Home Mangalorean News Kannada News ಜಪಮಾಲೆ ಮೇರಿ ಮಾತೆಯ ಸಂಭ್ರಮದ ವಾರ್ಷಿಕೋತ್ಸವ

ಜಪಮಾಲೆ ಮೇರಿ ಮಾತೆಯ ಸಂಭ್ರಮದ ವಾರ್ಷಿಕೋತ್ಸವ

Spread the love

ಜಪಮಾಲೆ ಮೇರಿ ಮಾತೆಯ ಸಂಭ್ರಮದ ವಾರ್ಷಿಕೋತ್ಸವ

ಅತೀ ವಂ.ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ (ಮಂಗಳೂರಿನ ನಿವೃತ್ತಧರ್ಮಾಧ್ಯಕ್ಷರು)ಒಕ್ಟೋಬರ್7ರಂದು ಸಾಯಾಂಕಾಲ 5.30 ಕ್ಕೆ ಕಾಸ್ಸಿಯಾ ಸಂತರೀತಮ್ಮನವರದೇವಾಲಯದಲ್ಲಿಜಪಮಾಲೆ ಮೇರಿ ಮಾತೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಂಭ್ರಮದ ಬಲಿಪೂಜೆ ಅರ್ಪಿಸಿದರು.

ಬಿಶಪರುತಮ್ಮ ಸಂದೇಶದಲ್ಲಿ ಮಾತೆ ಮೇರಿತಮ್ಮ ಪುತ್ರ ಯೇಸುಸ್ವಾಮಿಯ ವಿಮೋಚನೆಯ ಕೆಲಸದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದರು.ಯೇಸುಸ್ವಾಮಿತಮ್ಮತಾಯಿಯನ್ನು ನಮ್ಮೆಲ್ಲರತಾಯಿಯನ್ನಾಗಿಕೊಟ್ಟಿದ್ದಾರೆ.ನಮ್ಮ ಸಮಸ್ಸೆಗಳಲ್ಲಿ ಮಾತೆ ಮೇರಿಯ ಮೊರೆ ಹೋದಾಗಅವರು ನಮ್ಮ ನೆರವಿಗೆದಾವಿಸುತ್ತಾರೆ.ದೇವರಲ್ಲಿ ನಮಗಾಗಿ ಪ್ರಾರ್ಥಿಸಿ ನಮ್ಮ ಸಂಕಷ್ಟಗಳಿಂದ ಪಾರು ಮಾಡುತ್ತಾರೆಎಂದರು.

ವಂ.ಡಾ. ಲಿಯೊ ಲಸ್ರಾದೊ ಸಂತಜೋಸೆಫ ಸೆಮಿನರಿಯ ಪ್ರಾಧ್ಯಾಪಕರುಜಪಮಾಲೆ ಪ್ರಾರ್ಥನೆಯ ಮಹತ್ವದ ಬಗ್ಗೆ ಪ್ರವಚನ ನೀಡಿದರು. ಯಾವಕುಟುಂಬದಲ್ಲಿ ಮಾತೆ ಮೇರಿಯವರ ಭಕ್ತಿಯಿಟ್ಟುಜಪಮಾಲೆ ಪ್ರಾರ್ಥನೆ ಮಾಡುತ್ತಾರೆ ಆ ಕುಟುಂಬಗಳಲ್ಲಿ ಐಕ್ಯತೆಕಂಡುಬರುತ್ತದೆ.ಮಾತೆ ಮೇರಿಯವರ ಭಕ್ತಿ ಮಾಡುವುದರಿಂದ ನಾವು ದೇವರಿಗೆ ಹತ್ತಿರವಾಗುತ್ತೇವೆ ಮತ್ತು ನಮ್ಮಲ್ಲಿ ಮಾನವ ಗುಣಗಳು ಬೆಳೆಯುತ್ತವೆ. ಜಪಮಾಲೆ ಪ್ರಾರ್ಥನೆ ನಮ್ಮ ವಿಮೋಚನೆಯ ರಹಷ್ಯಗಳನ್ನು ನೆನೆಯಲುತುಂಬಾ ಸಹಕಾರಿಎಂದರು.

ಬಲಿಪೂಜೆಯ ನಂತರ ಕಾಸ್ಸಿಯ ಸಂತರೀತದೇವಾಲಯದಿಂದಜೆಪ್ಪು ಸಂತಅಂತೋನಿ ಆಶ್ರಮದವರೆಗೆ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿಜಪಸರ ಪ್ರಾರ್ಥನೆ, ಮಾತೆ ಮೇರಿಯವರಗೌರಾವರ್ಥ ಗೀತೆಗಳನ್ನು ಹಾಡಲಾಯ್ತು.ಪ್ರಪಂಚದ ವಿವಿದೆಡೆ ಮಾತೆ ಮೇರಿ ಕಾಣಿಸಿಕೊಂಡ ದೃಶ್ಯಾವಳಿಗಳು ಮೆರವಣಿಗೆಗೆ ಮೆರಗು ನೀಡಿದವು.

ವಾರ್ಷಿಕೋತ್ಸವವನ್ನು ಸಂತಆಂತೋನಿ ಆಶ್ರಮಜೆಪ್ಪು, ಸಂತರೀತದೇವಾಲಯ ಕಾಸ್ಸಿಯ, ಸಂತಜೋಸೆಫರದೇವಾಲಯಜೆಪ್ಪು, ಸಂತ ವಿನ್ಸೆಂಟ್ ಫೆರ್ರೆರ್‍ದೇವಾಲಯ ವೆಲೆನ್ಸಿಯ, ಮಿಲಾಗ್ರಿಸ್‍ದೇವಾಲಯ ಮಿಲಾಗ್ರಿಸ್‍ಇವರಜಂಟಿಆಶ್ರಯದಲ್ಲಿಆಯೋಜಿಸಲಾಗಿತ್ತು.ಕಾಸ್ಸಿಯಾ, ವೆಲೆನ್ಸಿಯಾ, ಜೆಪ್ಪುದೇವಾಲಯದಗಾಯನ ಮಂಡಳಿ ಮತ್ತುಶ್ರೀ ಸೈಮನ್ ಪಾಯ್ಸ್‍ಇವರ ನೇತೃತ್ವದಲ್ಲಿಯುನೈಟೆಡ್ ಫ್ಯಾಮಿಲಿ ಗಾಯನ ಮಂಡಳಿ ಗೀತೆಗಳನ್ನು ಹಾಡಲು ಸಹಕರಿಸಿದರು.

ಸಂತಆಂತೋನಿ ಆಶ್ರಮದ ನಿರ್ದೇಶಕರಾದ ಫಾ.ಒನಿಲ್ ಡಿ’ಸೋಜಕಾರ್ಯಕ್ರಮಕ್ಕೆ ನೆರವು ನೀಡಿದಎಲ್ಲರನ್ನು ವಂದಿಸಿದರು.ಕಾಸ್ಸಿಯ ದೇವಾಲಯದಫಾ. ಹೆರಾಲ್ಡ್ ಮಸ್ಕರೇನ್ಹಸ್, ವೆಲೆನ್ಸಿಯಾದೇವಾಲಯದಫಾ. ಜೇಮ್ಸ್ ಡಿ’ಸೋಜ, ಜೆಪ್ಪುದೇವಾಲಯದಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಫಾ.ಮ್ಯಾಕ್ಸಿಮ್‍ಡಿ’ಸೋಜ, ಫಾ.ಫ್ರಾನ್ಸಿಸ್‍ಡಿ’ಸೋಜ, ಸಂತಆಂತೋನಿ ಆಶ್ರಮದ ನಿರ್ದೇಶಕರಾದಫಾ.ತ್ರಿಶಾನ್ ಡಿ’ಸೋಜ ಮತ್ತು ಫಾ.ರೋಶನ್ ಡಿ’ಸೋಜಹಾಗೂ ಹೋಲಿ ಕಾನ್ವೆಂಟ್, ಜೆರೋಸಕಾನ್ವೆಂಟ್, ಇನ್ಫೆಂಟ್ ಮೇರಿಸ್‍ಕಾನ್ವೆಂಟ್, ರೋಶನಿ ನಿಲಯ, ಸೇಕ್ರಡ್‍ಹಾರ್ಟ್‍ಕಾನ್ವೆಂಟ್, ಸೈಂಟ್‍ಅ್ಯನ್ಸ್‍ಕಾನ್ವಂಟ್, ದೇವ ಕೃಪ, ವಿನಯಾಲಯಕಾನ್ವೆಂಟ್‍ನಧರ್ಮಭಗಿನಿಯರುಮತ್ತು ಸಾವಿರಾರು ಭಕ್ತಾಧಿಗಳುಜಪಮಾಲೆ ಭಕ್ತಿ ಸಂಭ್ರಮದಲ್ಲಿ ಭಾಗವಹಿಸಿದರು.


Spread the love

Exit mobile version