ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಡಾ. ಬಿ. ಎಂ. ಹೆಗ್ಡೆ ಯವರಿಗೆ “ಜಾರ್ಜ್ ಫೆರ್ನಾಂಡೀಸ್ ಸ್ಮಾರಕ – 2019” ಪ್ರಶಸ್ತಿ  

Spread the love

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಡಾ. ಬಿ. ಎಂ. ಹೆಗ್ಡೆ ಯವರಿಗೆ “ಜಾರ್ಜ್ ಫೆರ್ನಾಂಡೀಸ್ ಸ್ಮಾರಕ – 2019” ಪ್ರಶಸ್ತಿ  

ಮುಂಬಯಿ : ನಾನು ರಾಜಕಾರಣಿಯಾಗಿದ್ದರೂ ಕೂಡಾ ಬಿಡು ಸಮಯದಲ್ಲಿ ಸಮುದ್ರದ ತೆರೆಗಳನ್ನು ನೋಡಿ ಆನಂದಿಸುವ ನನಗೆ ಆ ತೆರೆಗಳ ಹಿಂದಿರುವ ಶಕ್ತಿಯ ಬಗ್ಗೆ ಅರಿವಾಗಿಲ್ಲ. ಅದೇ ರೀತಿ ಡಾ. ಬಿ. ಎಂ. ಹೆಗ್ಡೆಯವರ ಆಳವಾದ ವ್ಯಕ್ತಿತ್ವ. ಸಮಾಜದ ಸುತ್ತಲಿನ ಸಮಸ್ಯೆಗಳ ಬಗ್ಗೆ ಲಕ್ಕೆ ಒಡೆಯುವಂತಹ ವ್ಯಕ್ಟಿತ್ವವುಳ್ಳ ಏಕೈಕ ವ್ಯಕ್ಟಿ ಡಾ. ಬಿ. ಎಂ. ಹೆಗ್ಡೆ. ಹೀಗೆ ಇವರ ವ್ಯಕ್ತಿತ್ವದ ಮೇರುತನದ ಬಗ್ಗೆ ಅರ್ಥವಾಗದೆ ಚಡಪಡಿಸುತ್ತಿರುವವರಲ್ಲಿ ನಾನೂ ಒಬ್ಬ. ಅಂತವರಿಗೆ ಬಾರತ ದೇಶದ ಗೌರವಾನ್ವಿತ ಬೆರಳೆಣೆಕೆಯ ರಾಜಕಾರಣಿಗಳಲ್ಲಿ ಒಬ್ಬರಾದ ಜಾರ್ಜ್ ಫೆರ್ನಾಡೀಂಸ್ ಹೆಸರಲ್ಲಿ ಕೊಡಮಾಡುತ್ತಿರುವ ಈ ಪ್ರಶಸ್ತಿ ಮಹತ್ವಪೂರ್ಣವಾದದ್ದು, ನಮ್ಮ ಕರಾವಳಿಯಲ್ಲಿ ಜಾರ್ಜ್ ಫೆರ್ನಾಂಡೀಸ್ ರ ಹೆಸರು ಅಮರವಾಗಿರಲು ನಮ್ಮ ಸರಕಾರವು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಕರ್ನಾಟಕ ಸರಕಾರದ ವಿರೋದ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರು ನುಡಿದರು.

ಜೂ. 3 ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಹಾಲ್ ನಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸರ್ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ 2019ನ್ನು ಮಣಿಪಾಲ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಯವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಪ್ರಧಾನಿಸಲಾಗಿದ್ದು ಈ ಸಮಾರಂಭದ ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಶ್ರೀನಿವಾಸ ಪೂಜಾರಿಯವರು ಜಾರ್ಜ್ ಫೆರ್ನಾಂಡೀಸ್ ಓರ್ವ ರಾಜಕಾರಿಣಿಗಿಂತಲೂ ಅವರು ಜೀವನವನ್ನು ಕಟ್ಟಿಕೊಂಡ ರೀತಿ, ತುತ್ತು ಊಟಕ್ಕೆ ಬಡಿದಾಡುತ್ತಿರುವ ಜನರನ್ನು ಎತ್ತಿ ಕಟ್ಟಿ ಸರಕಾರದ ವಿರುದ್ದ ಹೋರಾಡಿ ನ್ಯಾಯವನ್ನು ಒದಗಿಸಿದ್ದು ಓರ್ವ ದೀಮಂತ ವ್ಯಕ್ತಿತ್ವ ಅವರದ್ದು. ಜೈಲಲ್ಲಿ ಇದ್ದು ಜನರ ಮುಖವನ್ನು ನೋಡದೆ ಚುನಾವಣೆಯಲ್ಲಿ ಗೆದ್ದಂತಹ ಈ ಮಹಾನ್ ವ್ಯಕ್ತಿಯ ಹೆಸರಲ್ಲಿ ಜಯಕೃಷ್ಣ ಶೆಟ್ಟಿ ಮತ್ತವರ ತಂಡವು ಈ ಪ್ರಶಸ್ತಿಯನ್ನು ನೀಡುತ್ತಿರುವುದು ನನಗೆ ರೋಮಾಂಚನಕಾರಿ ಅನುಭವವನ್ನು ನೀಡುತ್ತಿದೆ. ಫೆರ್ನಾಂಡೀಸ್ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಅಭಿನಂದನೆ ಸಲ್ಲಿಸುತ್ತಾ ಕರಾವಳಿಯ ಜಿಲ್ಲೆಗಳ ಅಭಿವೃದ್ದಿಗಾಗಿ ಹೋರಾಡುತ್ತಿರುವ ಸಮಿತಿಯ ಕಾರ್ಯ ಸ್ಲಾಘನೀಯ ಎಂದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಆರಮಿಸಿದ ಮಹಾರಾಷ್ಟ್ರದ  ಸಚಿವರಾದ ದೀಪಕ್ ಕೇಸರ್ಕರ್ ಮಾತನಾಡುತ್ತಾ ’ನಾನು ಇಬ್ಬರು ಹೆಗ್ಡೆಯವರನ್ನು ನೋಡಿರುವೆನು. ಒಬ್ಬರು ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಆದರೆ ಇನ್ನೊಬ್ಬರು ಪದ್ಮಭೂಷಣ ಡಾ. ವಿರೇಂದ್ರ ಹೆಗ್ಡೆ. ಡಾ. ವಿರೇಂದ್ರ ಹೆಗ್ಡೆಯವರು ಬಡವರ ಉದ್ದಾರಕ್ಕಾಗಿ ಮಾಡುತ್ತಿರುವ ಕಾರ್ಯವನ್ನು ನಾನು ಗಮನಿಸಿರುವೆನು. ಅಂತೆಯೇ ಡಾ. ಬಿ. ಎಂ. ಹೆಗ್ಡೆ ಯವರು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ಸಲ್ಲಿಸಿದ ಸೇವೆ ಪ್ರಶಂಸನೀಯ. ಇವರು ಕೇವಲ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ನಮ್ಮ ದೇಶದ ಒರ್ವ ಉತ್ತಮ ಬಾಷಣಗಾರನಾಗಿಯೂ ಪ್ರಸಿದ್ದರು. ಜಾರ್ಜ್ ಫೆರ್ನಾಂಡೀಸ್ ಬಗ್ಗೆ ಮಾತನಾಡಿದ ಅವರು ಕೊಂಕಣ ರೈಲ್ವೆಯ ನಮ್ಮ ಕನಸನ್ನು ನೆನಸಾಗಿದವರು ಜಾರ್ಜ್ ಫೆರ್ನಾಂಡೀಸ್ ಇಲ್ಲವಾದಲ್ಲಿ ನಾವು ಮಂಗಳೂರನ್ನು ತಲಪಲು ಇನ್ನೂ 800 – 900 ಕಿಲೋ ಮೀಟರ್ ಪ್ರಯಾಣ ಮಾಡಬೇಕಾಗಿತ್ತು. ನನ್ನ ಸಂಮಂಧಿಕರು ಮಂಗಳೂರಲ್ಲಿ ನೆಲೆಸಿದ್ದು ನಾನೂ ಕೂಡಾ ಆಗಾಗ ಮಂಗಳೂರಿಗೆ ಹೋಗುತ್ತಿರುವೆನು.

ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ಮಾತನಾಡುತ್ತಾ ಜಾರ್ಜ್ ಫೆರ್ನಾಂಡೀಸ್ ರಂತಹ ಮಹಾನ್ ವ್ಯಕ್ತಿಗಳು ನಮ್ಮ ಸಮಿತಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದುದರಿಂದ ನಮ್ಮ ಸಮಿತಿಯ ಮಹತ್ವ ಎಷ್ಟರ ಮಟ್ಟಿಗಿದೆ ಎಂಬುದನ್ನು ಬಾರತೀಯರು ಅರಿಯಬಹುದು. ಅದೇ ರೀತಿ ನಮ್ಮ ಜಿಲ್ಲೆಗಳ ಹಾಗೂ ದೇಶದ ಮಹಾನ್ ವ್ಯಕ್ಟಿತ್ವ ಡಾ. ಬಿ. ಎಂ. ಹೆಗ್ಡೆ ಯವರು ಜಾರ್ಜ್ ಫೆರ್ನಾಂಡೀಸ್ ರಂತೆ ಸಾಧನೆಯನ್ನು ಮಾಡಿದ್ದು ನಮ್ಮ ಸಮಿತಿಯು ಈ ಸಲ ಈ ಪ್ರಶಸ್ತಿಗೆ ಡಾ. ಬಿ. ಎಂ. ಹೆಗ್ಡೆ ಯವರನ್ನು ಆಯ್ಕೆ ಮಾಡಿದೆ.

ಇಂದು ನಮ್ಮೊಂದಿಗಿರುವ ನಮ್ಮ ಜಿಲ್ಲೆಯವರಾದ ಬ್ರಷ್ಟಾಚಾರ ರಹಿತ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿಯವರು ರಾಜಕೀಯದಲ್ಲಿ ಇನ್ನೂ ಉನ್ನತಮಟ್ಟಕ್ಕೇರುವ ಶಕ್ತಿಯನ್ನು ದೇವರು ಕರುಣಿಸಲಿ ಎಂದರು. ನಮ್ಮ ಸಮಿತಿಗೆ ಪ್ರೋತ್ಸಾಹ ನೀಡುತ್ತಿರುವ ಎಂ. ಡಿ. ಶೆಟ್ಟಿ ಯವರು ತನ್ನ ಈ ಪ್ರಾಯದಲ್ಲೂ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು ನಮ್ಮ ಸೌಭಾಗ್ಯವಾಗಿದೆ. ಡಾ. ಬಿ. ಎಂ. ಹೆಗ್ದೆಯವರು ಬಗ್ಗೆ ಹೇಳುದಾದರೆ ನಾಗಾರ್ಜುನ ಯೋಜನೆ ಸಮಯದಿಂದಲೇ, ರಾಜಕೀಯ ಮುಖಂಡರ ವಿರೋದವನ್ನು ಮೀರಿ ಇವರು ಬಹಳ ಪರಿಶ್ರಮಪಟ್ಟು ನಮಗೆ ನ್ಯಾಯ ಒದಗಿಸುವಲ್ಲಿ ಸಹಕರಿಸಿದ್ದಾರೆ ಎನ್ನುತ್ತಾ ಕುದುರೆಮುಖ ಯೋಜನೆ ಬಗ್ಗೆ ಸಮಿತಿಯು ಮಾಡುತ್ತಿರುವ ಕೆಲಸವನ್ನು ವಿವರಿಸಿದರು. ಸಮಯದ ಅಭಾವದಿಂದಾಗಿ ಇವರ ಸಾಧನೆ ಬೆಗ್ಗೆ ವಿವರಿಸಲಸಾಧ್ಯವಾಗುತ್ತಿದೆ ಎಂದ ಅವರು ಜಾರ್ಜ್ ಫೆರ್ನಾಂಡೀಸ್ ಮತ್ತು ಡಾ. ಬಿ. ಎಂ. ಹೆಗ್ದೆಯವರು ಸರಳ ವ್ಯಕ್ತಿತ್ವದ ಮಹಾನ್ ವ್ಯಕ್ತಿಗಳಾಗಿದ್ದು ಈ ಪ್ರಶಸ್ತಿಯು ಸರಿಯಾದ ವ್ಯಕ್ತಿಗೆ ಸಂದಿದೆ ಎಂಬುದಾಗಿ ನನಗೆ ಇತರರಿಂದಲೂ ಮಾಹಿತಿ ಸಿಕ್ಕಿರುತ್ತದೆ ಎಂದರು. ಮಂಗಳೂರು ವಿಮಾನ ನಿಲ್ಧಾಣ ಯಾ ರೈಲು ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡೀಸ್ ಹೆಸರನ್ನಿಡಲು ಸಮಿತಿಯ ಮೂಲಕ ಪ್ರಧಾನ ಮಂತ್ರಿಯು ಸೇರಿ ಹೆಚ್ಚಿನ ರಾಜಕೀಯ ಮುಖಂಡರುಗಳಲ್ಲಿ ಹಾಗೂ ಕೇಂದ್ರ ಮಂತ್ರಿಗಳಲ್ಲಿ ವಿನಂತಿಸಿದ್ದು ಇದು ಕಾರ್ಯಗತಗೊಳ್ಳುವಲ್ಲಿ ಸಂದೇಹವಿಲ್ಲ ಎಂದರು.

ಡಾ. ಬಿ. ಎಂ. ಹೆಗ್ದೆಯವೇನ್ನು ಡಾ. ಸುರೇಂದ್ರ ಕುಮಾರ್ ಹೆಗ್ದೆಯವರು ಪರಿಚಯಿಸುತ್ತಾ ಡಾ. ಬಿ. ಎಂ. ಹೆಗ್ದೆ ಯವರನ್ನು ಯಾರಿಗೂ ಹೋಲಿಸಲಾಗುದಿಲ್ಲ ಇವರನ್ನು ಕೇವಲ ಡಾ. ಬಿ. ಎಂ. ಹೆಗ್ದೆ (ಇವರಿಗೇ) ಯವರಿಗೆ ಮಾತ್ರ ಹೋಲಿಸಬಹುದು ಎಂದರು. ಮುಖ್ಯ ಅತಿಥಿಯಾಗಿ ಅಗಮಿಸಿದ ಮಾನ್ಯ ಸಚಿವರಾದ ದೀಪಕ್ ಕೇಸರ್ಕರ್ ಅವರು ಡಾ. ಬಿ. ಎಂ. ಹೆಗ್ದೆಯವರಿಗೆ ಸರ್ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ 2019 ಪ್ರಧಾನಿಸಿ ಗೌರವಿಸಿದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರೂ, ಅಧ್ಯಕ್ಷರೂ ಆದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಮತ್ತು ಗೌರವ ಅತಿಥಿ ಕೋಟ ಶ್ರೀನಿವಾಸ ಪೂಜಾರಿಯವರು ಡಾ. ಬಿ. ಎಂ. ಹೆಗ್ದೆಯವರನ್ನು ಪುಷ್ಪಗುಚ್ಚ, ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಡಾ. ಬಿ. ಎಂ. ಹೆಗ್ದೆಯವರು ಜಾರ್ಜ್ ಫೆರ್ನಾಂಡೀಸ್ ರು ಮುಂಬಯಿಗಾಗಮಿಸಿ ತನ್ನ ಆರಂಭದ ದಿನಗಳನ್ನು ರಸ್ತೆ ಬದಿಯಲ್ಲಿ ಕಳೆದರೂ ತನ್ನ ಕಷ್ಟ ಕಾರ್ಪಣ್ಯದ ಬಗ್ಗೆ ಹಿಂದೆ ನೋಡದೆ ಓರ್ವ ಸಂಪೂರ್ಣ ಬ್ರಷ್ಟಾಚಾರ ರಹಿತ ವ್ಯಕ್ತಿಯಾಗಿದ್ದ ಅವರು ರಾಜಕೀಯದಲ್ಲಿ ಕೆಸರಲ್ಲಿ ಹರಳಿದ ಕಮಲದಂತೆ. ಇಂತಹ ವ್ಯಕ್ತಿಯನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಗೌರವಿಸುತ್ತಿರುವುದು ಅಭಿಮಾನದ ಸಂಗತಿಯಗಿದೆ. ಅವರ ಹೆಸರಲ್ಲಿ ನೀಡುತ್ತಿರುವ ಪ್ರಶಸ್ತಿಯಲ್ಲಿ ಅವರ ಹೆಸರಿನ ಮುಂದೆ ಸಮಿತಿಯು “ಸರ್” ಪದವನ್ನು ಉಪಯೋಗಿಸಿ ಅವರಿಗೆ ಮತ್ತಷ್ಟು ಗೌರವ ನೀಡಿದಂತಾಗಿದೆ. ಇತರರಿಗೆ ಮಾದರಿಯಾಗಿರುವ ಜಾರ್ಜ್ ಫೆರ್ನಾಂಡೀಸ್ ರ ಹೆಸರನ್ನು ನಿರಂತರವಾಗಿ ಎಲ್ಲರೂ ನೆನಪಿಸುವಂತಾಗಲಿ. ಜಾರ್ಜ್ ಫೆರ್ನಾಂಡೀಸ್ ರ ಹೆಸರಲ್ಲಿ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಿದಕ್ಕೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರಿಗೆ ಹಾಗೂ ಸಮಿತಿಯ ಎಲ್ಲಾ ಕಾರ್ಯಕರ್ತರಿಗೆ ಅಭಾರ ಮನ್ನಿಸಿದರು.

ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿಯವರು ಮಾತನಾಡುತ್ತಾ ತುಳುನಾಡಿನವರಾದ ಡಾ. ಬಿ. ಎಂ. ಹೆಗ್ಡೆಯವರಿಗೆ ತುಳುನಾಡಿನವರೇ ಆದ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಇಡಿ ತುಳು ನಾಡಿನ ಎಲ್ಲಾ ಸಮುದಾಯವನ್ನು ಗೌರವಿಸಿದಂತೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಅಗಮಿಸಿದ ಮಹಾರಾಷ್ಟ್ರದ ಮಾನ್ಯ ಸಚಿವರಾದ ದೀಪಕ್ ಕೇಸರ್ಕರ್ ಇವರನ್ನು ಇನ್ನೋರ್ವ ಉಪಾಧ್ಯಕ್ಷರಾದ ಅಂತೋನಿ ಸಿಕ್ವೇರ ಪರಿಚಯಿಸಿದ್ದು. ಪಿ. ಡಿ. ಶೆಟ್ಟಿ, ಕೆ. ಎಲ್. ಬಂಗೇರ ಹಾಗೂ ಗೌರವ ಕೋಶಾಧಿಕಾರಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರು ಗೌರವಿಸಿದರು. ಗೌರವ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಸರಕಾರದ ವಿರೋದ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ದಯಾಸಾಗರ ಚೌಟ ಪರಿಚಯಿಸಿದ್ದು ಸಮಿತಿಯ ಉಪಾಧ್ಯಕ್ಷರುಗಳಾದ ಚಂದ್ರಶೇಖರ ಅರ್, ಬೆಳ್ಚಡ, ಜಿ.ಟಿ. ಆಚಾರ್ಯ ಹಾಗೂರಾಮಚಂದ್ರ ಗಾಣಿಗ ಗೌರವಿಸಿದರು. ಎಂ. ಡಿ. ಶೆಟ್ಟಿ ವರನ್ನು ಗೌರವ ಕಾರ್ಯದರ್ಶಿಗಳಾದ ರವಿ ಎಸ್.ದೇವಾಡಿಗ, ನ್ಯಾ. ಪ್ರಕಾಶ್ ಎಲ್. ಶೆಟ್ಟಿ ವರನ್ನು ತೋನ್ಸೆ ಸಂಜೀವ ಪೂಜಾರಿ ಮತ್ತು ವಿಶ್ವನಾಥ ಮಾಡ ರನ್ನು ಹ್ಯಾರಿ ಸಿಕ್ವೇರ ಅವರು ಗೌರವಿಸಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ಅತಿಥಗಣ್ಯರುಗಳನ್ನು ವೇದಿಕೆಗೆ ಬರಮಾಡಿಕೊಂಡರು. ರಂಜನಿ ಆರ್ ಮೊಯ್ಲಿಯವರ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮವು ಆರಂಭಗೊಂಡಿತು. ಸಮಿತಿಯ ಉಪಾಧ್ಯಕ್ಷರಾದ ಸಿಎ ಐ. ಆರ್. ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಮಾಹಿತಿಯಿತ್ತರು. ದೇವದಾಸ್ ಕುಲಾಲ್ ಕೊನೆಗೆ ವಂದನಾರ್ಪಣೆ ಮಾಡಿದರು.

ಈ ಸಮಾರಂಭದಲ್ಲಿ ಕರ್ನಾಟಕದ ಕರಾವಳಿಯ ಮುಂಬಯಿಯಲ್ಲಿರುವ ವಿವಿಧ ಜಾತೀಯ ಹಾಗೂ ಮತೀಯ ಸಂಘಟನಗಳ ಪ್ರಮುಖರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಸಮಾರಂಭದ ಯಶಸ್ವಿಗೆ ಸಹಕರಿಸಿದರು.

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್


Spread the love