Home Mangalorean News Kannada News ಜನ ಸಾಮಾನ್ಯರನ್ನು ಭೇಟಿ ಮಾಡಿ ಯೋಜನೆಗಳನ್ನು ತಲುಪಿಸಿ : ಅಮರನಾಥ್ ಶೆಟ್ಟಿ

ಜನ ಸಾಮಾನ್ಯರನ್ನು ಭೇಟಿ ಮಾಡಿ ಯೋಜನೆಗಳನ್ನು ತಲುಪಿಸಿ : ಅಮರನಾಥ್ ಶೆಟ್ಟಿ

Spread the love

ಜನ ಸಾಮಾನ್ಯರನ್ನು ಭೇಟಿ ಮಾಡಿ ಯೋಜನೆಗಳನ್ನು ತಲುಪಿಸಿ : ಅಮರನಾಥ್ ಶೆಟ್ಟಿ

ದಕ್ಷಿಣ ಕನ್ನಡ ಜಾತ್ಯತೀತ ಜನತಾ ದಳದ ಸಭೆಯು ಮಿನಿ ವಿಧಾನ ಸೌಧ ಎನ್.ಜಿ.ಓ ಸಭಾಂಗಣದಲ್ಲಿ ಜಿಲ್ಲಾ ಅದ್ಯಕ್ಷರಾದ ಮಹಮ್ಮದ್ ಕುಂಞÂಯವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡÀ ರಾಜ್ಯದ ಮಾಜಿ ಸಚಿವರಾದ ಅಮರನಾಥ್ ಶೆಟ್ಟಿಯವರು ಮಾತನಾಡಿ ಇಂದು ಕರ್ನಾಟಕದಲ್ಲಿ ಮುಖ್ಯ ಮಂತ್ರಿಯಾಗಿ ಕುಮಾರ ಸ್ವಾಮಿಯವರು ಅಡಳಿತ ನಡೆಸುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕುಮಾರ ಸ್ವಾಮಿಯವರು ಮುಖ್ಯ ಮಂತ್ರಿಯಾದ ನಂತರ ಹಲವು ಹೋಜನೆಗಳನ್ನು ಜಾರಿಗೊಳಿಸಿದ್ದು, ಪಕ್ಷದ ಕಾರ್ಯಕರ್ತರು ಜನ ಸಾಮಾನ್ಯರನ್ನು ಭೇಟಿ ಮಾಡಿ ಯೋಜನೆÀಗಳು ತಲಪುವಂತೆ ಮಾಡಲು ಕರೆ ಕೊಟ್ಟರು.

ರಾಜ್ಯ ಉಪಾಧ್ಯಕ್ಷರಾದ ಎಂ. ಬಿ. ಸದಾಶಿವರವರು ಮಾತನಾಡಿ ಮುಂದಿನ ದಿನಗಳಲ್ಲಿ ಮಹಾ ನಗರ ಪಾಲಿಕೆ ಲೋಕ ಸಭೆ ಸ್ಫಳಿಯ ಚುನಾವಣೆಗಳು ನಡೆಯಲಿರುವುದರಿಂದ ಕಾರ್ಯಕರ್ತರಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದು ಇದನ್ನು ಕಾರ್ಯಗತಗೊಳಿಸಲು ಕರೆಕೊಟ್ಟರು. ಮಾತ್ರವಲ್ಲ ಜಿಲ್ಲೆಯ ಪಕ್ಷದ ಕಾರ್ಯಕರ್ತರಿಗೆ ಮುಖ್ಯ ಮಂತ್ರಿಯವನರನ್ನು ಭೇಟಿ ಮಾಡಲು ಮುಂದಿನ ದಿನಗ¼ಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಜಿಲ್ಲಾ ಅದ್ಯಕ್ಷರಾದ ಮಹಮ್ಮದ್ ಕುಂಞÂಯವರು ಮಾತನಾಡಿ ಜಿಲ್ಲೆಯಲ್ಲಿ ಪಕ್ಷದ ಎರಡು ಶಾಸಕರ ಕಛೇರಿಗಳು ಉದ್ಘಟನೆಗೊಂಡಿದ್ದು ಕಾರ್ಯಕಕರ್ತರು ಜನಸಾಮಾನ್ಯರ ಸಮಸ್ಯಗಳಿಗೆ ಸ್ಪಂದಿಸಲು ಅವಕಾಶವಿದ್ದು ಅದನ್ನು ಸದುಪಯೋಗ ಪಡಿಸಲು ಕರೆಕೊಟ್ಟರು. ಮುಂದಿನ ದಿನಗಳಲ್ಲಿ ನಿಗಮ ಮಂಡಳಿಗೆ ನೇಮಕಾತಿ ನಡೆಯುತ್ತಿದ್ದು ಪಕ್ಷದ ನಿಷ್ಟವಾಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಕೊರ್ಪರೇಟರ್ ರಮೀಜಾ ಭಾನು, ನಗರಸಭಾ ಸದಸ್ಯ ದಿನಕರ್ ಉಲ್ಲಾ¼,ï ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಮಹಿಳಾ ಘಟಕದ ಜಿಲ್ಲಾ ಪಧಾಧಿಕಾರಿಗಳಾದ ಚೂಡಾಮಣಿ ಅನಿತಾ ಭಂಡಾರ್ ಕಾರ್ಸ್ ಪಕ್ಷದ ನಾಯಕರಾದ ಮೀರಾ ಸಾಹೇಬ್, ನಾಸೀರ್, ರಘು ಮೊದಲಾದವರು ಪಕ್ಷದ ಸಂಘಟನಗಳ ಬಗ್ಗೆ ಅಭಿಪ್ರಾಯ ಮಂಡಿಸಿದರು.

ವೇದಿಕೆಯಲ್ಲಿ ಪಕ್ಷದ ನಾಯಕರಾದ ರಾಂ ಗಣೇಶ್, ಹೈದರ ಪತ್ತಿಪಾಡಿ, ಡಿ.ಪಿ. ಹಮ್ಮಬ್ಬ, ಸುಮತಿ ಹೆಗ್ಡೆ, ಅಕ್ಷಿತ್ ಸುವರ್ಣ, ರಮೀಜಾ ಬಾನು ಹಾಗೂ ರಾಜೇಶ್ರಿ ಹೆಗ್ಡೆ , ಬಿ. ಮೋಹನ, ಗೋಪಾಲ್ ಕೃಷ್ಣ ಅತ್ತಾವರ್, ರತ್ನಾಕರ್ ಸುವರ್ಣ, ಮಹಮ್ಮದ್ ಶಫೀ, ಹರೀಶ್ ಕೊಟ್ಟಾರಿ, ಶ್ರೀನಾಥ ರೈ, ಸುಧೀರ್, ಲತೀಫ್ ಒಳಚ್ಚಿಲ್, ಮುನೀರ್ ಮಿಕ್ಕೆಚೇರಿ, ಎನ್. ಪಿ. ಪುಷ್ಪರಾಜನ್, ಇಝಾ ಬಜಾಲ್ ಉಪಸ್ಥಿತರಿದ್ದರು. ದಕ್ಷಿಣ ವಿಧಾನÀ ಸಭಾ ಕ್ಷೇತ್ರದ ಅದ್ಯಕ್ಷರಾದ ವಸಂತ್ ಪೂಜಾರಿಯವರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಹಾ ಪ್ರದಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್ ಧನ್ಯವಾದ ಗೈದರು.


Spread the love

Exit mobile version