಾನುಭವಿ ಬೇಡಿಕೆ 24 ಗಂಟೆಯೊಳಗೆ ಪೂರೈಕೆ

Spread the love

ಉಡುಪಿ : ‘ಆರು ಮನೆಗಳಲ್ಲಿ ಮನೆ ಕೆಲಸ ಮಾಡಿ ನಾನು ಮತ್ತು ತಂಗಿ ಒಂದು ಸಣ್ಣ ಮನೆಯಲ್ಲಿದೇವೆ. ಅಕ್ಕಿ ನಿಮ್ಮ ದಯೆಯಿಂದ ಸಿಕ್ಕುತ್ತದೆ. ಆದರೆ ಅದು ಸಾಕಾಗುವುದಿಲ್ಲ.ಜಾಸ್ತಿ ಅಕ್ಕಿ ಕೊಟ್ಟರೆ ಎರಡು ಮನೆ ಕೆಲಸ ಬಿಡುತ್ತೇನೆ. ನಾಲ್ಕು ಮನೆಯಲ್ಲಿ ಕೆಲಸ ಮಾಡುತ್ತೇನೆ. ಇವತ್ತೆ ನನಗೆ ಉತ್ತರ ಸಿಕ್ತದ?’

image001janamana-udupi-20160516

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಿದ “ಜನಮನ” ಸರ್ಕಾರದಿಂದ ಜನಾಭಿಪ್ರಾಯ ಸಮಾವೇಶವನ್ನು ರಾಜ್ಯ ಸರಕಾರಕ್ಕೆ ಮೂರು ವರ್ಷ ತುಂಬಿದ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ ಫಲಾನುಭವಿಗಳು ರಾಜ್ಯದ ಮುಖ್ಯಮಂತ್ರಿ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಉಡುಪಿ ಜಿಲ್ಲೆಯ ಅನ್ನಭಾಗ್ಯ ಫಲಾನುಭವಿ ಲಲಿತಾ ಪ್ರಭು (57) ಪರ್ಕಳದ ನಿವಾಸಿ ಅವರು ಮುಖ್ಯಮಂತ್ರಿಗಳ ಬಳಿ ಸಲ್ಲಿಸಿದ ಬೇಡಿಕೆ ಇದು. 13 ರಂದು ಸಂಜೆ ನೀಡಿದ ಬೇಡಿಕೆಯನ್ನು 14 ರಂದು ಸಂಜೆ ಲಲಿತಾ ಪ್ರಭು ಉಡುಪಿಗೆ ತಲುಪಿದ ತಕ್ಷಣವೇ ಉಡುಪಿ ಜಿಲ್ಲೆಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕ ಯೋಗೀಶ್ವರ್ ಅವರು ಫಲಾನುಭವಿಯ ಮನೆಗೆ ಭೇಟಿ ನೀಡಿ “ಅಂತ್ಯೋದಯ ಕಾರ್ಡ್” ನೀಡಿದರು. ಮುಂದಿನ ತಿಂಗಳಿನಿಂದ ಲಲಿತಾ ಪ್ರಭು ಅವರಿಗೆ 29 ಕೆಜಿ ಅಕ್ಕಿ , 6 ಕೆಜಿ ಗೋಧಿ ಲಭ್ಯವಾಗಲಿದೆ. ಅವರು ಇನ್ನು ನಾಲ್ಕು ಮನೆಗಳ ಕೆಲಸಕ್ಕೆ ಹೋಗಲಿದ್ದಾರೆ. ಸಿಎಂ ಜೊತೆಗಿನ ಭೇಟಿ ಹಾಗೂ ಅವರಿಗೆ ಸೂಕ್ತ ಉತ್ತರ ಅವರಿಗೆ 24 ಗಂಟೆಯ ಒಳಗೆ ಲಭಿಸಿದೆ. ಇಲಾಖೆ ಕಮೀಷನರ್ ಅನ್ಬುಕುಮಾರ್ ಅವರು ಫಲಾನುಭವಿಗಳ ಸಂವಾದದ ಸ್ಥಳದಿಂದಲೇ ಉಡುಪಿಯ ಇಲಾಖೆ ಉಪನಿರ್ದೇಶಕರನ್ನು ಸಂಪರ್ಕಿಸಿ ನೀಡಿದ ಸೂಚನೆಯನ್ನು ತಕ್ಷಣವೇ ಪಾಲಿಸಲಾಗಿದೆ ಎಂದು ಯೋಗೇಶ್ವರ್ ಹೇಳಿದರು.
ಪಶುಭಾಗ್ಯದ ಫಲಾನುಭವಿ ಸಿರಿಯಾರದ ಸರೋಜ ಅವರು ಯೋಜನೆಯಿಂದ ಖುಷಿ ಲಭಿಸಿದ್ದಾಗಿ ಹೇಳಿದರು. ಕಾರ್ಕಳದ ರಜನಿ ಅವರು ಮುಖ್ಯಮಂತ್ರಿಗಳ ಬಳಿ ಮನಸ್ವಿನಿ ಯೋಜನೆಯಿಂದ ತನಗೆ ಬಹಳ ಉಪಕಾರವಾಗಿದೆ ಎಂದರು.


Spread the love

Exit mobile version