ಜಮ್ಶೆದ್ಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮಂಗಳೂರಿನ ಪ್ರಸಾದ್ ಶೆಟ್ಟಿ
ಮಂಗಳೂರು: ಮಂಗಳೂರಿನ ಪ್ರಸಾದ್ ಶೆಟ್ಟಿ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ತಮ್ಮ ಸಾಧನೆಯಿಂದ ಮತ್ತೊಮ್ಮೆ ನಗರಕ್ಕೆ ಕೀರ್ತಿ ತಂದಿದ್ದಾರೆ. ಜಮ್ಶೆದ್ಪುರದಲ್ಲಿ ಇಂಡಿಯನ್ ಪವರ್ ಲಿಫ್ಟಿಂಗ್ ಫೆಡರೇಶನ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅವರು ಚಿನ್ನ ಮತ್ತು ಬೆಳ್ಳಿ ಪದಕಗಳ ಸಹಿತ `ಇಂಟರ್ ನ್ಯಾಷನಲ್ ಸ್ಟ್ರಾಂಗೆಸ್ಟ್ ಮ್ಯಾನ್’ ಬಿರುದು ಕೂಡ ಗೆದ್ದಿದ್ದಾರೆ. ಈ ಸ್ಪರ್ಧೆ ಡಿಸೆಂಬರ್ 26ರಿಂದ 30ರವರೆಗೆ ನಡೆದಿತ್ತು.
ಡೆಡ್ ಲಿಫ್ಟ್ ಜೂನಿಯರ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಸಾದ್ ಅವರು ಈ ಪದಕಗಳನ್ನು ಹಾಗೂ ಬಿರುದನ್ನು ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಅವರು ಡೆಡ್ ಲಿಫ್ಟ್ ವಿಭಾಗದಲ್ಲಿ ಒಟ್ಟು 265 ಕೆಜಿ ಭಾರ ಎತ್ತಿದ್ದಾರೆ. ಪ್ರಸಾದ್ ಅವರು ಮಂಗಳೂರಿನ ಕಾರ್ಸ್ಟ್ರೀಟ್ನಲ್ಲಿರುವ ಬಾಲಾಂಜನೇಯ ಜಿಮ್ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ನಗರದ ಕೊಡಿಯಾಲ್ಗುತ್ತು ನಿವಾಸಿಯಾಗಿರುವ ಪ್ರಸಾದ್ ಶೆಟ್ಟಿಯವರು ಉದ್ಯಮಿ ಶ್ರೀ. ಕೆ ಚಂದ್ರಹಾಸ ಶೆಟ್ಟಿ ಹಾಗೂ ಶ್ರೀಮತಿ ಶಶಿಕಲಾ ಶೆಟ್ಟಿಯವರ ಹೆಮ್ಮೆಯ ಪುತ್ರ.