ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ – 24ನೇ ವಾರ್ಷಿಕ ಮಹಾಸಭೆ, ಬೆಳ್ಳಿ ಹಬ್ಬಕ್ಕೆ ಚಾಲನೆ
ಮುಂಬಯಿ: ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಕಳೆದ 24 ವರ್ಷಗಳಿಂದ ಹಿಂದಿನ ಎಲ್ಲಾ ಅಧ್ಯಕ್ಷರುಗಳ ಅವಧಿಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ದಿಗಾಗಿ ಸತತ ಪ್ರಯತ್ನಿಸಿ ಯಶಸ್ವಿಯ ಹಾದಿಯಲ್ಲಿ ಮುಂದುವರಿಯುತ್ತಾ ಇದೀಗ 25 ನೇ ವರ್ಷದ ಬೆಳ್ಳಿ ಹಬ್ಬಕ್ಕೆ ಪದಾರ್ಪಣೆ ಮಾಡಿದೆ. ಈ ವರ್ಷವು ಸಮಿತಿಗೆ ಅತೀ ಮುಖ್ಯ ವರ್ಷವಾಗಿದ್ದು ಎಲ್ಲರೂ ಸೇರಿ ಸಮಿತಿಯ ಬೆಳ್ಳಿ ಹಬ್ಬ ಸಮಾರಂಭವನ್ನು ಅದ್ದೂರಿಯಿಂದ ನಡೆಸುದರೊಂದಿಗೆ ಅದು ನಮ್ಮ ಜಿಲ್ಲೆಗಳಲ್ಲೂ ಇತಿಹಾಸ ನಿರ್ಮಿಸುವಂತಾಗಲಿ ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್. ವಿ. ಅಮೀನ್ ನುಡಿದರು.
ಅ. 26 ರಂದು ಸಂಜೆ ಪೆನಿನ್ಸುಲಾ ಗ್ರಾಂಡ್ ಹೋಟೆಲು, ಸಾಕಿನಾಕಾ, ಮುಂಬಯಿ ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರ ಉಪಸ್ಥಿತಿಯಲ್ಲಿ, ಸಮಿತಿಯ 24 ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಇಂದು ಇಲ್ಲಿನ ವಿವಿಧ ಸಮುದಾಯದ 25 ಮಂದಿ ಗಣ್ಯರು 25 ದೀಪಗಳನ್ನು ಪ್ರಜ್ವಲಿಸಿ ದೀಪಾವಳಿಯ ಶುಭ ಸಂದರ್ಭದಲ್ಲಿ ಸಮಿತಿಯ ಬೆಳ್ಳಿ ವರ್ಷಕ್ಕೆ ಚಾಲನೆ ನೀಡಿದ್ದಾರೆ. ಈ ವರ್ಷ ನಮ್ಮ ವೆಬ್ ಸೈಟ್ ಲೋಕಾರ್ಪಣೆಗೊಳ್ಳಲಿದ್ದು ಇದಕ್ಕೆ ಹಾಗೂ ಸಮಿತಿಯ ಘಟನೆಯನ್ನು ರಚಿಸಲು ಸಹಕರಿಸಿದ ಸಮಿತಿಯ ಗಣ್ಯರಿಗೆ ಕೃತಜ್ನತೆ ಸಲ್ಲಿಸುತ್ತಾ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಮಿತಿಯ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವರದಿ ವರ್ಷದಲ್ಲಿ ಅಗಲಿದ ಸಮಿತಿಯ ಸದಸ್ಯರಿಗೆ ಮಹಾಸಭೆಯಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಗತವರ್ಷದ ವಾರ್ಷಿಕ ಮಹಾಸಭೆಯ ವರದಿ ಹಾಗೂ ವಾರ್ಷಿಕ ವರದಿಯನ್ನು ಮತ್ತು ಗೌರವ ಕೋಶಾಧಿಕಾರಿ ತುಳಸಿದಾಸ್ ಅಮೀನ್ ಅವರು ಗತ ವರ್ಷದ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು.
ಸಮಿತಿಯ ನೂತನ ಅಧ್ಯಕ್ಷರಾಗಿ ಸಮಿತಿಯಲ್ಲಿ ಆರಂಭದಿಂದಲೇ ಕಾರ್ಯನಿರತರಾಗಿದ್ದ ಸಮಾಜ ಸೇವಕ, ಸಂಘಟಕ ನಿತ್ಯಾನಂದ ಡಿ. ಕೋಟ್ಯಾನ್ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಸಭಿಕರ ಪರವಾಗಿ ನ್ಯಾ. ಶಶಿಧರ ಕಾಪು, ಮಾಜಿ ಅಧ್ಯಕ್ಷರಾದ ನ್ಯಾ. ಶಶಿಧರ ಕಾಪು, ಮಾಜಿ ಅಧ್ಯಕ್ಷರುಗಳಾದ ನ್ಯಾ. ಪ್ರಕಾಶ್ ಎಲ್ ಶೆಟ್ಟಿ, ಧರ್ಮಪಾಲ್ ಯು. ದೇವಾಡಿಗ ಮತ್ತು ಹರೀಶ್ ಕುಮಾರ್ ಶೆಟ್ಟಿ, ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಸಿಎಸ್ ಗಣೇಶ್, ಸಮಿತಿಯ ವಕ್ತಾರ ದಯಾಸಾಗರ ಚೌಟ, ಸದಾನಂದ ಆಚಾರ್ಯ, ಮಹಾರಾಷ್ಟ್ರ ಕನ್ನಡಿಗರ ಪರಿಷತ್ ನ ಅಧ್ಯಕ್ಷ ಡಾ. ಸುರೇಂದ್ರಕುಮಾರ್ ಹೆಗ್ಡೆ, ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷ ದೇವದಾಸ ಕುಲಾಲ್, ಸಮಿತಿಯ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ಮೊದಲಾದವರು ಮಾತನಾಡುತ್ತಾ ಸಮಿತಿಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರನ್ನು ಅಭಿನಂದಿಸುತ್ತ ಸಮಿತಿಯ ಮುಂದಿನ ಯೋಜನೆಗೆ ಹಾಗೂ ನೂತನ ಸಮಿತಿಗೆ ಸೂಕ್ತ ಸಲಹೆ ಸೂಚನೆಯನ್ನು ನೀಡಿದರು.
ಸಮಿತಿಯ ಕಾರ್ಯಚಟುವಟಿಕೆಗಳ ಕೆಲವು ಮಾಹಿತಿಯನ್ನು ಹೊಂದಿದೆ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಕರಾವಳಿಯ ಸರ್ವತೋಮುಖ ಅಭಿವೃದ್ದಿಗಾಗಿ ಮುಂದಿನ ನೂರು ವರ್ಷಗಳ ಯೋಜನೆಗಳನ್ನು ಹೊಂದಿದ ಕರಡು ಯೋಜನೆಯ ಪುಸ್ತಕವನ್ನು ಈ ಸಂದರ್ಭದಲ್ಲಿ ಗಣ್ಯರು ಬಿಡುಗಡೆಗೊಳಿಸಿದರು.
ಕೊನೇಗೆ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
====================
ಸಮಿತಿಯ ಬೆಳ್ಳಿ ಹಬ್ಬ ವರ್ಷವು ಅತೀ ಮುಖ್ಯವಾದದ್ದು. ನಮ್ಮ ಸಮಿತಿಯಲ್ಲಿ ಮುಂಬಯಿಯಲ್ಲಿರುವ ನಾಡಿನ ಎಲ್ಲಾ ಸಮುದಾಯದವರಿದ್ದು ಎಲ್ಲ ಸಮುದಾಯದವರು ಸೇರಿ ಬೆಳ್ಳಿ ಹಬ್ಬವನ್ನು ಆಚರಿಸಿದಂತೆ ಹಾಗೂ ನಮ್ಮ ಸಮಿತಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದಲ್ಲಿ ಅದು ಇಲ್ಲಿನ ಎಲ್ಲಾ ಸಮುದಾಯವನ್ನು ಗೌರವಿಸಿದಂತಾಗುತ್ತದೆ. ನಮ್ಮ ಸಮಿತಿಯ ವೆಭ್ ಸೈಟ್ ಅತೀ ಶೀಘ್ರದಲ್ಲೇ ಲೋಕಾರ್ಪಣೆ ಲೋಕಾರ್ಪಣೆಗೊಳ್ಳಲಿದೆ. ಇಂದು ಸಮಿತಿಗೆ ಸರಿಯಾದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಇದೇ ರೀತಿ ಮುಂದೆ ನಮ್ಮ ಸಮಿತಿಯ ಸುವರ್ಣ ಮಹೋತ್ಸವದ ಕಾರ್ಯಾಧ್ಯಕ್ಷರನ್ನಾ ಸೂಕ್ತ ವ್ಯಕ್ತಿಯನ್ನೇ ನಾವೆಲ್ಲರೂ ಸೇರಿ ಆಯ್ಕೆ ಮಾಡೋಣ. ಈ ಸಲ ನಮ್ಮ ಸಮಿತಿಯು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದು ನಾವೆಲ್ಲರೂ ಸೇರಿ ಇದಕ್ಕೆ ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಬೇಕಾಗಿದೆ.
– ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಸಂಸ್ಥಾಪಕರು, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ
======
ಸಮಾಜ ನನಗೆ ಕೆಲಸ ಮಾಡಲು ಅವಕಾಶ ನೀಡಿದೆ. ಇಂದು ಮಾತನಾಡಿದ ಎಲ್ಲರೂ ಉತ್ತಮವಾದ ಸಲಹೆ ಸೂಚನೆ ನೀಡಿದ್ದಾರೆ. ಈ ಸಮಿತಿಯು ಎಲ್ಲಾ ಸಮುದಾಯದವರನ್ನು ಹೊಂದಿದೆ. ನಾನು ಈ ಸಮಿತಿಯಲ್ಲಿ ಮಾಡಿದ ಎಲ್ಲಾ ಕೆಲಸ ಇಂದು ಸಾರ್ಥಕವಾದಂತಿದೆ. ನಾನು ಈ ಸಮಿತಿಯ ಒಂಬತ್ತನೆಯ ಅಧ್ಯಕ್ಷನಾಗಿ ಅಧಿಕಾರವನ್ನು ವಹಿಸಿಕೊಳ್ಳುತ್ತಿದ್ದೇನೆ ಹಾಗೂ ಈ ಸಮಿತಿಯನ್ನು ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗಿ ಮುನ್ನಡೆಸುವ ಸರ್ವ ಪ್ರಯತ್ನವನ್ನು ಮಾಡುವೆನು. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಒಟ್ಟಾಗಿ ಇದ್ದು ಸಮಿತಿಯನ್ನು ಮುನ್ನಡೆಸಿ ನಮ್ಮ ಜಿಲ್ಲೆಗಳ ಅಭಿವೃದ್ಧಿಗಾಗಿ ದುಡಿಯೋಣ.
– ನಿತ್ಯಾನಂದ ಡಿ. ಕೋಟ್ಯಾನ್, ನೂತನ ಅಧ್ಯಕ್ಷರು, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ
====
ನೂತನ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗಾಗಿ ಉಭಯ ಜಿಲ್ಲೆಗಳ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರುವುದರೊಂದಿಗೆ ಜಿಲ್ಲೆಗಳ ಅಭಿವೃದ್ಧಿಗಾಗಿ ಕ್ರೀಯಾಶೀಲವಾರಿಗುವ ಮುಂಬಯಿಯಲ್ಲಿರುವ ಜಿಲ್ಲೆಗಳ ಎಲ್ಲಾ ಸಮುದಾಯಗಳ ಮುಖಂಡರನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ಹೆಸರಾಂತ ಸಂಘಟಕ, ಸಮಾಜ ಸೇವಕ, ಕನ್ನಡಾಭಿಮಾನಿ ನಿತ್ಯಾನಂದ ಡಿ ಕೋಟ್ಯಾನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅ. 26 ಸಾಕಿನಾಕ ಪೆನಿನ್ಸುಲ ಹೋಟೆಲ್ ನ ಸಭಾಗ್ರಹದಲ್ಲಿ ನಡೆದ ಸಮಿತಿಯ 24ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಅಧ್ಯಕ್ಷ ಎಲ್. ವಿ. ಅಮೀನ್ ಅವರ ಉಪಸ್ಥಿತಿಯಲ್ಲಿ ನಿತ್ಯಾನಂದ ಕೋಟ್ಯಾನ್ ಅವರ ಹೆಸರನ್ನು ಅಧ್ಯಕ್ಷ ಪದವಿಗೆ ಘೋಷಿಸಲಾಯಿತು.
ನಿತ್ಯಾನಂದ ಕೋಟ್ಯಾನ್ ಅವರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಲ್ಲಿ ಪ್ರಾರಂಭದಿಂದ ಸೇವಾ ನಿರತರಾಗಿದ್ದು, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿ, ಇದೀಗ ಅಧ್ಯಕ್ಷ ಪದವಿಯನ್ನು ಅಲಂಕರಿಸಿರುವರು.
ಬಿಲ್ಲವ ಸಮಾಜದ ಜನ ನಾಯಕ ದಿ. ಜಯ ಸುವರ್ಣ ಅವರ ನಿಕಟವರ್ತಿಯಾಗಿದ್ದ, ನಿತ್ಯಾನಂದ ಕೋಟ್ಯಾನ್ ಅವರು ಬಿಲ್ಲವರ ಎಸೋಸಿಯೇಶನ್ ಮುಂಬಯಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಮಾಜ ಭಾಂದವರ ಒಗ್ಗೂಡಿಸಿದ ಕೀರ್ತಿ ಇವರದ್ದು.
ವಿವಧ ಸಂಘಟನೆಗಳ್ಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಿತ್ಯಾನಂದ ಕೋಟ್ಯಾನ್ ಅವರು ಮುಂಬಯಿ ಕನ್ನಡಿಗರ ಪ್ರತಿಷ್ಟಿತ ಸಂಸ್ಥೆ ಗೊರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ಅಪಾರ ಸೇವೆಗೈದ್ದಿದ್ದಾರೆ.
ದೇಶದ ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕ್ ಭಾರತ್ ಬ್ಯಾಂಕ್ ನಲ್ಲಿ ಉನ್ನತ ಮಟ್ಟದ ಪದವಿಯಲ್ಲಿ, ಕೆಲವು ವರ್ಷ ಸೇವೆಗೈದು ಬ್ಯಾಂಕ್ ನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ್ದರು , ಪ್ರಸ್ತುತ ಭಾರತ್ ಬ್ಯಾಂಕ್ ನ ಬೋರ್ಡ್ ಅಪ್ ಮ್ಯಾನೇಜ್ಮೆಂಟ್ ನ ಸದಸ್ಯರಾಗಿರುವರು.
ಮುಂಬಯಿ ಹಾಗೂ ಊರಿನ ಧಾರ್ಮಿಕ, ಸಾಮಾಜಿಕ ಸಂಘಟನೆಗಳ್ಳಲ್ಲಿ ಕ್ರಿಯಾಶೀಲತರಾಗಿರುವ ನಿತ್ಯಾನಂದ ಕೋಟ್ಯಾನ್ ಸಮಾಜ ಸೇವೆಯಲ್ಲಿ ಅಪಾರ ಅನುಭವಹೊಂದಿದ್ದು, ಅವಿಭಜಿತ ಜಿಲ್ಲೆಯ ಅಭಿವೃದ್ಧಿಗಾಗಿ ಕಾರ್ಯವೆಸಗುತ್ತಿರುವ ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನೂತನ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಅವರ ಕಾರ್ಯವಧಿಯಲ್ಲಿ ಸಮಿತಿಯು ಹಮ್ಮಿಕೊಂಡ ಹಾಗೂ ಭವಿಷ್ಯದ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಕಾರ್ಯಗತಗೊಳ್ಳಲಿ.